ಬಾಲನಟನಾಗಿ ಪುನೀತ್ ರಾಜಕುಮಾರ್ ನಟಿಸಿದ ಎಲ್ಲಾ ಚಲನಚಿತ್ರಗಳು

  ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಹಲವು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೇವಲ ಆರು ತಿಂಗಳ ಮಗುವಿದ್ದಾಗಲೇ ಡಾ.ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪ್ರೇಮದ ಕಾಣಿಕೆ ಚಿತ್ರದ ಮೂಲಕ ಬೆಳ್ಳಿ ಪರದೆಯ ಪ್ರವೇಶವಾಯಿತು. ನಂತರ ಬಾಲ ಕಲಾವಿದನಾಗಿ `ಮಾಸ್ಟರ್ ಲೋಹಿತ್' ಹೆಸರಿನಿಂದ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದರು. ಬೆಟ್ಟದ ಹೂವು ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಇಲ್ಲಿ ಪುನೀತ್ ಬಾಲ ನಟನಾಗಿ ನಟಿಸಿದ ಎಲ್ಲಾ ಚಲನಚಿತ್ರಗಳನ್ನು ನೀಡಿದೆ.
  1. ಪ್ರೇಮದ ಕಾಣಿಕೆ

  ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಆರತಿ ಮತ್ತು ಜಯಮಾಲಾ ನಾಯಕಿಯಾಗಿ ನಟಿಸಿದ್ದರು. ಆರು ತಿಂಗಳ ಮಗುವಿದ್ದ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳೆ ತೆರೆ ಮೇಲೆ ಕಾಣಿಸಿಕೊಂಡರು.

  ವಿಜಯ್ ನಿರ್ದೇಶನದಲ್ಲಿ ಮೂಡಿಬಂದ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಜಯಪ್ರದಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಹಾಡೊಂದರಲ್ಲಿ ನಟಿಸುವ ಪುನೀತ್ ರಾಜಕುಮಾರ್ ಡಾ.ರಾಜ್ ಪುತ್ರನಾಗಿ ಕಾಣಿಸಿಕೊಂಡಿದ್ದರು.

  ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಸಾಹುಕಾರ್ ಜಾನಕಿ ಮತ್ತು ಮಹಾನಟಿ ಸಾವಿತ್ರಿ ಡಾ. ರಾಜ್ ತಾಯಿ ಪಾತ್ರದಲ್ಲಿ ನಟಿಸಿದ್ದರು. ಪುನೀತ್ ರಾಜ್ ರ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು.

  4. ವಸಂತಗೀತ

  ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ವಸಂತ ಗೀತಾ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಡಾ. ರಾಜ್ ಪುತ್ರನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಗಾಯಕಿ ನಾಯಕಿಯಾಗಿ ನಟಿಸಿದ್ದರೆ, ಲೀಲಾವತಿ, ಅಶ್ವತ್, ಶ್ರೀನಿವಾಸ್ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

  5. ಭೂಮಿಗೆ ಬಂದ ಭಗವಂತ
  ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದ `ಭೂಮಿಗೆ ಬಂದ ಭಗವಂತ' ಚಿತ್ರದಲ್ಲಿ ಲೋಕೇಶ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದರು.
  6. ಭಾಗ್ಯವಂತ

  ಬಿ.ಎಸ್. ರಂಗ ನಿರ್ದೇಶನದಲ್ಲಿ ಮೂಡಿಬಂದ 'ಭಾಗ್ಯವಂತ' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆ ಆರತಿ, ಜೈ ಜಗದೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಡಾ. ರಾಜಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಎಲ್ಲರಿಂದ ನತದೃಷ್ಟ ಎಂದು ಕರೆಯಿಸಿಕೊಳ್ಳುವ ಕೃಷ್ಣ ಮುಂದೆ ಮನೆ ಬಿಟ್ಟು ಹೋಗುತ್ತಾನೆ.

  7. ಹೊಸ ಬೆಳಕು
  ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ 'ಹೊಸ ಬೆಳಕು' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ರಾಜ್ ಅಕ್ಕನ ಮಗನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ವಾಣಿಯವರ ಕಾದಂಬರಿ ಆಧಾರಿತವಾಗಿತ್ತು.

  ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜಕುಮಾರ್ ನಿರ್ಮಾಣದಲ್ಲಿ ಮೂಡಿಬಂದ `ಚಲಿಸುವ ಮೋಡಗಳು' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಸರಿತಾ ಮತ್ತು ಅಂಬಿಕಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಾಗೇ `ಕಾಣದಂತೆ ಮಾಯವಾದನು' ಎಂಬ ಗೀತೆಯನ್ನುಹಾಡಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ `ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದರು.

  ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಡಾ. ರಾಜಕುಮಾರ್ ಹಿರಣ್ಯ ಕಶಿಪು ಎಂಬ ರೌದ್ರ ಅಸುರನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಭಕ್ತ ಪ್ರಹ್ಲಾದನ ಪಾತ್ರದಲ್ಲಿ ನಟಿಸಿದ್ದರು. ತನ್ನ ತಂದೆಯ ವಿರೋಧದ ನಡುವೆಯೇ ಶ್ರೀಹರಿಯನ್ನು ಅನಂತವಾಗಿ ಭಜಿಸುವ ಪ್ರಹ್ಲಾದನ ಪಾತ್ರದಲ್ಲಿ ಪುನೀತ್ ಅದ್ಭುತ ಅಭಿನಯ ನೀಡಿದ್ದರು.

  10. ಎರಡು ನಕ್ಷತ್ರಗಳು

  ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದಲ್ಲಿ ಮೂಡಿಬಂದ `ಎರಡು ನಕ್ಷತ್ರಗಳು' ಚಿತ್ರದಲ್ಲಿ ಪುನೀತ್ ರಾಜಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಪುನೀತ್ ಜೊತೆ ಡಾ. ರಾಜಕುಮಾರ್ ಮತ್ತು ಅಂಬಿಕಾ ಮುಖ್ಯ ಪಾತ್ರಗಳಲ್ಲಿ ನಟಿಸದ್ದರು. ಈ ಚಿತ್ರದ ಐದು ಗೀತೆಗಳಲ್ಲಿ ಮೂರು ಗೀತೆಗಳನ್ನು ಪುನೀತ್ ಹಾಡಿದ್ದು ವಿಶೇಷ. ಹಾಗೇ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು.

  11. ಯಾರಿವನು

  ದೊರೈ-ಭಗವಾನ್ ನಿರ್ದೇಶನದ `ಯಾರಿವನು' ಚಿತ್ರದಲ್ಲಿ ಪುನೀತ್, ಡಾ. ರಾಜಕುಮಾರ್, ರೂಪಾ ದೇವಿ ಮತ್ತು ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀನಾಥ್ ಖಳನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಪುನೀತ್ `ಸರೋಜಾದೇವಿ' ಪುತ್ರನಾಗಿ ನಟಿಸಿದ್ದರು.

  ಎನ್ ಲಕ್ಷ್ಮಿನಾರಾಯಣ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ 'ಬೆಟ್ಟದ ಹೂವು' ಚಿತ್ರದಲ್ಲಿ ಪುನೀತ್ `ರಾಮು' ಎಂಬ ಶಾಲಾ ಬಾಲಕನ ಪಾತ್ರದಲ್ಲಿ ನಟಿಸಿದ್ದರು. ಶಿರ್ಲೆ ಎಲ್ ಅರೋರಾರ `ವಾಟ್ ದೆನ್, ರಾಮನ್?' ಎಂಬ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಶಾಲಾ ಬಾಲಕನೊಬ್ಬ ಮನೆಯ ಕಷ್ಟಕ್ಕೆ ಸ್ಪಂದಿಸಿ ತನ್ನ ವಿಧ್ಯಾಭ್ಯಾಸವನ್ನು ನಿಲ್ಲಿಸಿ ಹಣಕ್ಕಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ತೊಡುಗುತ್ತಾನೆ. ಈ ಚಿತ್ರದ ನಟನೆಗಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

  13. ಶಿವ ಮೆಚ್ಚಿದ ಕಣ್ಣಪ್ಪ

  ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದ `ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ನಟಿಸಿದ್ದರು. ಶಿವಣ್ಣನ ಬಾಲ್ಯದ ಪಾತ್ರದಲ್ಲಿ ಅಪ್ಪು ನಟಿಸಿದ್ದರು. ರಾಘವೇಂದ್ರ ರಾಜಕುಮಾರ್ ಮತ್ತು ಗೋವಿಂದರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಡಾ. ರಾಜಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದರು.

  ಡಾ. ರಾಜಕುಮಾರ್, ಮಹಾಲಕ್ಷ್ಮಿ ಮತ್ತು ವಾಣಿ ವಿಶ್ವನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ `ಪರಶುರಾಮ್' ಚಿತ್ರವನ್ನು ವಿ ಸೋಮಶೇಖರ್ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜಕುಮಾರ್ `ಅಪ್ಪು' ಎಂಬ ಯುವಕನ ಪಾತ್ರದಲ್ಲಿ ನಟಿಸಿದ್ದರು. 
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X