twitter
    X
    Home ಚಲನಚಿತ್ರಗಳ ಒಳನೋಟ

    ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‌ಕುಮಾರ್ ಅವರ ಐವರು ಮೊಮ್ಮಕ್ಕಳಿವರು

    Author Sowmya Bairappa | Published: Tuesday, January 17, 2023, 12:54 PM [IST]

    ಸ್ಯಾಂಡಲ್‌ವುಡ್‌ಗೆ ಅಣ್ಣಾವ್ರ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ 'ಸಿದ್ದಾರ್ಥ್' ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದಕ್ಕೂ ಮೊದಲು ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲ ನಟರಾಗಿ ಕಾಣಿಸಿಕೊಂಡಿದ್ದರು. ಇವರ ಬಳಿಕ ಒಬ್ಬಬ್ಬರಾಗಿ ದೊಡ್ಮನೆ ಕುಟುಂಬದ ಕುಡಿಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಚಿತ್ರರಂಗಕ್ಕೆ ಬಂದ ಡಾ.ರಾಜ್‌ಕುಮಾರ್ ಮೊಮ್ಮಕ್ಕಳ ವಿವರ ಇಲ್ಲಿದೆ.

    cover image
    ವಿನಯ್ ರಾಜ್ ಕುಮಾರ್

    ವಿನಯ್ ರಾಜ್ ಕುಮಾರ್

    1

    ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ 2015ರಲ್ಲಿ  'ಸಿದ್ದಾರ್ಥ್' ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.  ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು. ಒಡ ಹುಟ್ಟಿದವರು, ಆಕಸ್ಮಿಕ,  ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದರು. ವಿನಯ್ ಅವರು ಸಿದ್ದಾರ್ಥ್, ರನ್ ಆಂಟನಿ, ಆರ್ ದಿ ಕಿಂಗ್ ಹಾಗೂ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಡಾ.ರಾಜ್ ಕುಮಾರ್ ಮೊಮ್ಮಕ್ಕಳ ಪೈಕಿ ವಿನಯ್ ಮೊದಲನೆಯವರು.  

     

    ಧನ್ಯಾ ರಾಮಕುಮಾರ್

    ಧನ್ಯಾ ರಾಮಕುಮಾರ್

    2

    ಧನ್ಯಾ ರಾಮ್‌ಕುಮಾರ್  'ನಿನ್ನ ಸನಿಹಕೆ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. 2021ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸ್ವಲ್ಪಮಟ್ಟಿಗೆ ಯಶಸ್ಸನ್ನು ಗಳಿಸಿತು. ಧನ್ಯಾ ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಪುತ್ರಿ. ಸದ್ಯ ಕಾಲಾ ಪತ್ಥರ್ ಸಿನಿಮಾದಲ್ಲಿ ಧನ್ಯಾ ನಟಿಸುತ್ತಿದ್ದಾರೆ.  

    ಧೀರೇನ್ ರಾಮ್ ಕುಮಾರ್

    ಧೀರೇನ್ ರಾಮ್ ಕುಮಾರ್

    3

    ಡಾ.ರಾಜ್‌ಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾರವರ ಪುತ್ರನಾದ ಧೀರೇನ್ ರಾಮ್‌ಕುಮಾರ್ 2022ರಲ್ಲಿ 'ಶಿವ 143' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾ ಅಷ್ಟೇನು ಯಶಸ್ಸು ಗಳಿಸಲಿಲ್ಲ.  

    ಯುವ ರಾಜಕುಮಾರ್

    ಯುವ ರಾಜಕುಮಾರ್

    4

    ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಕೂಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಸಿನಿಮಾ ಕಥೆಯನ್ನು ಅಪ್ಪು ಅವರಿಗಾಗಿ ರೆಡಿ ಮಾಡಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಈ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ನಟಿಸುತ್ತಿದ್ದು, ಭಾರೀ ನಿರೀಕ್ಷೆಯಿದೆ.  ಯುವ ರಾಜ್‌ಕುಮಾರ್ ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಾಗರಿಕಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ಮುನ್ನೆಡುಸುತ್ತಿದ್ದಾರೆ. 2016ರಲ್ಲಿ ತೆರೆಕಂಡ ವಿನಯ್ ರಾಜ್‌ಕುಮಾರ್ ಅಭಿನಯದ `ರನ್ ಆಂಟನಿ' ಚಿತ್ರವನ್ನು ನಿರ್ಮಿಸಿದ್ದಾರೆ. 

    ಷಣ್ಮುಖ ಗೋವಿಂದರಾಜ್

    ಷಣ್ಮುಖ ಗೋವಿಂದರಾಜ್

    5

    ಈ ನಾಲ್ವರ ಜೊತೆಗೆ ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಮೊದಲ ಸಿನಿಮಾ ಸೆಟ್ಟೇರಿದೆ. ಈಗಾಗಲೇ ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಸದ್ದಿಲ್ಲದೆ ಷಣ್ಮುಖ ಗೋವಿಂದರಾಜು ಸಿನಿಮಾದ ಕಥೆಯನ್ನು ಕೇಳಿ, ಮನೆಯವರಿಗೂ ಒಪ್ಪಿಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಎ2 ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಷಣ್ಮುಖ ಗೋವಿಂದರಾಜ್  ಸಿನಿಮಾಗೆ 'ನಿಂಬಿಯಾ ಬನಾದ ಮ್ಯಾಗ' ಎಂದು ಹೆಸರಿಡಲಾಗಿದೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X