X
ಹೋಮ್ ಚಲನಚಿತ್ರಗಳ ಒಳನೋಟ

ದರ್ಶನ್ ಸಿನಿಮಾ ಜೊತೆಗೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳಿವು!

Author Sowmya Bairappa | Updated: Friday, February 14, 2025, 10:15 AM [IST]

ಶುಕ್ರವಾರ ಬಂತೆಂದರೆ ಸಿನಿಪ್ರೇಕ್ಷಕರಿಗೆ ಹಬ್ಬ. ಪ್ರತಿ ವಾರ ಹೊಸ-ಸಹೊಸ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಅಂತೆಯೇ ಈ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಜೊತೆಗೆ ಒಂದಷ್ಟು ಸಿನಿಮಾಗಳು ಬಿಡುಗಡೆಗೆಸ ಸಜ್ಜಾಗಿವೆ. ಇಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ರಾಜು ಜೇಮ್ಸ್ ಬಾಂಡ್
1

2015ರಲ್ಲಿ ರಿಲೀಸ್ ಆಗಿದ್ದ ಫಸ್ಟ್ ರ್ಯಾಂಕ್ ರಾಜು ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಹಾಸ್ಯದ ಜೊತೆಗೆ ಉತ್ತಮ ಸಂದೇಶ ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಅದೇ ಫಸ್ಟ್ ರ್ಯಾಂಕ್ ರಾಜು ಸಿನಿಮಾದ ನಾಯಕ ಗುರುನಂದನ್ ಈಗ 'ರಾಜು ಜೇಮ್ಸ್ ಬಾಂಡ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಈ ವಾರ ಸಿನಿಮಾ ಬಿಡುಗಡೆಯಾಗಲಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನ ಈ ಚಿತ್ರದಲ್ಲಿ ಮೃದುಲ ಪಟ್ಟಣಶೆಟ್ಟಿ, ಚಿಕ್ಕಣ್ಣ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಆರ್ಮುಗಂ ರವಿಶಂಕರ್, ತಬಲಾ ನಾಣಿ, ಜೈಜಗದೀಶ್ ಮುಂತಾದವರು ನಟಿಸಿದ್ದಾರೆ. ಇದೊಂದು ಹಾಸ್ಯಪ್ರಧಾನ ಸಾಹಸ ಚಿತ್ರವಾಗಿದೆ.

ಭುವನಂ ಗಗನಂ
2

ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಗಿರೀಶ್ ಮೂಲಿಮನಿ ನಿರ್ದೇಶನದ ಭುವನಂ ಗಗನಂ  ಸಿನಿಮಾ ಕೂಡ ಈ ವಾರ ಬಿಡುಗಡೆಯಾಗ್ತಿದೆ. ಚಿತ್ರದಲ್ಲಿ ಪ್ರಮೋದ್‌ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರಾಚೆಲ್ ಡೇವಿಡ್ ಹಾಗೂ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ಪೊನ್ನು ಅಶ್ವಥಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಲರ್ಶ ರೇಖಾ, ಪ್ರಜ್ವಲ್ ರೆಡ್ಡಿ, ಚೇತನ್ ದುರ್ಗ ಮುಂತಾದರು ತಾರಾಗಣದಲ್ಲಿದ್ದಾರೆ. ಗುಮ್ಮಿನೇನಿ ವಿಜಯ್ ಬಾಬು ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ಸುನೀಲ್ ಕಶ್ಯಪ್ ಸಂಕಲನ ಸಿನಿಮಾಗಿದೆ. ಎಂ ಮುನೇಗೌಡ ಗಗನಂ ಭುವನಂ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಸಿದ್ಲಿಂಗು 2
3

2012ರಲ್ಲಿ ಬಿಡುಗಡೆಯಾಗಿದ್ದ ಮೋಹಕತಾರೆ ರಮ್ಯಾ ಹಾಗೂ ಯೋಗಿ ನಟನೆಯ ಸಿದ್ಲಿಂಗು ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ವಾರ ಸಿದ್ಲಿಂಗು 2 ಚಿತ್ರ ಬಿಡುಗಡೆಯಾಗ್ತಿದೆ. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲೂಸ್‌ಮಾದ ಯೋಗೇಶ್ ನಾಯಕನಾಗಿ ಹಾಗೂ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ಮಂಜುನಾಥ್ ರಾಧಾಕೃಷ್ಣ, ಗಿರಿಜಾ ಲೋಕೇಶ್, ಮಂಜುನಾಥ್ ಹೆಗ್ಡೆ, ಸೀತಾ ಕೋಟೆ, ಬಿ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಹಾಗೂ ಪ್ರಸನ್ನ ಗುರಲಕೆರೆ ಛಾಯಾಗ್ರಹಣವಿದೆ. ಸಿದ್ಲಿಂಗು 2 ಸಿನಿಮಾವನ್ನು ಶ್ರೀಹರಿ ಹಾಗೂ ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದಾರೆ.

ನಿಮಿತ್ತ ಮಾತ್ರ
4

ರೋಷನ್ ಡಿಸೋಜಾ ನಿರ್ದೇಶನದ ನಿಮಿತ್ತ ಮಾತ್ರ ಸಿನಿಮಾ ಕೂಡ  ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಂಗೀತಾ ರಾಜೀವ್, ಅರವಿಂದ್ ಕುಪ್ಲಿಕರ್, ಲಕ್ಷ್ಮೀ ಕಾರಂತ್, ನಿತೀಶ್ ನಿಟ್ಟೂರು ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಸಿನಿಮಾ 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಒಂದು ಭಯಾನಕ ನಿಗೂಢ ಘಟನೆಯ ಮೇಲೆ ಬೆಳಕು ಚೆಲ್ಲುತ್ತದೆ.

ನಮ್ಮ ಪ್ರೀತಿಯ ರಾಮು
5

ಈ ನಾಲ್ಕು ಸಿನಿಮಾಗಳ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನಮ್ಮ ಪ್ರೀತಿಯ ರಾಮು' ದೊಡ್ಡ ಮಟ್ಟದಲ್ಲಿ ರೀ-ರಿಲೀಸ್ ಆಗ್ತಿದೆ. ಫೆಬ್ರವರಿ 16ಕ್ಕೆ ದಾಸನ ಬರ್ತಡೇ. ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನವೇ ಈ ಚಿತ್ರ ಬಿಡುಗಡೆಯಾಗ್ತಿದೆ. 2003ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಇದೀಗ 5Dಯಲ್ಲಿ ಡಿಟಿಎಸ್ ಸೌಂಡ್ ಜೊತೆಗೆ ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+