ಮಂಜುನಾಥ್ ವಿ.ಆರ್ ನಿರ್ದೇಶನ, ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರುವ ಸ್ಟಾರ್ ಕನ್ನಡಿಗ ಚಿತ್ರದಲ್ಲಿ ಶಾಲಿನಿ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಪವನ್ ಪಾರ್ಥ ಸಂಗೀತ ನೀಡಿದ್ದಾರೆ.
ಸಿನಿಮಾ ಮಾಡಬೇಕು ಎಂದು ಪ್ರಯತ್ನ ಪಡುತ್ತಿರುವ ನಾಲ್ಕು ಜನ ಯುವಕರ ತಂಡಕ್ಕೆ ಒಬ್ಬ ಯುವತಿಯ ಪರಿಚಯವಾಗುತ್ತದೆ. ನಂತರ ಚಿತ್ರದ ನಾಯಕನ ಪ್ರೀತಿಯಲ್ಲಿ ಯುವತಿ ಬೀಳುತ್ತಾಳೆ..ಅಲ್ಲಿಂದ ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಕಥೆ.