For Quick Alerts
  ALLOW NOTIFICATIONS  
  For Daily Alerts

  'ರಂಗಿತರಂಗ' ನಟಿ ಆವಂತಿಕಾ ವಿರುದ್ಧ ಕೇಳಿ ಬಂದ ಆರೋಪಗಳು ನಿಜವೇ?

  By Bharath Kumar
  |

  ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಕೆಲವು ನಾಯಕಿಯರ ಟೈಮ್ ಸರಿಯಿಲ್ಲ ಎಂದು ಕಾಣುತ್ತೆ. ಏನೋ ಮಾಡಲು ಹೋಗಿ ಅದೇನೋ ಆಗಿಬಿಡುತ್ತೆ. ಈಗ ಅಂತಹದ್ದೇ ಘಟನೆ ಒಂದು 'ಕನ್ನಡ ಮೀಡಿಯಂ ರಾಜು' ಸೆಟ್ ನಲ್ಲಿ ನಡೆದಿದೆಯಂತೆ.

  ಈ ಘಟನೆ ಏನು ಎಂದು ಹೇಳುವುದಕ್ಕೂ ಮುಂಚೆ ಈ ಚಿತ್ರದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. 'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರ 'ಕನ್ನಡ ಮೀಡಿಯಂ ರಾಜು'. ಈ ಚಿತ್ರಕ್ಕೆ 'ರಂಗಿತರಂಗ' ಖ್ಯಾತಿಯ ಆವಂತಿಕಾ ಶೆಟ್ಟಿ ನಾಯಕಿ. 'ಫಸ್ಟ್ Rank ರಾಜು' ಚಿತ್ರವನ್ನ ನಿರ್ದೇಶನ ಮಾಡಿದ್ದ ನರೇಶ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರವನ್ನ ನಿರ್ಮಾಣ ಮಾಡಿದ್ದ ಕೆ.ಎ.ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.[100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?]

  ವಿಷ್ಯ ಏನಪ್ಪಾ ಅಂದ್ರೆ, ನಟಿ ಆವಂತಿಕಾ ಶೆಟ್ಟಿ ಮತ್ತು ನಿರ್ಮಾಪಕರ ಮಧ್ಯೆ ಕಿರಿಕ್ ಆಗಿದ್ದು, 'ಕನ್ನಡ ಮೀಡಿಯಂ ರಾಜು' ಚಿತ್ರದಿಂದ ನಟಿಗೆ ಕೋಕ್ ಕೊಟ್ಟಿದ್ದಾರಂತೆ. ಅಷ್ಟಕ್ಕೂ, ಏನಾಯ್ತು? ಮುಂದೆ ಓದಿ......

  ಶೂಟಿಂಗ್ ಗೆ ಸರಿಯಾಗಿ ಬರ್ತಿಲ್ವಂತೆ.!

  ಶೂಟಿಂಗ್ ಗೆ ಸರಿಯಾಗಿ ಬರ್ತಿಲ್ವಂತೆ.!

  'ಕನ್ನಡ ಮೀಡಿಯಂ ರಾಜು' ಚಿತ್ರಕ್ಕಾಗಿ 40 ದಿನಗಳ ಕಾಲ್ ಶೀಟ್ ಕೊಟ್ಟಿರುವ ನಟಿ ಆವಂತಿಕಾ ಶೆಟ್ಟಿ ಸರಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲವಂತೆ. ಕೇವಲ 15 ದಿನ ಮಾತ್ರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ.[ಗುರುನಂದನ್ ಜೊತೆ ನಟಿಸಲು ರಷ್ಯಾದಿಂದ ಬಂದ ರೂಪದರ್ಶಿ!]

  ಚಿತ್ರೀಕರಣದ ವೇಳೆ ಗಲಾಟೆ.!

  ಚಿತ್ರೀಕರಣದ ವೇಳೆ ಗಲಾಟೆ.!

  ಸರಿಯಾಗಿ ಚಿತ್ರೀಕರಣಕ್ಕೆ ಬಂದರೂ, ಚಿತ್ರತಂಡದ ಜೊತೆ ಸದಾ ಒಂದಲ್ಲ ಒಂದು ವಿಷ್ಯಕ್ಕೆ ಜಗಳ ಮಾಡಿಕೊಳ್ಳುತ್ತಾರಂತೆ. ಚಿತ್ರದ ಸೆಟ್ ನಲ್ಲಿ ಯಾರೊಂದಿಗೆ ನಟಿ ಆವಂತಿಕಾ ಚೆನ್ನಾಗಿಲ್ವಂತೆ.

  ಇಮ್ರಾನ್ ಮಾಸ್ಟರ್ ಜೊತೆ ಕಿರಿಕ್.!

  ಇಮ್ರಾನ್ ಮಾಸ್ಟರ್ ಜೊತೆ ಕಿರಿಕ್.!

  ಇನ್ನು ಚಿತ್ರದ ಎರಡು ಹಾಡುಗಳನ್ನ ಇಮ್ರಾನ್ ಸರ್ದಾರಿಯಾ ಅವರು ಕೊರಿಯೋಗ್ರಫಿ ಮಾಡಬೇಕಿತ್ತಂತೆ. ಆದ್ರೆ, ಆವಂತಿಕಾ ಅವರ ಕಿರಿಕಿರಿಗೆ ಇಮ್ರಾನ್ ಮಾಸ್ಟರ್ 'ನನ್ನಿಂದ ಕೊರಿಯೋಗ್ರಫಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾರಂತೆ.

  ಹೋಟೆಲ್ ಬಿಲ್ಲು ಜಾಸ್ತಿ ಅಂತೆ.!

  ಹೋಟೆಲ್ ಬಿಲ್ಲು ಜಾಸ್ತಿ ಅಂತೆ.!

  ಚಿತ್ರೀಕರಣ ಬಿಟ್ಟರೇ, ಹೋಟೆಲ್ ವಿಚಾರದಲ್ಲೂ ನಿರ್ಮಾಪಕ ಮತ್ತು ನಟಿಯ ನಡುವೆ ಮನಸ್ತಾಪ ಬಂದಿದೆಯಂತೆ. ಬೆಂಗಳೂರಿನ ಐಷಾರಾಮಿ ಹೋಟೆಲ್ ನಲ್ಲಿ ಆವಂತಿಕಾ ಅವರಿಗೆ ಇರಲು ರೂಂ ಮಾಡಲಾಗಿದೆಯಂತೆ. ಆದ್ರೆ, ಅಲ್ಲಿ ನಿರೀಕ್ಷೆಗೆ ಮೀರಿದ ಬಿಲ್ ಮಾಡಿದ್ದಾರಂತೆ.

  ಬಾಯ್ ಫ್ರೆಂಡ್ ತೊಂದರೆ ಅಂತೆ.!

  ಬಾಯ್ ಫ್ರೆಂಡ್ ತೊಂದರೆ ಅಂತೆ.!

  ಈ ಎಲ್ಲ ಗಲಾಟೆಗಳಿಗೂ ಆವಂತಿಕಾ ಶೆಟ್ಟಿ ಅವರ ಬಾಯ್ ಫ್ರೆಂಡ್ ಕಾರಣವೆಂದು ಹೇಳಲಾಗ್ತಿದೆ. ಹೋಟೆಲ್ ನಲ್ಲಿ ಬಿಲ್ ಹೆಚ್ಚಾಗಲು, ಚಿತ್ರೀಕರಣಕ್ಕೆ ಲೇಟ್ ಆಗಿ ಬರಲು, ಮತ್ತು ಚಿತ್ರೀಕರಣಕ್ಕೆ ಬಂದರೂ ಅಲ್ಲಿಯವರ ಜೊತೆ ಜಗಳವಾಡಲು ಮುಂಬೈ ಮೂಲದ ಬಾಯ್ ಫ್ರೆಂಡ್ ಕಾರಣ ಎನ್ನಲಾಗುತ್ತಿದೆ.

  ಆವಂತಿಕಾ ಹೇಳೋದು ಬೇರೆ.!

  ಆವಂತಿಕಾ ಹೇಳೋದು ಬೇರೆ.!

  ಆದ್ರೆ, ಇಷ್ಟೆಲ್ಲಾ ಆರೋಪಗಳನ್ನ ತಳ್ಳಿ ಹಾಕುವ ಆವಂತಿಕಾ ಶೆಟ್ಟಿ, 'ರಾಜರಥ' ಚಿತ್ರದಲ್ಲಿ ಅಭಿನಯಿಸುತ್ತಿರುವುದರಿಂದ ಡೇಟ್ ಸಮಸ್ಯೆಯಾಗುತ್ತೆ ಎಂದು ಮೊದಲೇ ಹೇಳಿದ್ದೆ, ನಿರ್ಮಾಪಕರು ಒಪ್ಪಿಕೊಂಡಿದ್ದರು. ಮುಂಬೈಯಿಂದ ನನ್ನ ಜೊತೆ ಒಬ್ಬರು ಬರುತ್ತಾರೆ ಎಂದು ಕೂಡ ಮೊದಲೇ ಹೇಳಿದ್ದೆ. ಚಿತ್ರದಲ್ಲಿ ಮುಜುಗರ ಪಡುವಂತಹ ತುಂಡು ಉಡುಗೆಗಳನ್ನ ಹಾಕಿಸುತ್ತಾರೆ. ಸಂಭಾವನೆ ಇನ್ನು ಬಾಕಿಯಿದೆ. 99 ರಷ್ಟು ಶೂಟಿಂಗ್ ಮುಗಿದಿದೆ ಎಂದು ನಿರ್ಮಾಪಕರ ಮೇಲೆ ಪ್ರತ್ಯಾರೋಪ ಮಾಡುತ್ತಾರೆ.

  ಚಿತ್ರದಿಂದ ಆವಂತಿಕಾಗೆ ಕೋಕ್!

  ಚಿತ್ರದಿಂದ ಆವಂತಿಕಾಗೆ ಕೋಕ್!

  ಸದ್ಯದ ಮೂಲಗಳ ಪ್ರಕಾರ, ಆವಂತಿಕಾ ಶೆಟ್ಟಿ ಅವರನ್ನ ಚಿತ್ರದಿಂದ ಕೈ ಬಿಡಲಾಗಿದೆಯಂತೆ. ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

  'ಕನ್ನಡ ಮೀಡಿಯಂ ರಾಜು' ಕಥೆ ಮುಂದೇನು?

  'ಕನ್ನಡ ಮೀಡಿಯಂ ರಾಜು' ಕಥೆ ಮುಂದೇನು?

  ನಾಯಕಿ ಹಾಗೂ ನಿರ್ಮಾಪಕರ ನಡುವಿನ ಈ ಕಿರಿಕ್ ನಿಂದ 'ಕನ್ನಡ ಮೀಡಿಯಂ ರಾಜು'ಗೆ ತೊಂದರೆಯಾಗಿದೆ. ಮುಂದೇನು ಎಂಬುದು ಕಾಡುತ್ತಿದೆ. ನಾಯಕಿ ಹಾಗೂ ನಿರ್ಮಾಪಕ ಮನವೊಲಿಸಿ ಚಿತ್ರೀಕರಣ ಕಂಪ್ಲೀಟ್ ಮಾಡ್ತಾರ ಅಥವಾ ನಾಯಕಿಯನ್ನ ಬದಲಾಯಿಸಿ ಸಿನಿಮಾ ಮುಗಿಸ್ತಾರ ಎಂಬುದು ಕಾದುನೋಡಬೇಕು.

  English summary
  Read the Article to know the Allegations against Kannada Actress Avantika Shetty Fame of Rangitaranga in New Movie Kannada Medium Raju. The Movie Directed By Naresh Kumar and Produced by KA Suresh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X