ಉಡಾಳ ಸಿನಿಮಾವನ್ನು ಅಮೋಲ್ ಪಾಟೀಲ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ಹಾಗೂ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಸ್ಯ, ಪ್ರಣಯ ಮತ್ತು ಆಕ್ಷನ್ ಇರುವ ಈ ಸಿನಿಮಾದಲ್ಲಿ ಪೃಥ್ವಿ ಟೂರಿಸ್ಟ್ ಗೈಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉಡಾಳ ಸಿನಿಮಾವನ್ನು ಯೋಗರಾಜ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ಚೇತನ್ ಮತ್ತು ದಾವೆ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಆರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಶಿವಶಂಕರ ನೂರಂಬಡ ಛಾಯಾಗ್ರಹಣ ಚಿತ್ರಕ್ಕಿದೆ.
ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಇದಾಗಿದ್ದು, ಉತ್ತರ ಕರ್ನಾಕಟದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ 'ಉಡಾಳ' ಶಬ್ದವನ್ನೇ ಟೈಟಲ್ ಆಗಿ ಇಡಲಾಗಿದೆ.