ಚಲನಚಿತ್ರಗಳ ಒಳನೋಟ
ಮದುವೆ ಎಂದರೆ ಸಂಭ್ರಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ, ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಎಲ್ಲರಿಗೂ ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರವಿರುತ್ತದೆ. ಕೆಲವೊಮ್ಮೆ ಕುಟುಂಬಸ್ಥರೇ ನೋಡಿ ಮದುವೆ ಮಾಡಿದ್ದರೂ ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. ಇನ್ನು ಕೆಲವೊಮ್ಮೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ಮುರಿದು ಬೀಳುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರರಂಗದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾದ ಕನ್ನಡದ ನಟಿಯರ ಪಟ್ಟಿಯನ್ನು ನೀಡಲಾಗಿದೆ.