»   » ಸುರೇಶ್ ಮೇಲೆ ಅವಂತಿಕಾ ಆರೋಪ: ನಟ ಗುರುನಂದನ್ ಹೇಳಿದ್ದೇನು?

ಸುರೇಶ್ ಮೇಲೆ ಅವಂತಿಕಾ ಆರೋಪ: ನಟ ಗುರುನಂದನ್ ಹೇಳಿದ್ದೇನು?

Posted By:
Subscribe to Filmibeat Kannada

'ರಂಗಿತರಂಗ' ಖ್ಯಾತಿಯ ನಟಿ ಅವಂತಿಕಾ ಶೆಟ್ಟಿ 'ಕನ್ನಡ ಮೀಡಿಯಂ ರಾಜು' ಚಿತ್ರದ ನಿರ್ಮಾಪಕರ ಜೊತೆ ಕಿರಿಕ್ ಮಾಡಿಕೊಂಡು ಚಿತ್ರೀಕರಣದಿಂದ ಗೇಟ್ ಪಾಸ್ ಪಡೆದಿದ್ದಾರೆ. ನಿರ್ಮಾಪಕ ಕೆ.ಎ.ಸುರೇಶ್ ಆರೋಪಕ್ಕೆ ತಿರುಗು ಬಾಣ ಬಿಟ್ಟಿದ್ದ ನಟಿ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದು, ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.[ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ]

ಈ ವಿವಾದದ ಹಿನ್ನೆಲೆಯಲ್ಲಿ ಅವಂತಿಕಾ ಶೆಟ್ಟಿಗೆ ಕೋಕ್ ನೀಡಿರುವ ಚಿತ್ರತಂಡ ಮತ್ತೆ ಸಂಧಾನ ಕಾರ್ಯದಿಂದ 'ಕನ್ನಡ ಮೀಡಿಯಂ ರಾಜು' ಚಿತ್ರೀಕರಣ ಕಂಪ್ಲೀಟ್ ಮಾಡುತ್ತಾ ಅಥವಾ ನಾಯಕಿಯನ್ನ ಬದಲಾಯಿಸಿ ಸಿನಿಮಾ ಮಾಡ್ತಾರಾ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದ ನಾಯಕ ನಟ ಗುರುನಂದನ್, ಅವಂತಿಕಾ ಶೆಟ್ಟಿ ರವರು ಕೆ.ಎ.ಸುರೇಶ್ ಮೇಲೆ ಮಾಡಿರುವ ಆರೋಪ ಕೇಳಿ ಶಾಕ್ ಆಗಿದೆ ಎಂದು ಉತ್ತರಿಸಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಗುರುನಂದನ್ ಅವಂತಿಕಾ ಶೆಟ್ಟಿ ಮತ್ತು ನಿರ್ಮಾಪಕರ ಬಗ್ಗೆ ಏನು ಹೇಳಿದ್ರು ಅನ್ನೋ ಮಾಹಿತಿ ಇಲ್ಲಿದೆ ಓದಿ...

ಕೆ.ಎ.ಸುರೇಶ್ ಬೆಸ್ಟ್ ಪ್ರೊಡ್ಯುಸರ್

ನಿರ್ಮಾಪಕ ಕೆ.ಎ.ಸುರೇಶ್ ಒಬ್ಬ ಅತ್ಯುತ್ತಮ ನಿರ್ಮಾಪಕ ಮತ್ತು ಜೆಂಟಲ್ ಮ್ಯಾನ್. ಅವರು ಇಡೀ ಚಿತ್ರತಂಡವನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಆದರೇ ಸಂಪೂರ್ಣ ತಪ್ಪಾಗಿರುವುದು ನಟಿ ಅವಂತಿಕಾ ಶೆಟ್ಟಿ ಅವರಿಂದ ಎಂದು ನಟ ಗುರುನಂದನ್ ಹೇಳಿದ್ದಾರೆ.

ಅವಂತಿಕಾದೆ ಕಂಪ್ಲೀಟ್ ಮಿಸ್‌ಟೇಕ್

" 'ರಾಜು ಕನ್ನಡ ಮೀಡಿಯಂ' ಚಿತ್ರೀಕರಣ ಶುರುವಾದಾಗ ಚೆನ್ನಾಗೆ ಇದ್ದರು. ಹಲವು ದಿನಗಳ ನಂತರ ಪ್ರತಿಯೊಂದು ವಿಷಯಗಳ ಬಗ್ಗೆ ದೂರಲು ಶುರುಮಾಡಿದ್ದರು" -ಗುರುನಂದನ್, ನಟ['ರಂಗಿತರಂಗ' ನಟಿ ಆವಂತಿಕಾ ವಿರುದ್ಧ ಕೇಳಿ ಬಂದ ಆರೋಪಗಳು ನಿಜವೇ?]

ನಿರ್ಮಾಪಕರು ನಾಯಕಿ ಬದಲಿಸಲು ತೀರ್ಮಾನಿಸಿದ್ದರು

"ಯಾವಾಗ ಅವಂತಿಕಾ ಪ್ರತಿಯೊಂದಕ್ಕೂ ದೂರು ನೀಡಲು ಆರಂಭಿಸಿದರೋ ಆಗಲೇ ನಿರ್ಮಾಪಕರು ಅವರನ್ನು ಬದಲಿಸುವ ತೀರ್ಮಾನ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಸುಮಾರು 40 ಲಕ್ಷದವರೆಗೆ ವ್ಯಯ ಮಾಡಲಾಗಿತ್ತು. ಆದ್ದರಿಂದ ಕೆ.ಎ.ಸುರೇಶ್ ಗೆ ರಿಕ್ವೆಸ್ಟ್ ಮಾಡಿ ಅವರನ್ನೇ ಕಂಟಿನ್ಯೂ ಮಾಡಿ, ಇಲ್ಲದಿದ್ದರೇ ನಿಮಗೆ ಲಾಸ್ ಆಗುತ್ತದೆ ಎಂದಿದ್ವಿ. ಅದಕ್ಕೆ ಅವಂತಿಕಾರನ್ನೇ ನಾಯಕಿ ಆಗಿ ಮುಂದುವರೆಸುತ್ತಿದ್ದರು" -ಗುರುನಂದನ್, ನಟ

ಚಿತ್ರೀಕರಣಕ್ಕೆ ಅವಂತಿಕಾ ತೊಂದರೆ

'ನಂತರವು ಅವಂತಿಕಾ ಚಿತ್ರೀಕರಣಕ್ಕೆ ಇನ್ನೂ ಹೆಚ್ಚು ಸಮಸ್ಯೆ ಉಂಟುಮಾಡಿದರು. ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಹಲವು ವೇಳೆ ಕ್ಯಾರಾವ್ಯಾನ್ ನಲ್ಲಿದ್ದರು ಬರುತ್ತಿರಲಿಲ್ಲ" -ಗುರುನಂದನ್, ನಟ

ಮುಂಬೈಗೆ ಹೋಗಿ 20 ದಿನವಾದರೂ ಬಂದಿರಲಿಲ್ಲ

"ಒಮ್ಮೆ ಒಂದು ದಿನ ಮುಂಬೈಗೆ ಹೋಗಬೇಕೆಂದು ಕೇಳಿದ್ದರು. ಆದರೆ ಅಲ್ಲಿಗೆ ಹೋಗಿ 20 ದಿನಗಳಾದರು ಬಂದಿರಲಿಲ್ಲ. ಆ ವೇಳೆ ಚಿತ್ರತಂಡದ ಎಲ್ಲಾ ಯೋಜನೆಗೂ ಸಮಸ್ಯೆ ಉಂಟಾಗಿತ್ತು" -ಗುರುನಂದನ್, ನಟ

ಚಿತ್ರೀಕರಣ ನಿಲ್ಲಲು ಅವಂತಿಕಾ ಕಾರಣ

"ಚಿತ್ರೀಕರಣಕ್ಕಾಗಿ ಅಬ್ರೋಡ್ ಗೆ ಹೋಗಬೇಕಿತ್ತು. ಆ ವೇಳೆಯೂ ಅವಂತಿಕಾ ದಿನಾಂಕ ನೀಡಲಿಲ್ಲ. ಅವರಿಲ್ಲದೆಯೇ ಹೋಗಿ ಶೂಟಿಂಗ್ ಮುಗಿಸಿಕೊಂಡು ಬಂದೆವು. ಚಿತ್ರೀಕರಣ ನಿಲ್ಲಲು ಅವರೇ ಕಾರಣ. ನಿರ್ಮಾಪಕರು ಅವರ ಹೋಟೆಲ್ ಬಿಲ್ ಗಾಗಿಯೇ ಅಪಾರ ಹಣ ಸುರಿದಿದ್ದಾರೆ. ಮುಂಬೈಗೆ ಹೋಗಿ ರಿಕ್ವೆಸ್ಟ್ ಮಾಡಿ ಚಿತ್ರೀಕರಣಕ್ಕೆ ಅವರನ್ನು ಕರೆತಂದಿದ್ದರು. ಕೆಲವೊಮ್ಮೆ ನಾನು ಬೆಳಿಗ್ಗೆ 7-30 ಗಂಟೆಗೆ ವಿತ್ ಮೇಕಪ್ ಅವರನ್ನು ಪಿಕಪ್ ಮಾಡಲು ಹೋಟೆಲ್ ಬಳಿ ಹೋಗುತ್ತಿದ್ದೆ. ಆದರೆ ಅವರು ಯಾವಾಗಲು ಬೆಳಿಗ್ಗೆ 10-30 ನಂತರ ಸೆಟ್‌ ಗೆ ಬರುತ್ತಿದ್ದರು" - ಗುರುನಂದನ್, ನಟ

ಐಶ್ವರ್ಯ ರೈ ಥರ ನಡೆದುಕೊಳ್ಳುತ್ತಾರೆ..

"ಚಿತ್ರತಂಡದ ಯಾರೊಬ್ಬರ ಜೊತೆಯೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಅವರು ಐಶ್ವರ್ಯ ರೈ ಥರ ನಡೆದುಕೊಳ್ಳೋರು..." ಗುರುನಂದನ್, ನಟ

English summary
'Raju Kannada Medium' actor Gurunandan was shocked to see the allegations from the actress Avantika Shetty against the producer Suresh. Actor Gurunandan reacted about Avantika Shetty allegations against the producer Suresh controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada