ಚಲನಚಿತ್ರಗಳ ಒಳನೋಟ
ಜನ್ಮ ಕೊಡುವವಳು ತಾಯಿಯಾದರೇ, ಬದುಕು ಕೊಡುವವನು ತಂದೆ. ಅಪ್ಪ ಎನ್ನುವ ಪದಕ್ಕೆ ಸಾವಿರ ಆನೆಗಳ ಬಲ ಇರುತ್ತದೆ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸುವ ಮ್ಯಾಜಿಕ್ ಬಾಕ್ಸ್. ಪ್ರತಿಯೊಬ್ಬ ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಇಡೀ ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಸಾಗುವ ತಂದೆ, ಭಾವನೆಗಳನ್ನು ವ್ಯಕ್ತಪಡಿಸಲಾಗದಂತಹ ಪಾಪದ ಜೀವಿ. ಇಂದು ಅಂತಹ ತಂದೆಯರ ದಿನ. ಇಲ್ಲಿ ಅಪ್ಪನ ಮಹತ್ವ ಸಾರುವ ಕೆಲ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.