»   » 'ಟಾಲಿವುಡ್'ಗೆ ಜಿಗಿದ 'ಕಿರಿಕ್' ಪಾರ್ಟಿ ರಶ್ಮಿಕಾ!

'ಟಾಲಿವುಡ್'ಗೆ ಜಿಗಿದ 'ಕಿರಿಕ್' ಪಾರ್ಟಿ ರಶ್ಮಿಕಾ!

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ದಿನಬೆಳಗಾಗೋದ್ರಲ್ಲಿ ಫೇಮಸ್ ಆದ ನಟಿ ರಶ್ಮಿಕಾ ಮಂದಣ್ಣ. ಮೊದಲ ಸಿನಿಮಾ ಬಿಡುಗಡೆಗೂ ಮುಂಚೆ ಸ್ಟಾರ್ ಗಳ ಚಿತ್ರಗಳಲ್ಲಿ ನಾಯಕಿ ಆಗಿ ಆಫರ್ ಪಡೆದಿದ್ದ ರಶ್ಮಿಕಾ, ಈಗ ಚೊಚ್ಚಲ ಸಿನಿಮಾ ಸಕ್ಸಸ್ ನಂತರ ಮತ್ತಷ್ಟು ಬಿಗ್ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ವಿಶೇಷ ಅಂದ್ರೆ, ಇಷ್ಟರಲ್ಲೇ ಟಾಲಿವುಡ್ ಅಂಗಳಕ್ಕೂ ಕಿರಿಕ್ ಸಾನ್ವಿ ಹೆಜ್ಜೆ ಇಡಲಿದ್ದಾರಂತೆ. ಹೌದು, ಮೂಲಗಳ ಪ್ರಕಾರ ಈಗಾಗಲೇ ರಶ್ಮಿಕಾ ಅಭಿನಯಿಸಲಿರುವ ತೆಲುಗು ಸಿನಿಮಾ ಅಂತಿಮವಾಗಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರು ಮಾಡಲಿದ್ದಾರಂತೆ.

ಟಾಲಿವುಡ್ ಗೆ ಹಾರಿದ ಸಾನ್ವಿ!

ಇಷ್ಟು ದಿನ ಪರಭಾಷೆಗಳಿಂದ ರಶ್ಮಿಕಾ ಅವರಿಗೆ ಆಫರ್ ಗಳು ಬರುತ್ತಿವೆ ಎನ್ನಲಾಗುತ್ತಿತ್ತು. ಆದ್ರೆ, ಇದೀಗ, ತೆಲುಗಿನ ಚಿತ್ರವೊಂದಕ್ಕೆ ತಯಾರಿ ಕೂಡ ಮಾಡಿಬಿಟ್ಟಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಈ ವರ್ಷವೇ ರಶ್ಮಿಕಾ ಅವರ ತೆಲುಗು ಸಿನಿಮಾ ಶುರುವಾಗುವುದು ಖಚಿತ ಎನ್ನಲಾಗುತ್ತಿದೆ.

ರಶ್ಮಿಕಾ ಕನ್ನಡದಲ್ಲಿ ಬ್ಯುಸಿ!

ರಶ್ಮಿಕಾ ಸದ್ಯಕ್ಕೆ ಹರ್ಷ ನಿರ್ದೇಶನದ 'ಅಂಜನಿ ಪುತ್ರ' ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಎದುರು ನಟಿಸುತ್ತಿದ್ದಾರೆ. ಅದಾದ ನಂತರ ಸಿಂಪಲ್ ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿದ್ದಾರೆ.

ಮೊದಲ ಆಧ್ಯತೆ ಕನ್ನಡಕ್ಕೆ!

ಮೊದಲ ಚಿತ್ರ ಮಾಡಿದ ತಕ್ಷಣ ಈಗ ಟಾಲಿವುಡ್ ನಲ್ಲಿ ಬ್ಯುಸಿಯಾಗುವ ಮುನ್ಸೂಚನೆ ಕೊಟ್ಟಿರುವ ರಶ್ಮಿಕಾ ಅವರು ''ಸಿನಿಮಾಗಳಿಗೆ ಭಾಷೆಯ ಹಂಗಿಲ್ಲ. ಒಳ್ಳೆ ಸಿನಿಮಾಗಳನ್ನ ನೀಡುವುದು ಮಾತ್ರ ನನ್ನ ಉದ್ದೇಶ. ನನ್ನ ಮೊದಲ ಸಿನಿಮಾಗೆ ಸಿಕ್ಕ ಯಶಸ್ಸು ಮರೆಯಲಾಗುವುದಿಲ್ಲ. ಕನ್ನಡ ಚಿತ್ರಗಳಿಗೆ ನನ್ನ ಮೊದಲ ಆಧ್ಯತೆ'' ಎನ್ನುತ್ತಾರೆ.

English summary
According to source Kirik Party Heroien Rashmika Mandanna will Debut to Tollywood with Actor Naga Shourya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada