ಉದಯಪ್ರಕಾಶ್ ನಿರ್ದೇಶಿಸಿ ನಿರ್ಮಾಣ ಮಾಡಿರುವ `ವರದ' ಚಿತ್ರದಲ್ಲಿ ವಿನೋದ್ ರಾಜಕುಮಾರ್ ನಾಯಕನಾಗಿ ನಟಿಸಿದ್ದಾರೆ. ಅಮಿತಾ ರಂಗನಾಥ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಚರಣರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಸ್ ಪ್ರದೀಪ್ ವರ್ಮಾ ಸಂಗೀತ, ವೆಂಕಿ ಯುಡಿವಿ ಸಂಕಲನವಿದೆ.
ಕಥೆ:
ತನ್ನ ತಂದೆ ಇನ್ನೊಂದು ಮದುವೆಗಾಗಿ ತನ್ನ ತಾಯಿಯನ್ನು ತೊರೆದಾಗ, ವರದ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಾನೆ. ಹಾಗೇ ತನ್ನ ತಂದೆಯ ಬಗ್ಗೆ ಅಪಾರ ದ್ವೇಷ ಹೊಂದುತ್ತಾ ಬೆಳೆಯುವ ವರದ ಸಮಾಜದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿರುವವರು ಮತ್ತು ಎರಡನೇ ಮದುವೆ ಆಗುವವರನ್ನು ಶಿಕ್ಷಿಸತೊಡುಗುತ್ತಾನೆ.