twitter
    X
    Home ಚಲನಚಿತ್ರಗಳ ಒಳನೋಟ

    ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ಕನ್ನಡದ ನಟರ ಪಟ್ಟಿ ಇಲ್ಲಿದೆ

    Author Sowmya Bairappa | Published: Wednesday, October 12, 2022, 07:27 PM [IST]

    ಬೆಂಗಳೂರಿನಲ್ಲಿ ಈ ಬಾರಿ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಜರುಗಿದೆ. ಇದು 67ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಆಗಿದ್ದು, ಮೊದಲ ಬಾರಿಗೆ 1954ರಲ್ಲಿ ಫಿಲ್ಮ್‌ಫೇರ್ ಅವಾರ್ಡ್ಸ್ ನಡೆದಿತ್ತು. ಮೊದಲಿಗೆ ಎಲ್ಲಾ ಭಾಷೆಗಳಿಗೂ ಇದ್ದ ಈ ಫಿಲ್ಮ್ ಫೇರ್ ಅವಾರ್ಡ್ಸ್ ಅನ್ನು 1963ರಿಂದ ದಕ್ಷಿಣಕ್ಕೆ ಪ್ರತ್ಯೇಕವಾಗಿ ಪ್ರಶಸ್ತಿ ಪ್ರದಾನ ಮಾಡಲು 'ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್' ಅನ್ನು ಆರಂಭಿಸಲಾಯಿತು. ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ಕನ್ನಡದ ನಟರ ಪಟ್ಟಿ ಇಲ್ಲಿದೆ.

    cover image
    ಡಾ.ರಾಜಕುಮಾರ್

    ಡಾ.ರಾಜಕುಮಾರ್

    1

    ಕನ್ನಡದ ಪರ ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ನಟ ಎಂಬ ದಾಖಲೆ ಹೊಂದಿರುವುದು ಡಾ.ರಾಜ್‌ಕುಮಾರ್. ಅಣ್ಣಾವ್ರು ಇಲ್ಲಿಯವರೆಗೂ ಒಟ್ಟು 8 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆಯುವುದರ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ಗಂಧದ ಗುಡಿ, ಮಯೂರ, ಶಂಕರ್ ಗುರು, ಕೆರಳಿದ ಸಿಂಹ, ಶ್ರಾವಣ ಬಂತು, ಅದೇ ಕಣ್ಣು, ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆಕಸ್ಮಿಕ ಚಿತ್ರಗಳ ಅಭಿನಯಕ್ಕಾಗಿ ರಾಜ್‌ಕುಮಾರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ .  

    ಅನಂತ್ ನಾಗ್

    ಅನಂತ್ ನಾಗ್

    2

    ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಅನಂತನಾಗ್ 6 ಫಿಲ್ಮ್ ಫೇರ್ ಅತ್ಯುತ್ತಮ ನಾಯಕ ನಟ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

    ಪುನೀತ್ ರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್

    3

    ಪುನೀತ್ ರಾಜ್‌ಕುಮಾರ್ ಐದು ಬಾರಿ ಅತ್ಯುತ್ತಮ ನಟ ಹಾಗೂ ಒಂದು ಬಾರಿ ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ಬೆಟ್ಟದ ಹೂವು, ಅರಸು, ಹುಡುಗರು, ರಣವಿಕ್ರಮ ಹಾಗೂ ರಾಜಕುಮಾರ ಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಈ ವರ್ಷ ಜೀವಮಾನ ಶ್ರೇಷ್ಟ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅಪ್ಪು ಹಾಗೂ ಅನಂತ್‌ನಾಗ್ ಆರು ಬಾರಿ ಫಿಲ್ಮ್‌ಫೇರ್ ಗೆಲ್ಲುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.

    ವಿಷ್ಣುವರ್ಧನ್

    ವಿಷ್ಣುವರ್ಧನ್

    4

    ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ವಿಷ್ಣುವರ್ಧನ್ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿದಾಗ ಇವರಿಗೆ ವಿಷ್ಣುವರ್ಧನ್ ಎಂದು ಕರೆಯಲಾಗಿತ್ತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ. ವಿಷ್ಣುವರ್ಧನ್ ಅವರಿಗೆ 4 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು.  

    ಶಿವರಾಜಕುಮಾರ್

    ಶಿವರಾಜಕುಮಾರ್

    5

    ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವಣ್ಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ. ಸುಮಾರು ಮೂರು ದಶಕಗಳಿಂದ ನೂರಿಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಡಾ.ಶಿವರಾಜಕುಮಾರ್,  4 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.  

    ಸುದೀಪ್

    ಸುದೀಪ್

    6

    'ಕಿಚ್ಚ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ಪ್ರತಿಭೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 3 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.  

     

    ಯಶ್

    ಯಶ್

    7

    ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್  ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಯಶ್ ಅವರಿಗೆ 2 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.  

    ರಮೇಶ್ ಅರವಿಂದ್

    ರಮೇಶ್ ಅರವಿಂದ್

    8

    ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರಾದ ರಮೇಶ್ ಅರವಿಂದ್ ಅವರಿಗೆ  2 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

     

    ಗಣೇಶ್

    ಗಣೇಶ್

    9

    ಗೋಲ್ಡನ್ ಸ್ಟಾರ್ ಪ್ರಸಿದ್ಧರಾಗಿರುವ ಗಣೇಶ್ ಅವರಿಗೆ  2 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. 

    ಎಸ್.ಪ್ರೇಮ್ ಕುಮಾರ್

    ಎಸ್.ಪ್ರೇಮ್ ಕುಮಾರ್

    10

    ನೆನಪಿರಲಿ ಪ್ರೇಮ್ ಗೆ 2 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X