»   » ಬೆಸ್ಟ್ ಆಫ್ 2007 : 'ಮುಂಗಾರು ಮಳೆ' ಜಯಭೇರಿ

ಬೆಸ್ಟ್ ಆಫ್ 2007 : 'ಮುಂಗಾರು ಮಳೆ' ಜಯಭೇರಿ

Subscribe to Filmibeat Kannada


ದಟ್ಸ್‌ಕನ್ನಡ ಅಂತರ್ಜಾಲ ತಾಣ ನಡೆಸಿದ 'ಬೆಸ್ಟ್ ಆಫ್ 2007' ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ನಟಿ ಮತ್ತು ಅತ್ಯುತ್ತಮ ಚಿತ್ರ ಮೂರು ವಿಭಾಗದಲ್ಲಿ 'ಮುಂಗಾರು ಮಳೆ' ಮತ್ತೆ ಜಯಭೇರಿ ಬಾರಿಸಿದೆ. ಒಂದು ವರ್ಷ ದಾಟಿದರೂ ಮುಂಗಾರು ಮಳೆ ಜನಪ್ರಿಯತೆ ಕಳೆದುಕೊಂಡಿಲ್ಲದಿರುವುದಕ್ಕೆ ನೆಟ್ ಜಾಲಿಗಳ ಮತಗಳೇ ಸಾಕ್ಷಿ.

ಗೋಲ್ಡನ್ ಸ್ಟಾರ್ ಗಣೇಶ್ ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದರೆ, ಪೂಜಾ ಗಾಂಧಿ ಅತ್ಯುತ್ತಮ ನಟಿ ಮತ್ತು 'ಮುಂಗಾರು ಮಳೆ' ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

ದಟ್ಸ್‌ಕನ್ನಡ ನಡೆಸಿದ 'ಬೆಸ್ಟ್ ಆಫ್ 2007' ಸ್ಪರ್ಧೆಗೆ ನೆಟ್ಟಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಅಂತಿಮ ಹಂತದಲ್ಲಿ ಮುಂಗಾರು ಮಳೆಯ ಅಭಿನಯಕ್ಕಾಗಿ ಗಣೇಶ್ ಹೆಚ್ಚಿನ ಮತ ಗಳಿಸಿ ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಕಣದಲ್ಲಿ ಶಿವರಾಜಕುಮಾರ್, ವಿಜಯ್, ವಿಷ್ಣುವರ್ಧನ್, ಗಣೇಶ್ ಮತ್ತು ಪುನೀತ್ ರಾಜಕುಮಾರ್ ಉಳಿದಿದ್ದರು.

ನಟಿಯರ ವಿಭಾಗದಲ್ಲಿಯೂ ಪೂಜಾ ಗಾಂಧಿ, ಜೆನ್ನಿಫರ್ ಕೋತ್ವಾಲ್, ರಮ್ಯಾ, ಪಾರ್ವತಿ ಮೆಲ್ಟನ್ ಮತ್ತು ಡೈಸಿ ಬೋಪಣ್ಣ ಅಂತಿಮ ಹಂತ ತಲುಪಿದ್ದರು. ಎಲ್ಲರನ್ನು ಹಿಂದಿಕ್ಕಿ ಮನೋಜ್ಞ ಅಭಿನಯಕ್ಕಾಗಿ ಪೂಜಾ ಗಾಂಧಿ ಉತ್ತಮ ನಟಿಯಾಗಿ ಮತದಾರರಿಂದ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಚಿತ್ರಕ್ಕಾಗಿಯೂ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಯ ಸುತ್ತಿಗೆ ಯೋಗರಾಜ್ ಭಟ್ ಅವರ 'ಮುಂಗಾರು ಮಳೆ', ಸೂರಿ ನಿರ್ದೇಶನದ 'ದುನಿಯಾ', ನಾಗತಿಹಳ್ಳಿ ನಿರ್ದೇಶನದ 'ಮಾತಾಡ್ ಮಾತಾಡು ಮಲ್ಲಿಗೆ', ಪ್ರಕಾಶ್ ಅವರ 'ಮಿಲನ' ಮತ್ತು 'ಕಲಾ ಸಾಮ್ರಾಟ್' ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ' ತಲುಪಿದ್ದವು.

ಒಟ್ಟಿನಲ್ಲಿ ಹೇಳುವುದಾದರೆ ಪ್ರೇಕ್ಷಕರು ಮುಂಗಾರು ಮಳೆಯ ಗುಂಗಿನಿಂದ ಇನ್ನೂ ಹೊರಬಂದಿಲ್ಲ ಎನ್ನುವುದು ಈ ಫಲಿತಾಂಶಗಳಿಂದ ಸಾಬೀತಾಗಿದೆ. ನೆಟ್ಟಿಗರು 'ಮುಂಗಾರು ಮಳೆ'ಗೆ ತಮ್ಮ ಓಟುಗಳ ಸುರಿಮಳೆಯನ್ನೇ ಸುರಿಸಿದ್ದಾರೆ!

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada