ಕಿಚ್ಚ ಸುದೀಪ್ ಪ್ಲಾಫ್ ಚಿತ್ರಗಳು | ಬಾಕ್ಸಾಫೀಸಿನಲ್ಲಿ ವಿಫಲವಾದ ಚಿತ್ರಗಳು
Updated: Tuesday, September 1, 2020, 08:57 PM [IST]
ಯಾವುದೇ ಯಶಸ್ವಿ ವ್ಯಕ್ತಿಯ ನೆಡೆದು ಬಂದ ಹಿಂದಿನ ದಾರಿ ನೋಡಿದರೆ ಅದರಲ್ಲಿ ಹಲವು ಸಂಘರ್ಷಗಳು, ಸೋಲುಗಳು ಇರುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಸಿನಿರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ.ತಮ್ಮ ಸುದೀರ್ಘ ಸಿನಿಜೀವನದಲ್ಲಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿ ತಮ್ಮ ಪ್ರತಿಭೆಗೆ ಮೆಚ್ಚುಗೆ ಪಡೆದಿದ್ದಾರೆ. ಪ್ರಸ್ತುತ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಕಿಚ್ಚ ತಮ್ಮ ಸಿನಿ ಜೀವನದಲ್ಲಿ ಆರಂಭದಲ್ಲಿ ಹಲವು ಕಷ್ಟ ಎದುರಿಸಿದ್ದುಂಟು. ಕೆಲ ಚಿತ್ರಗಳು ನಿರೀಕ್ಷೆ ಮಟ್ಟದ ಪ್ರದರ್ಶನ ಕಾಣದೇ ಬಾಕ್ಸಾಫೀಸಿನಲ್ಲಿ ಸೋತಿದ್ದುಂಟು. ಈ ಹಿಂದೆ ಕಿಚ್ಚನ ಟಾಪ್ 10 ಚಿತ್ರಗಳನ್ನು ಓದುಗರಿಗೆ ನೀಡಿದ್ದ ಫಿಲ್ಮಿಬೀಟ್ ಇಲ್ಲಿ ಸುದೀಪರ ಫ್ಲಾಫ್ ಚಿತ್ರಗಳನ್ನು ಪಟ್ಟಿ ಮಾಡಿದೆ. ಇವುಗಳಲ್ಲಿ ಕೆಲವು ಚಿತ್ರಗಳು ಆಗಿನ ಕಾಲದಲ್ಲಿ ಬಾಕ್ಸಾಫೀಸಿನಲ್ಲಿ ಸೋತರು ನಂತರ ಕಿರುತೆರೆಯಲ್ಲಿ ಉತ್ತಮ ಟಿ.ಆರ್.ಪಿ ಪಡೆದಿವೆ.