ಸಪ್ಲೈಯರ್ ಶಂಕರ ಸಿನಿಮಾವನ್ನು ರಂಜಿತ್ ಸಿಂಗ್ ರಜಪೂತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಕೆರೋಡಿ ನಾಯಕನಾಗಿ ಹಾಗೂ ದೀಪಿಕಾ ಆರಾಧ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಡಿ ಪಡೀಲ್, ಜ್ಯೋತಿ ರೈ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸತೀಶ್ ಕುಮಾರ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿಯವರ ಕಲಾನಿರ್ದೇಶನ ಸಿನಿಮಾಗಿದೆ. ಈ ಚಿತ್ರವನ್ನು ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿದ್ದಾರೆ. ಇದೊಂದು ಬಾರ್ ಸಪ್ಲೈಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ.