ಒಂದು ಸಿನಿಮಾ ಹಿಟ್ ಆಗಲು ಉತ್ತಮ ಕಥೆ ಮತ್ತು ನಿರ್ದೇಶನ ಮುಖ್ಯವಾಗಿರುತ್ತದೆ. ಚಿತ್ರದ ಕಥೆ ಚೆನ್ನಾಗಿದ್ದಾರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಕೆಲವೊಮ್ಮೆ ನಟ-ನಟಿಯರು ಉತ್ತಮ ಕಥೆ ಆಯ್ದುಕೊಳ್ಳುವಲ್ಲಿ ಎಡವುತ್ತಾರೆ. ಹೀಗಾಗಿ, ಸಿನಿಮಾದಲ್ಲಿಯೂ ಸೋಲು ಅನುಭವಿಸುತ್ತಾರೆ. ಈ ಹಿಂದೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕೆಲ ನಟಿಯರು ಇತ್ತೀಚೆಗೆ ಸತತವಾಗಿ ಸೋಲು ಕಂಡಿದ್ದಾರೆ. ಇಲ್ಲಿ ಉತ್ತಮ ಕಥೆಯೊಂದಿಗೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಲು ಕಾಯುತ್ತಿರುವ ಸ್ಯಾಂಡಲ್‌ವುಡ್ ನಟಿಮಣಿಯರ ಪಟ್ಟಿಯನ್ನು ನೀಡಲಾಗಿದೆ.