»   » ದೀಪಕ್ ಅಭಿನಯದ ಬಾ ಬೇಗ ಚಂದಮಾಮ ಸಿದ್ಧ

ದೀಪಕ್ ಅಭಿನಯದ ಬಾ ಬೇಗ ಚಂದಮಾಮ ಸಿದ್ಧ

Subscribe to Filmibeat Kannada

ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ.. ಈ ಸುಮಧುರ ಗೀತೆಯ ಸ್ಪೂರ್ತಿಯಿಂದ ಪದ್ಮಲತಾ ಆರ್ಟ್ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ನಿರ್ಮಾಣದ ಚಿತ್ರಕ್ಕೆ ಬಾ ಬೇಗ ಚಂದಮಾಮ ಎಂಬ ಹೆಸರಿಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿ. ಅಂದುಕೊಂಡ ಹಾಗೆ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿರುವ ಈ ಚಿತ್ರಕ್ಕೆ ಪ್ರಥಮಪ್ರತಿ ಕೂಡ ಸಿದ್ದವಾಗಿ, ಸೆನ್ಸಾರ್ ಮುಂದೆ ಹಾಜರಾಗಿ ತೆರೆಯಮೇಲೆ ಬರಲು ಸಿದ್ಧವಾಗಿದೆ. ಚಿತ್ರಮಂದಿರದ ಹುಡುಕಾಟದಲ್ಲಿರುವ ಚಂದಮಾಮ ಚಿತ್ರಮಂದಿರ ಸಿಕ್ಕ ಕೂಡಲೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದಾನೆ ಎಂದು ನಿರ್ಮಾಪಕರಾದ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನಟಿ ಸುಧಾರಾಣಿ ಅವರ ಸಹೋದರ,ಕಂಠದಾನ ಕಲಾವಿದ ಬಿ.ಎಚ್.ಮುರುಳಿ ನಿರ್ದೇಶನದ ಪ್ರಥಮ ಚಿತ್ರ ಬಾ ಬೇಗ ಚಂದಮಾಮ. ನಿರ್ದೇಶಕರೇ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತವನ್ನೂ ಸಂಯೋಜಿಸಿದ್ದಾರೆ. ಮಂಜು ಮಾಂಡವ್ಯ ಸಂಭಾಷಣೆ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ನಂಜುಂಡಸ್ವಾಮಿ ಕಲೆ, ಡಿಫ‌ರೆಂಟ್ ಡ್ಯಾನಿ ಸಾಹಸ, ರುದ್ರೇಶ್ ಎಂ ಗೌಡ ಸಹನಿರ್ದೇಶನ, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಮುರಳಿ ಗೀತರಚನೆ, ಅನಿಲ್‌ಕುಮಾರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ದೀಪಕ್, ಸುಹಾಸಿನಿ, ಅವಿನಾಶ್, ಚಿತ್ರಾಶೆಣೈ, ವನಿತಾವಾಸು, ಮಿಮಿಕ್ರಿದಯಾನಂದ್, ಬ್ಯಾಂಕ್‌ಜನಾರ್ಧನ್, ಅಪೂರ್ವ, ಪ್ರಸನ್ನ, ಮಧುಹೆಗ್ಡೆ, ಬುಲೆಟ್‌ಪ್ರಕಾಶ್, ಶ್ರೀನಿವಾಸಗೌಡ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada