»   » ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ

ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ

Posted By:
Subscribe to Filmibeat Kannada

''ನಟಿ ಅವಂತಿಕಾ ಶೆಟ್ಟಿ ಚಿತ್ರೀಕರಣಕ್ಕೆ ಸರಿಯಾಗಿ ಬರ್ತಿಲ್ಲ. ಚಿತ್ರತಂಡದ ಜೊತೆ ಕಿರಿಕ್ ಮಾಡ್ತಾರೆ. ಬಾಯ್ ಫ್ರೆಂಡ್ ಜೊತೆ ಸುತ್ತಾಡ್ತಾರೆ'' ಹಾಗೆ, ಹೀಗೆ ಎಂದು 'ಕನ್ನಡ ಮೀಡಿಯಂ ರಾಜು' ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ಇತ್ತೀಚೆಗಷ್ಟೇ ಆರೋಪಗಳನ್ನ ಮಾಡಿದ್ದರು.

ಆದ್ರೀಗ, ನಿರ್ಮಾಪಕರ ಆರೋಪಗಳಿಗೆ ನಟಿ ಅವಂತಿಕಾ ಶೆಟ್ಟಿ ಪ್ರತ್ಯಾರೋಪ ಮಾಡಿದ್ದು, ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪವೆಸಗಿದ್ದಾರೆ.

ನಿರ್ಮಾಪಕ ಸುರೇಶ್ ಹಾಗೂ ಚಿತ್ರತಂಡ ಕೆಲವು ಸದಸ್ಯರಿಂದ ತಮಗೆ ಏನೆಲ್ಲಾ ತೊಂದರೆಗಳು ಆಗಿವೆ ಎಂದು ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಅಕೌಂಟ್ ನಲ್ಲಿ ಅವಂತಿಕಾ ಶೆಟ್ಟಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.

ಹಾಗಾದ್ರೆ, ನಟಿ ಅವಂತಿಕಾ ಹಾಗೂ ನಿರ್ಮಾಪಕರ ನಡುವಿನ ಈ ವಿವಾದವೇನು ಎಂದು ಮುಂದೆ ನೋಡಿ......

ಆರೋಪಗಳೆಲ್ಲ ಸುಳ್ಳು!

'ಕನ್ನಡ ಮೀಡಿಯಂ ರಾಜು' ಚಿತ್ರದ ನಿರ್ಮಾಪಕ ಕೆ.ಎ ಸುರೇಶ್ ಅವರು ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ನಟಿ ಅವಂತಿಕಾ ಶೆಟ್ಟಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.

'ಕಾಸ್ಟ್ಯೂಮ್' ವ್ಯಕ್ತಿಯಿಂದ ಲೈಂಗಿಕ ಕಿರುಕುಳ

''ಶೂಟಿಂಗ್ ಸೆಟ್ ನಲ್ಲಿ ಲೈಟ್ ಬಾಯ್, ಕಾಸ್ಟ್ಯೂಮರ್ ಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಮೈಕ್ ಹಾಕುವ ವೇಳೆ, ಕಾಸ್ಟ್ಯೂಮ್ ಚೆಕ್ ಮಾಡುವ ವೇಳೆ ಮೈ ಮುಟ್ಟುತ್ತಾರೆ. ನನ್ನನ್ನು ಗೇಲಿ ಮಾಡುತ್ತಾರೆ'' - ಅವಂತಿಕಾ ಶೆಟ್ಟಿ, ನಟಿ

ರೂಂಗೆ ಕರೆದ್ರಂತೆ ನಿರ್ಮಾಪಕರು!

''ನಿರ್ಮಾಪಕರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಎಲ್ಲರ ಹತ್ರನೂ ಕ್ಲೋಸ್ ಆಗಿ ಇರಬೇಕು, ಅಡ್ಜೆಸ್ಟ್ ಮಾಡ್ಕೋಬೇಕು ಎಂದು ಮಾನಸಿಕ ಹಿಂಸೆ ನೀಡಿದ್ದಾರೆ. ಪರೋಕ್ಷವಾಗಿ ರೂಂಗೆ ಕರೆದಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ.

ಚಿತ್ರದ 99ರಷ್ಟು ಶೂಟಿಂಗ್ ಮಾಡಿದ್ದೀನಿ

''ನಾನು ಬೇರೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದೇ, ಡೇಟ್ ಸಮಸ್ಯೆಯಾಗಬಾರದು ಎಂದು ಫಸ್ಟ್ ಶೆಡ್ಯೂಲ್ ನಲ್ಲಿ ರಾತ್ರಿ ಹಗಲು ಚಿತ್ರೀಕರಣ ಮಾಡಿದ್ದೀವಿ. 'ಕನ್ನಡ ಮೀಡಿಯಂ ರಾಜು' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದೀನಿ. ಒಂದು ಅಥವಾ ಎರಡು ಸೀನ್ ಬಾಕಿ ಇರಬಹುದು ಅಷ್ಟೇ. ಆದ್ರೆ, ಅವರು ಹೇಳುವ ಹಾಗೆ ನಾನು ಚಿತ್ರದಿಂದ ಹೊರ ಹೋಗಿಲ್ಲ. ಅವರೇ ಕಳುಹಿಸಿದ್ದಾರೆ''- ಅವಂತಿಕಾ ಶೆಟ್ಟಿ, ನಟಿ

ತುಂಡು ಬಟ್ಟೆ ಹಾಕ್ಬೇಕಂತೆ!

''ಈ ಚಿತ್ರವನ್ನ ಒಪ್ಪಿಕೊಂಡಾಗ ಮೊದಲೇ ಅಗ್ರಿಮೆಂಟ್ ಹಾಕಿದ್ವಿ. ನನಗೆ ಮುಜುಗರ ಅಗುವಂತಹ ಬಟ್ಟೆ ಹಾಕಲ್ಲ ಅಂತ. ಆದ್ರೆ, ಚಿತ್ರದಲ್ಲಿ ತುಂಡು ಬಟ್ಟೆಗಳನ್ನ ಹೆಚ್ಚು ನೀಡಲಾಗಿತ್ತು. ನಾನು ಹಾಕಲ್ಲ ಎಂದರೂ, ಬಲವಂತ ಮಾಡುತ್ತಿದ್ದರು''- ಅವಂತಿಕಾ ಶೆಟ್ಟಿ

ಚೆಕ್ ಬೌನ್ಸ್ ಆಗಿತ್ತು!

''ಇನ್ನು ನನಗೆ ಬರಬೇಕಾಗಿರುವ ಸಂಭಾವನೆ ಕೂಡ ನಿರ್ಮಾಪಕರು ಪೂರ್ತಿ ನೀಡಿಲ್ಲ. ಕೇಳಿದ್ರೆ, ಯಾವುದೇ ರೆಸ್ಪಾನ್ಸ್ ಕೊಡಲ್ಲ. ಈ ಸಂಬಂಧ ಕೋರ್ಟ್ ನಿಂದ ನೋಟಿಸ್ ಕೂಡ ನೀಡಲಾಗಿತ್ತು''- ಅವಂತಿಕಾ ಶೆಟ್ಟಿ, ನಟಿ

ಫಿಲ್ಮಂ ಚೇಂಬರ್ ಗೆ ದೂರು ನೀಡಿದ್ದೆ!

ಕನ್ನಡ ಮೀಡಿಯಂ ರಾಜು ಚಿತ್ರದ ಸಂಭಾವನೆ ವಿಚಾರ ಹಾಗೂ ನಿರ್ಮಾಪಕರಿಂದ ಆಗುತ್ತಿದ್ದ ದೌರ್ಜನ್ಯ ಕುರಿತು ಏಪ್ರಿಲ್ 12 ರಂದು ಕರ್ನಾಟಕ ವಾಣಿಜ್ಯ ಮಂಡಳಿಗೆ ಪೋಸ್ಟ್ ಮೂಲಕ ದೂರು ನೀಡಿದ್ದೆ. ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ''- ಅವಂತಿಕಾ ಶೆಟ್ಟಿ, ನಟಿ

ನಿರ್ಮಾಪಕರು ಏನ್ ಹೇಳ್ತಾರೆ!

ಇದಕ್ಕೂ ಮುಂಚೆ ನಟಿ ಅವಂತಿಕಾ ಅವರ ಮೇಲೆ ಆರೋಪಗಳನ್ನ ಮಾಡಿದ್ದ ನಿರ್ಮಾಪಕ ಕೆ.ಎ ಸುರೇಶ್, ಈಗ ಆವಂತಿಕಾ ಅವರ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ತಳ್ಳಿ ಹಾಕಿದ್ದಾರೆ.

ಚಿತ್ರದ ನಿರ್ದೇಶಕರು ಏನ್ ಹೇಳ್ತಾರೆ?

''ಅವಂತಿಕಾ ಹಾಗೂ ಸುರೇಶ್ ಅವರ ಮಧ್ಯೆ ಮನಸ್ತಾಪ ಇರುವುದು ನಿಜಾ. ಸಂಭಾವನೆ ವಿಚಾರ ಹಾಗೂ ಆವಂತಿಕಾ ಅವರಿಗೆ ನೀಡಲಾಗಿರುವ ಸೌಲಭ್ಯಗಳ ಕುರಿತು ಸಮಸ್ಯೆ ಆಗಿತ್ತು. ಇದನ್ನ ಬಿಟ್ಟು ಏನೂ ಗೊತ್ತಿಲ್ಲ. ಇಬ್ಬರ ಮಧ್ಯೆ ಸಂಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟೆ, ಆದ್ರೆ, ಸಾಧ್ಯವಾಗಿಲ್ಲ''- ನರೇಶ್ ಕುಮಾರ್, ನಿರ್ದೇಶಕ

ಸಾ ರಾ ಗೋವಿಂದು ಏನ್ ಹೇಳ್ತಾರೆ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಅವರು, ''ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಈಗಲೇ ನೋಡುತ್ತಿದ್ದೇನೆ. ಅವಂತಿಕಾ ನೀಡಿರುವ ದೂರಿನ ಪ್ರತಿ ನಮ್ಮ ಕೈಗೆ ಸೇರಿಲ್ಲ. ಇಬ್ಬರು ಫಿಲ್ಮ್ ಚೇಂಬರ್ ಗೆ ಕರೆಯಿಸಿ ಮಾತನಾಡಿಸುತ್ತೇನೆ. ಅವರ ಸಮಸ್ಯೆ ಬಗೆಹರಿಸುತ್ತೇವೆ'' ಎಂದು ಆಶ್ವಾಸನೆ ನೀಡಿದ್ದಾರೆ.

ಇದಕ್ಕೂ ಮುಂಚೆ ನಟಿ ಅವಂತಿಕಾ ಶೆಟ್ಟಿ ಅವರ ವಿರುದ್ಧ ನಿರ್ಮಾಪಕರು ಮಾಡಿದ ಆರೋಪಗಳು ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ['ರಂಗಿತರಂಗ' ನಟಿ ಆವಂತಿಕಾ ವಿರುದ್ಧ ಕೇಳಿ ಬಂದ ಆರೋಪಗಳು ನಿಜವೇ?]

English summary
Kannada Actress Avanthika Shetty Allegations Against Kannada Producer KA Suresh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada