ವೇಷ ಸಿನಿಮಾವನ್ನು ಕೃಷ್ಣ ನಾಡ್ಪಾಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ದೇವಾಡಿಗ ನಾಯಕನಾಗಿ ಮತ್ತು ನಿಧಿ ಮರೋಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸೌಖ್ಯ ಗೌಡ, ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪಾ ಕುಮಾಟ ಮುಂತಾದವರು ಫೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ್ ಸಾರಂಗ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾವನ್ನು ನಾಯಕ ರಾಘವೇಂದ್ರ ದೇವಾಡಿಗ ಅವರೇ ಹಂಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.