ಚಲನಚಿತ್ರಗಳ ಒಳನೋಟ
ಬಿಗ್‌ಬಾಸ್ ಕನ್ನಡ ಸೀಸನ್ 10 ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ೯ನೇ ವಾರ ನಾಮಿನೇಷನ್ ಮಾಡುವ ಅಧಿಕಾರ ಕ್ಯಾಪ್ಟನ್ ಸ್ನೇಹಿತ್ ಮಾತ್ರ ಹೊಂದಿದ್ದರು. ವಾರಾಂತ್ಯದಲ್ಲಿ ವಿಶೇಷ ಅಧಿಕಾರ ಬಳಸಿ ಕಿಚ್ಚ ಸುದೀಪ್ ಅವರ ಸ್ನೇಹಿತ್ ಹಾಗೂ ಮೈಕಲ್ ಅವರನ್ನು ಸೇವ್ ಮಾಡಿದ್ದರು. ಜೊತೆಗೆ ಈ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದರು. ಇನ್ನು ಮನೆಯವರು ಒಮ್ಮತದಿಂದ ಪವಿ ಹಾಗೂ ಅವಿ ಅವರನ್ನು ನಾಮಿನೇಟ್ ಮಾಡಿದ್ದರು. ಇದೀಗ ಸ್ನೇಹಿತ್ ಅವರು ಐದು ಮಂದಿಯನ್ನು ನಾಮಿನೇಟ್ ಮಾಡಿದ್ದು, ಒಟ್ಟಾರೆ 9 ಮಂದಿ ಮನೆಯಿಂದ ಆಯ್ಕೆಯಾಗಿದ್ದಾರೆ.