ವಸಂತಕಾಲದ ಹೂಗಳು ಸಿನಿಮಾವನ್ಮು ಸಚಿನ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಚಿನ್ ಗಂಗರಾಮ್ ನಾಯಕನಾಗಿ ಹಾಗೂ ರಾಧಾ ಭಗವತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್ ರೈ ಕುಕ್ಕರವಳ್ಳಿ, ಗುರುರಾಜ್ ಶೆಟ್ಟಿ, ಪವನ್ ಭಾರದ್ವಾಜ್, ನಂದೀಶ್ ಗನಚಾರಿ ತಾರಾಗಣದಲ್ಲಿದ್ದಾರೆ. ಭರತ್ ಜನಾರ್ಧನ್ ಸಂಗೀತ ಮತ್ತು ಶಿವಶಂಕರ್ ಛಾಯಾಗ್ರಹಣವಿದೆ. ಟಿನೇಜ್ ಪ್ರೇಮಕಥೆಯನ್ನೊಳಗೊಂಡ ಈ ಸಿನಿಮಾವನ್ನು ಅಶೋಕ್ ರಾಥೋಡ್ ನಿರ್ಮಿಸಿದ್ದಾರೆ.