»   » ಸೆಟ್ಟೇರಿತು 'ಕಿರಿಕ್' ಹುಡುಗಿಯ ಚೊಚ್ಚಲ ತೆಲುಗು ಚಿತ್ರ

ಸೆಟ್ಟೇರಿತು 'ಕಿರಿಕ್' ಹುಡುಗಿಯ ಚೊಚ್ಚಲ ತೆಲುಗು ಚಿತ್ರ

Written By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ದಿನಬೆಳಗಾಗೋದ್ರಲ್ಲಿ ಫೇಮಸ್ ಆದ ನಟಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಿಂದ ಸಿಕ್ಕಾಪಟ್ಟೆ ಆಫರ್ ಗಳು ಬರ್ತಿದೆ ಎಂದು ಹೇಳಲಾಗ್ತಿತ್ತು. ಈ ಮಧ್ಯೆ ಸದ್ದು ಸುದ್ದಿಯಿಲ್ಲದೆ ರಶ್ಮಿಕಾ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಅಭಿನಯಿಸಲಿರುವ ಚೊಚ್ಚಲ ತೆಲುಗು ಚಿತ್ರ ಸೆಟ್ಟೇರಿದ್ದು, ಈಗಾಗಲೇ ಚಿತ್ರದ ಮುಹೂರ್ತವನ್ನ ಅದ್ಧೂರಿಯಾಗಿ ಮಾಡಿಕೊಂಡಿದೆ.['ಟಾಲಿವುಡ್'ಗೆ ಜಿಗಿದ 'ಕಿರಿಕ್' ಪಾರ್ಟಿ ರಶ್ಮಿಕಾ!]

Rashmika Mandanna Telugu Movie Launched


ಇನ್ನು ಹೆಸರಿಡದ ಈ ಚಿತ್ರಕ್ಕೆ ನಾಗಶೌರ್ಯ ನಾಯಕರಾಗಿದ್ದು, ಕನ್ನಡ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಿದ್ದು, ಈ ಹಿಂದೆ ಇವರು ನಿರ್ದೇಶಕ ತ್ರಿವಿಕ್ರಮ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.[ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ?]

Rashmika Mandanna Telugu Movie Launched

ಇದೊಂದು ರೊಮ್ಯಾಂಟಿಕ್ ಸಬ್ಜೆಕ್ಟ್ ಆಗಿದ್ದು, ಕಾಲೇಜಿನಲ್ಲಿ ನಡೆಯುವ ಕಥೆಯಾಗಿದೆ. ಸಾಯಿ ಶ್ರೀರಾಮ್ ಛಾಯಗ್ರಾಹಕ ಹಾಗೂ ಸಾಗರ್ ಮಹತಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಶಂಕರ್ ಪ್ರಸಾದ್ ಮತ್ತು ಉಷಾ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಈ ತಿಂಗಳ ಅಂತ್ಯದಿಂದ ಈ ಚಿತ್ರದ ಚಿತ್ರೀಕರಣ ಶುರುಮಾಡಲಿದ್ದಾರಂತೆ.

English summary
Kirik Party Heroien Rashmika Mandanna Was Debut to Tollywood with Actor Naga Shourya. the Movie Directed by Venky Kudumula.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada