»   » ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ?

Posted By:
Subscribe to Filmibeat Kannada

ಅಭಿನಯಿಸಿದ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ'ಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಶ್ಮಿಕಾ ಮಂದಣ್ಣ ಸದ್ಯ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.[ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ]

ಎ.ಹರ್ಷ ನಿರ್ದೇಶನದ 'ಅಂಜನಿಪುತ್ರ' ಚಿತ್ರೀಕರಣದಲ್ಲಿ ಬಿಜಿ ಆಗಿರುವ ರಶ್ಮಿಕಾ ಮಂದಣ್ಣ, ಸದ್ಯದಲ್ಲಿಯೇ ಟಾಲಿವುಡ್ ಗೆ ಹಾರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಓದಿರಿ...

ತೆಲುಗು ಆಫರ್ ನಿಜವಾಗಲಿದೆ?

ನಿಮಗೆಲ್ಲಾ ತಿಳಿದಂತೆ 'ಕಿರಿಕ್ ಪಾರ್ಟಿ' ಚಿತ್ರ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸೌಂಡ್ ಮಾಡಿದ ಸಿನಿಮಾ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯ ಟಾಲಿವುಡ್ ಹಾಗೂ ಕಾಲಿವುಡ್ ಮಂದಿಯ ಗಮನ ಸೆಳೆದಿತ್ತು. ಇದರಿಂದಲೇ ಈಗ ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ರವರಿಗೆ ಬುಲಾವ್ ಬಂದಿದೆ ಎನ್ನಲಾಗಿದೆ.[ಹರ್ಷ ಮತ್ತು ಪುನೀತ್ ಚಿತ್ರಕ್ಕೆ ರವಿಚಂದ್ರನ್ ಕ್ಲಾಪ್]

ಅಲ್ಲು ಅರ್ಜುನ್ ಗೆ ರಶ್ಮಿಕಾ ಮಂದಣ್ಣ ಜೋಡಿ?

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಅಸಂಖ್ಯಾತ ಸಿನಿ ಪ್ರಿಯರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ, ಟಾಲಿವುಡ್ ನಿರ್ದೇಶಕ ವಕ್ಕಂಥಮ್ ವಂಶಿ, ಅಲ್ಲು ಅರ್ಜುನ್ ಗೆ ಆಕ್ಷನ್ ಕಟ್ ಹೇಳಲಿರುವ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ.['ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ']

ಇದಕ್ಕಾಗಿ ಲುಕ್ ಟೆಸ್ಟ್ ಸಹ ಮುಗಿದಿದೆ

'ಬನ್ನಿ' ಖ್ಯಾತಿಯ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹೈದರಾಬಾದ್ ನ ಟ್ರಿಡೆಂಟ್ ಹೋಟೆಲ್ ಗೆ ಭೇಟಿ ನೀಡಿ ಲುಕ್ ಟೆಸ್ಟ್ ಮತ್ತು ಟ್ರಯಲ್ ಶೂಟ್ ಸಹ ಮುಗಿಸಿದ್ದಾರಂತೆ.

ಚಿತ್ರದ ಹೆಸರು ಫಿಕ್ಸ್ ಆಗಿದೆ..

ಅಂದಹಾಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಳ್ಳಲಿರುವ ಚಿತ್ರದ ಪ್ರೀ-ಪ್ರೊಡಕ್ಷನ್ ವರ್ಕ್ ಶುರು ಆಗಿದೆ. ಚಿತ್ರಕ್ಕೆ 'ನಾ ಪೇರು ಸೂರ್ಯ-ನಾ ಇಲ್ಲು ಇಂಡಿಯಾ' ಎಂಬ ಟೈಟಲ್ ಸಹ ಫಿಕ್ಸ್ ಆಗಿದೆ.

ರಶ್ಮಿಕಾ ನಟಿಸುವುದು ಪಕ್ಕಾನಾ?

ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸುವುದು ಇನ್ನೂ ಪಕ್ಕಾ ಆಗಿಲ್ಲ. ಚಿತ್ರತಂಡದ ಕಡೆಯಿಂದ ಅಫೀಶಿಯಲ್ ಕನ್ಫರ್ಮೇಷನ್ ಸಿಕ್ಕಿಲ್ಲ.

'ಅಂಜನಿಪುತ್ರ'ದಲ್ಲಿ ರಶ್ಮಿಕಾ ಬಿಜಿ

ಇತ್ತ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣ ಬಿಜಿಯಾಗಿದ್ದಾರೆ.

ಸ್ಟೈಲಿಶ್ ಸ್ಟಾರ್ ಸಹ ಬಿಜಿ

ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಪ್ರಸ್ತುತ 'ಗಬ್ಬರ್ ಸಿಂಗ್' ಖ್ಯಾತಿಯ ಹರೀಶ್ ಶಂಕರ್ ನಿರ್ದೇಶನದ 'ಡಿಜೆ: ದುವ್ವಡ ಜಗನ್ನಾಧಂ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

English summary
According to the latest Grapevine, Kannada Actress Rashmika Mandanna to star in Tollywood star Allu Arjun film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada