'ರಶ್ಮಿಕಾ'ಗೆ ಅದೃಷ್ಟವೋ ಅದೃಷ್ಟ: ಈಕೆಗೆ 'ಅರ್ಜುನ್' ಕೂಡ ಬೌಲ್ಡ್.!

By Bharath Kumar

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಬಿಡುಗಡೆ ಮುಂಚೆಯೇ ಕನ್ನಡದ ಸ್ಟಾರ್ ನಟರು ಕಣ್ಣು ಈಕೆ ಮೇಲೆ ಬಿದ್ದಿತ್ತು. ಆದ್ರೆ, 'ಕಿರಿಕ್ ಪಾರ್ಟಿ' ಸಕ್ಸಸ್ ಆದ್ಮೇಲೆ ತೆಲುಗಿನ ಸ್ಟಾರ್ ನಟರೆಲ್ಲಾ ಕಿರಿಕ್ ನಾಯಕಿಯ ಹಿಂದೆ ಬಿದ್ದಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೇ, ಬಾಹುಬಲಿ ಪ್ರಭಾಸ್ ಚಿತ್ರಕ್ಕೆ ರಶ್ಮಿಕಾ ನಾಯಕಿ ಆಗಬೇಕಿತ್ತು. ಆದ್ರೆ, ಅದ್ಯಾಕೋ ಡೇಟ್ ಸರಿ ಹೋಗದ ಕಾರಣ ಈ ಪ್ರಾಜೆಕ್ಟ್ ನಿಂದ ಹೊರಬಂದರು. ಹೀಗಿದ್ದರೂ, ತೆಲುಗಿನ ಮತ್ತಿಬ್ಬರು ಯಂಗ್ ಸ್ಟಾರ್ ಗಳ ಚಿತ್ರಕ್ಕೆ ರಶ್ಮಿಕಾ ಟಿಕೆಟ್ ಪಡೆದುಕೊಂಡರು.[ಸೆಟ್ಟೇರಿತು 'ಕಿರಿಕ್' ಹುಡುಗಿಯ ಚೊಚ್ಚಲ ತೆಲುಗು ಚಿತ್ರ]

ಈ ಮಧ್ಯೆ ಟಾಲಿವುಡ್ ನ ಮತ್ತೊಬ್ಬ ದೊಡ್ಡ ನಟನ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ತಾರೆ ಎನ್ನಲಾಗುತ್ತಿತ್ತು. ಈಗ ಆ ಚಿತ್ರವೂ ಅಂತಿಮವಾಗಿದ್ದು, ಸಿನಿಮಾ ಕೂಡ ಸೆಟ್ಟೇರಿದೆ. ಯಾವುದು ಆ ಚಿತ್ರ? ಯಾರು ಆ ಬಿಗ್ ಸ್ಟಾರ್ ಮುಂದೆ ಓದಿ.....

ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ!

ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ!

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನಾಯಕಿ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಬಹುತೇಕ ಅಂತಿಮವಾಗಿದೆಯಂತೆ.['ಟಾಲಿವುಡ್'ಗೆ ಜಿಗಿದ 'ಕಿರಿಕ್' ಪಾರ್ಟಿ ರಶ್ಮಿಕಾ!]

'ಬನ್ನಿ' ಹೊಸ ಚಿತ್ರ ಯಾವುದು?

'ಬನ್ನಿ' ಹೊಸ ಚಿತ್ರ ಯಾವುದು?

ಸದ್ಯ, 'ದುವ್ವಾಡ ಜಗನ್ನಾಥಂ' ಚಿತ್ರವನ್ನ ಮುಗಿಸಿರುವ ಅಲ್ಲು ಅರ್ಜುನ್ 'ನಾ ಪೇರು ಸೂರ್ಯ, ನಾ ಇಲ್ಲು ಪೇರು ಇಂಡಿಯಾ' ಚಿತ್ರವನ್ನ ಶುರುಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಸೆಟ್ಟೇರಿತು. ವೆಂಕಟಂ ವಂಶಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.[ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ?]

ನಾಗಶೌರ್ಯ ಸಿನಿಮಾದಲ್ಲಿ ರಶ್ಮಿಕಾ

ನಾಗಶೌರ್ಯ ಸಿನಿಮಾದಲ್ಲಿ ರಶ್ಮಿಕಾ

ತೆಲುಗು ನಟ ನಾಗಶೌರ್ಯ ಅಭಿನಯಿಸುತ್ತಿರುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಶ್ಮಿಕಾಗೆ ತೆಲುಗಿನಲ್ಲಿ ಮೊದಲ ಚಿತ್ರವಾಗಿದೆ.

ತೆಲುಗಿನಲ್ಲಿ ಎರಡನೇ ಚಿತ್ರ!

ತೆಲುಗಿನಲ್ಲಿ ಎರಡನೇ ಚಿತ್ರ!

ಇನ್ನು ತೆಲುಗಿನ ಮತ್ತೊಬ್ಬ ಯಂಗ್ ಹೀರೋ ರಾಮ್ ಅವರ ಜೊತೆ ಕೂಡ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದು, ತೆಲುಗಿನಲ್ಲಿ ಎರಡನೇ ಚಿತ್ರಕ್ಕೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್ ಚಿತ್ರದಿಂದ ಹೊರಕ್ಕೆ!

ಪ್ರಭಾಸ್ ಚಿತ್ರದಿಂದ ಹೊರಕ್ಕೆ!

ಇದಕ್ಕೂ ಮೊದಲು ಬಾಹುಬಲಿ ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರದಲ್ಲಿ ರಶ್ಮಿಕಾಗೆ ಅಭಿನಯಿಸಲು ಅವಕಾಶ ಬಂದಿತ್ತು. ಆದ್ರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನ ಒಪ್ಪಿಕೊಳ್ಳಲಿಲ್ಲ.

ಕನ್ನಡದಲ್ಲಿ ಸಖತ್ ಬ್ಯುಸಿ

ಕನ್ನಡದಲ್ಲಿ ಸಖತ್ ಬ್ಯುಸಿ

ಸದ್ಯ, ತೆಲುಗಿನ ಎರಡು ಚಿತ್ರಗಳೊಂದಿಗೆ ಪುನೀತ್ ರಾಜ್ ಕುಮಾರ್ ಜೊತೆ 'ಅಂಜನಿಪುತ್ರ', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಚಮಕ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.[ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ]

More from Filmibeat

English summary
Allu Arjun’s new film Naa Peru Surya Naa Illu India launched. Kannada Actress Rashmika Mandanna has been roped in for the female lead in the Film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X