»   » ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ

ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಚೊಚ್ಚಲ ಚಿತ್ರದಿಂದಲೇ ಹೆಚ್ಚು ಗಮನ ಸೆಳೆಯುವುದರಲ್ಲಿ ಯಶಸ್ವಿ ಆಗಿರುವ ನಟಿಯರಲ್ಲಿ ಈಗ 'ರಶ್ಮಿಕಾ ಮಂದಣ್ಣ' ಮುಂಚೂಣಿಯಲ್ಲಿದ್ದಾರೆ. ಅವರು ಯಾರು ಎಂಬ ಪ್ರಶ್ನೆ ಬಹುಸಂಖ್ಯಾತರಿಗೆ ಕಾಡಬಹುದು. ಅವರು ಬೇರೆ ಯಾರು ಅಲ್ಲ.. 'ಕಿರಿಕ್ ಪಾರ್ಟಿ'ಯ ಯಶಸ್ಸಿನಲ್ಲಿ ತೇಲುತ್ತಿರುವ ನಟಿ 'ರಶ್ಮಿಕಾ ಮಂದಣ್ಣ'.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ ಜನರ ಮೆಚ್ಚಿಗೆ ಪಡೆದಿದ್ದಾರೆ. ಈಗ ಹಲವು ನಿರ್ಮಾಪಕರು ಮತ್ತು ನಿರ್ದೇಶಕರ ಮೆಚ್ಚುಗೆ ಪಡೆದಿದ್ದು ಹಲವು ಹೊಸ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬಂದಿವೆ ಎಂದು ತಿಳಿಯಲಾಗಿದೆ. ರಶ್ಮಿಕಾ ಮಂದಣ್ಣ ಗೆ ಸ್ಟಾರ್‌ ನಟರ ಜೊತೆಯಲ್ಲಿ ನಟಿಸಲು ಅವಕಾಶ ಬಂದಿದ್ದು, ಆ ಸಿನಿಮಾಗಳು ಯಾವುವು ಮತ್ತು ರಶ್ಮಿಕಾ ಯಾವ ಸ್ಟಾರ್ ನಟ ಜೊತೆ ಅಭಿನಯಿಸಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಗಣೇಶ್ 'ಚಮಕ್‌'ನಲ್ಲಿ ಕಿರಿಕ್‌ ಹುಡುಗಿ

ಗೋಲ್ಡನ್ ಸ್ಟಾರ್ ಗಣೇಶ್‌ ಅವರ ಮುಂದಿನ ಸಿನಿಮಾ 'ಚಮಕ್' ಚಿತ್ರದಲ್ಲಿ ನಟಿಸಲು 'ಕಿರಿಕ್ ಪಾರ್ಟಿ'ಯ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಗೆ ಅವಕಾಶ ಸಿಕ್ಕಿದೆ ಎಂದು ತಿಳಿಯಲಾಗಿದೆ. ಈ ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಲಿದ್ದು, ಪ್ರಸ್ತುತದಲ್ಲಿ ಆಪರೇಷನ್ ಅಲಮೇಲಮ್ಮ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ದರ್ಶನ್‌ ಗೆ ನಾಯಕಿ ಆಗಿ ರಶ್ಮಿಕಾ ಮಂದಣ್ಣ

ನಿರ್ದೇಶಕ ಪ್ರಕಾಶ್ ಜಯರಾಂ ದರ್ಶನ್ ಅಭಿನಯದ ತಮ್ಮ ಮುಂದಿನ ಚಿತ್ರಕ್ಕೆ ನಾಯಕಿ ಆಗಿ ರಶ್ಮಿಕಾ ಮಂದಣ್ಣ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ದರ್ಶನ್‌ ರ 49 ನೇ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್‌ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಇಬ್ಬರು ನಟಿಯರು. ಮೊದಲೇ ಶೃತಿ ಹರಿಹರನ್‌ ರನ್ನು ಆಯ್ಕೆ ಮಾಡಿದ್ದ ನಿರ್ದೇಶಕರು ಇನ್ನೊಬ್ಬರು ನಟಿಗಾಗಿ ಹುಡುಕಾಟ ನಡೆಸಿದ್ದರು. ಈಗ ರಶ್ಮಿಕಾ ಮಂದಣ್ಣ ರನ್ನು ಆಯ್ಕೆ ಮಾಡಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರಗಳಿಗೂ ಆಫರ್

ಹೇಳಿ ಕೇಳಿ 'ಕಿರಿಕ್ ಪಾರ್ಟಿ' ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರವರ ಅಭಿನಯ ನೋಡಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಲು ಆಫರ್ ಗಳು ಬರುತ್ತಿವೆಯಂತೆ. ಆದರೆ ರಶ್ಮಿಕಾ ಮಾತ್ರ ಈ ಆಫರ್ ಗಳನ್ನು ನಿರಾಕರಿಸಿ ಈಗ ತಮ್ಮ ನಟನೆಯನ್ನು ಸ್ಯಾಂಡಲ್ ವುಡ್ ನಲ್ಲಿ ಗಮನ ಹರಿಸಲು ತೀರ್ಮಾನಿಸಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟನೆ

ಸಿಂಪಲ್ ಸುನಿ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಲಿದ್ದು, ಗಣೇಶ್ ಗೆ ಕಾಂಬಿನೇಷನ್ ಆಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ. ಚಂದ್ರಶೇಖರ್ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಯೋಗರಾಜ್‌ ಭಟ್ ರ ಮುಗುಳು ನಗೆ ಸಿನಿಮಾದಲ್ಲಿ ಗಣೇಶ್ ಬ್ಯುಸಿ ಆಗಿರುವುದರಿಂದ, ಸುನಿ ಯ 'ಚಮಕ್' ಚಿತ್ರ ಮಾರ್ಚ್‌ ತಿಂಗಳಲ್ಲಿ ಸೆಟ್ಟೇರಲಿದೆಯಂತೆ.

English summary
Rashmika Mandanna, who made a successful debut with Kirik Party, is now experiencing a slice of fame with prominent filmmakers approaching her to play the lead in their projects. Here is Rashmika Mandanna's Upcoming projects..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada