For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ಎನ್ನುವುದು 'ಬ್ರಹ್ಮಾಸ್ತ್ರ', ನಿರ್ಮಾಪಕರೇ ಎಚ್ಚರ: ಜಗ್ಗೇಶ್

  By Bharath Kumar
  |

  ಕಳೆದ ಎರಡ್ಮೂರು ದಿನಗಳಿಂದ ನಟಿ ಅವಂತಿಕಾ ಶೆಟ್ಟಿ ಹಾಗೂ ನಿರ್ಮಾಪಕ ಸುರೇಶ್ ಅವರ ನಡುವಿನ ಜಗಳ ಸ್ಯಾಂಡಲ್ ವುಡ್ ನ ಹಾಟ್ ಟಾಪಿಕ್ ಆಗಿದೆ. ಈ ವಿವಾದದ ನಂತರ ನವರಸ ನಾಯಕ ಜಗ್ಗೇಶ್ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

  ನಟಿ ಅವಂತಿಕಾ ಶೂಟಿಂಗ್ ಗೆ ಸರಿಯಾಗಿ ಬರಲ್ಲ, ಬಂದ್ರು ಸೆಟ್ ನಲ್ಲಿ ಕಿರಿಕ್ ಮಾಡಿಕೊಳ್ತಾರೆ, ಅವರಿಂದ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿದೆ ಎಂದು ನಿರ್ಮಾಪಕರು ಆರೋಪಿಸಿದ್ರೆ, ಮತ್ತೊಂದೆಡೆ ಅವಂತಿಕಾ, ನಿರ್ಮಾಪಕ ಸುರೇಶ್ ಅವರು ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ, ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಪ್ರತ್ಯಾರೋಪವನ್ನೇ ಮಾಡಿದ್ದರು.[ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ]

  ಇವರಿಬ್ಬರ ಜಗಳಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸ್ಪಂದಿಸಿದ್ದು, ಇಬ್ಬರನ್ನ ಕರೆಯಿಸಿ ಮಾತುಕತೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದ್ರು. ಈ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಜಗ್ಗೇಶ್, ಕನ್ನಡ ನಿರ್ಮಾಪಕರಿಗೆ ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ. ಹಾಗಾದ್ರೆ, ಈ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಅವರು ಏನಂದ್ರು ಅಂತ. ಮುಂದೆ ಓದಿ....

  ನಿರ್ಮಾಪಕರೇ ಜಾಗೃತರಾಗಿರಿ

  ನಿರ್ಮಾಪಕರೇ ಜಾಗೃತರಾಗಿರಿ

  ''ನಿರ್ಮಾಪಕರ ಸಂಘ, ನಟ ನಟಿ ತಂತ್ರಜ್ಞರ ಕಾರ್ಯವನ್ನ ಒಪ್ಪಂದ ಪತ್ರದಲ್ಲಿ ಉಲ್ಲೇಖಿಸಿ ಸಹಿ ಪಡೆದು ಮುಂದುವರೆಯಿರಿ. ಬಾಯಿ ಮಾತಿನ ಒಪ್ಪಂದ ಮುಳುವಾಗಿ ಅಪಾಧನೆಗೆ ಬಲಿಯಾಗುವಿರಿ''-ಜಗ್ಗೇಶ್, ನಟ ['ರಂಗಿತರಂಗ' ನಟಿ ಆವಂತಿಕಾ ವಿರುದ್ಧ ಕೇಳಿ ಬಂದ ಆರೋಪಗಳು ನಿಜವೇ?]

  ಲೈಂಗಿಕ ಕಿರುಕುಳ ಬ್ರಹ್ಮಾಸ್ತ್ರವಾಗಿದೆ

  ಲೈಂಗಿಕ ಕಿರುಕುಳ ಬ್ರಹ್ಮಾಸ್ತ್ರವಾಗಿದೆ

  ''ಇತ್ತೀಚಿಗೆ ಲೈಂಗಿಕ ಕಿರುಕುಳ ಎನ್ನುವುದು ಬ್ರಹ್ಮಾಸ್ತ್ರವಾಗಿ ಉದ್ಯೋಗವಾಗಿದೆ. ಇವರ ಸಂಖ್ಯೆ ಕಮ್ಮಿ ಆದ್ರು ಸೌಂಡ್ ಜಾಸ್ತಿ'' -ಜಗ್ಗೇಶ್, ನಟ [ಸುರೇಶ್ ಮೇಲೆ ಅವಂತಿಕಾ ಆರೋಪ: ನಟ ಗುರುನಂದನ್ ಹೇಳಿದ್ದೇನು?]

  ಕನ್ನಡ ನಿರ್ಮಾಪಕರ ದೌರ್ಭಾಗ್ಯ.!

  ಕನ್ನಡ ನಿರ್ಮಾಪಕರ ದೌರ್ಭಾಗ್ಯ.!

  ''ಕನ್ನಡ ನಿರ್ಮಾಪಕರ ದೌರ್ಭಾಗ್ಯವಿದು. ಕಾಸು ಹಾಕಿ ಅಪ ಪ್ರಚಾರಕ್ಕು ಬಲಿಯಾಗುತ್ತಾರೆ. ಅದು ಲೈಂಗಿಕ ಕಿರುಕುಳ ಅಂದುಬಿಟ್ಟರೆ, ಅವಲೋಕಿಸದೆ ನಂಬುವ ಸಮಾಜ ಇದು. ಹೇಗಿರಬೇಡ ಅಮಾಯಕರ ಪರಿಸ್ಥಿತಿ ಪಾಪ'' ಜಗ್ಗೇಶ್, ನಟ [ಕನ್ನಡಿಗರನ್ನ ಕೆಣಕಿದ ವರ್ಮಾಗೆ ಚಾಟಿ ಏಟು ಕೊಟ್ಟ ನಟ ಜಗ್ಗೇಶ್]

  ಸುರೇಶ್ ಬಗ್ಗೆ ಗೌರವಿದೆ

  ಸುರೇಶ್ ಬಗ್ಗೆ ಗೌರವಿದೆ

  ''ನಿಮ್ಮ ಬಗ್ಗೆ ಉಧ್ಯಮದಲ್ಲಿ ಎಲ್ಲರಿಗು ಗೌರವವಿದೆ, ದೇವರಿದ್ದಾನೆ. ಬಂದದ್ದೆಲ್ಲಾ ಬರಲಿ, ದೇವರಿಗೆ ತಪ್ಪಲಿಲ್ಲಾ ದೋಷ ಅಂದ ಮೇಲೆ ಮನುಷ್ಯ ಯಾವಲೆಕ್ಕ. ಆತ್ಮಸಾಕ್ಷಿ ಸರಿ ಇದ್ರೆ ಸಾಕು''-ಜಗ್ಗೇಶ್, ನಟ

  ಸುರೇಶ್ ಒಳ್ಳೆಯ ನಿರ್ಮಾಪಕ

  ಸುರೇಶ್ ಒಳ್ಳೆಯ ನಿರ್ಮಾಪಕ

  ''ಸಿನಿಮಾ ತುಂಬ ಪ್ರೀತಿಸುವ ಮನುಷ್ಯ. ಸಿನಿಮಾಗಾಗಿ ರಾಜಿ ಆಗದ ಗುಣ. ಮಾಡಿದ ಎಲ್ಲಾ ಚಿತ್ರ ಯಶಸ್ವಿ. ಮೃದುಸ್ವಭಾವ. ವೈಯಕ್ತಿಕವಾಗಿ ಬಲ್ಲೆ. ದೃತಿಗೆಡದೆ ಮುನ್ನುಗ್ಗಿ. ದೇವರಿದ್ದಾನೆ''-ಜಗ್ಗೇಶ್, ನಟ

  English summary
  Kannada Actor Jaggesh has taken his twitter account to express their Displeasure About Kannada Actress Avantika and Producer Suresh Controversy. Check out the Series of tweets by Jaggesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X