»   » ಕನ್ನಡಿಗರನ್ನ ಕೆಣಕಿದ ವರ್ಮಾಗೆ ಚಾಟಿ ಏಟು ಕೊಟ್ಟ ನಟ ಜಗ್ಗೇಶ್

ಕನ್ನಡಿಗರನ್ನ ಕೆಣಕಿದ ವರ್ಮಾಗೆ ಚಾಟಿ ಏಟು ಕೊಟ್ಟ ನಟ ಜಗ್ಗೇಶ್

Posted By:
Subscribe to Filmibeat Kannada

ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ 'ವಿವಾದಾತ್ಮಕ' ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿನ್ನೆ ಕಾಲು ಕರೆದುಕೊಂಡು ಕನ್ನಡಿಗರನ್ನ ಕೆಣಕುವ ಹಾಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದರು.

''ಪರಭಾಷಾ ಚಿತ್ರಗಳನ್ನು ಗೆಲ್ಲಿಸುವ ಕನ್ನಡಿಗರ ವಿರುದ್ಧ ಕನ್ನಡಿಗರೇ ಹೋರಾಟ ಮಾಡಬೇಕು'' ಎಂದು ಟ್ವೀಟ್ ಮಾಡಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದ ರಾಮ್ ಗೋಪಾಲ್ ವರ್ಮಾ ವಿರುದ್ಧ ನವರಸ ನಾಯಕ ಜಗ್ಗೇಶ್ ಗುಡುಗಿದ್ದಾರೆ.

ಟ್ವಿಟ್ಟರ್ ನಲ್ಲಿ ಚಾಟಿ ಏಟು ಕೊಟ್ಟ ಜಗ್ಗೇಶ್

ಕನ್ನಡಿಗರ ವಿರುದ್ಧ ರಾಮ್ ಗೋಪಾಲ್ ವರ್ಮಾ ಮಾಡಿರುವ ಸರಣಿ ಟ್ವೀಟ್ ಗಳನ್ನು ಗಮನಿಸಿದ ಜಗ್ಗೇಶ್, ಅದೇ ಟ್ವಿಟ್ಟರ್ ನಲ್ಲಿ ರಾಮ್ ಗೋಪಾಲ್ ವರ್ಮಾ ರವರಿಗೆ ಚಾಟಿ ಏಟು ಬೀಸಿದ್ದಾರೆ.

ಜಗ್ಗೇಶ್ ಮಾಡಿದ ಟ್ವೀಟ್ ಏನು.?

''ಯಾವಾಗ ನಮ್ಮ ಮನೆಯವರ ಬಗ್ಗೆ ನಮಗೆ ಅಭಿಮಾನವಿಲ್ಲ.! ಯಾವಾಗ ನಮ್ಮ ಮನೆಗೆ ಬೇಲಿಯಿಲ್ಲ.! ಆಗ ದಾರಿಯಲ್ಲಿನ ಬಿಡಾಡಿ ನಾಯಿಗಳು ನಮ್ಮ ಜಾಗಕ್ಕೆ ಪ್ರವೇಶ ಮಾಡಿ, ನಮ್ಮ ನೋಡಿ ಬೊಗುಳುತ್ತೆ.! RGV'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ವರ್ಮಾ ಮಾಡಿದ ಟ್ವೀಟ್ ಗಳೇನು.?

ಕನ್ನಡಿಗರ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ ಓದಿರಿ....

ನಿಮ್ಮ ಅಭಿಪ್ರಾಯ ಏನು.?

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳ ಬಗ್ಗೆ ನಿಮ್ಮ ಅನಿಸಿಕೆ ಏನು.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....

English summary
Kannada Actor Jaggesh lashes out against Ram Gopal Varma for his tweets against Kannadigas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada