X
ಹೋಮ್ ಚಲನಚಿತ್ರಗಳ ಒಳನೋಟ

ರಾಮಾಚಾರಿ ಚಾರುಯಿಂದ ಅಮೃತಧಾರೆ ಮಲ್ಲಿಯವರೆಗೆ: 2025ರಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾದ ಸೀರಿಯಲ್ ನಟಿಯರಿವರು!

Author Sowmya Bairappa | Updated: Friday, February 7, 2025, 10:00 AM [IST]

ಧಾರಾವಾಹಿ ನಟರು, ರಿಯಾಲಿಟಿ ಶೋನಲ್ಲಿ ಮಿಂಚಿದವರು ಚಿತ್ರರಂಗಕ್ಕೆ ಬರೋದು ಹೊಸತೇನಲ್ಲ. ಅನೇಕ ಕಲಾವಿದರು ಧಾರಾವಾಹಿಗಳಿಂದ ಜನಪ್ರಿಯತೆ ಪಡೆದುಕೊಂಡು ಆಮೇಲೆ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಾರೆ. ಇನ್ನೂ ಕೆಲವರು ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆಯಿಂದ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಕಿರುತೆರೆಯಲ್ಲಿ ಮಿಂಚಿದ ಅನೇಕ ಕಲಾವಿದರು ಇಂದು ಬೆಳ್ಳಿತೆರೆ ಮೇಲೆ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಪ್ರತಿವರ್ಷ ಇಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ 2025ರಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾದ ಸೀರಿಯಲ್ ನಟಿಯರು ಹಾಗೂ ಅವರು ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ.


cover image
ಮೌನ ಗುಡ್ಡೆಮನೆ
1

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ರಾಮಾಚಾರಿ ಸೀರಿಯಲ್‌ನಲ್ಲಿ 'ಚಾರು' ಪಾತ್ರದ ಮೂಲಕ ಕರ್ನಾಟಕದ ಮನೆಮಾತಾಗಿರುವ ಮೌನ ಗುಡ್ಡೇಮನೆ, ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ನಟಿ ಯೋಗರಾಜ್ ಭಟ್ ಜೊತೆ ಕೆಲಸ ಮಾಡಿ ಅನುಭವವಿರುವ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.

ರಾಧಾ ಭಗವತಿ
2

ಜೀ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ 'ಮಲ್ಲಿ' ಎಂಬ ಮುಗ್ಧ ಹಳ್ಳಿಹುಡುಗಿ ಪಾತ್ರದ ಮೂಲಕ ಜನಮನ ಗೆದ್ದ ರಾಧಾ ಭಗವತಿ, ಸಿನಿಮಾರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಆ 90 ದಿನಗಳು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಇವರು, ನಂತರ ವಸಂತ ಕಾಲದ ಹೂಗಳು ಚಿತ್ರದಲ್ಲಿ ನಟಿಸಿದ್ದರು. ಇದೀಗ ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಚಿತ್ರದಲ್ಲಿ ನಟಿಸಿದ್ದು, ಫೆಬ್ರವರಿ 21ರಂದು ಬಿಡುಗಡೆಗೆ ಸಜ್ಜಾಗಿದೆ.

ಕೌಸ್ತುಭ ಮಣಿ
3

ನನ್ನರಸಿ ರಾಧೆ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಕೌಸ್ತುಭ ಮಣಿ, ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆಗೆದ್ದರು. ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ನಿರ್ದೇಶನದ 45 ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರು, ರಾಜ್‌ ಬಿ ಶೆಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲಿದೆ.

ಆಸಿಯಾ ಫಿರ್ದೋಸ್
4

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಸೀರಿಯಲ್‌ನಲ್ಲಿ ಶ್ರಾವಣಿಯಾಗಿ ಮಿಂಚುತ್ತಿರುವ ಆಸಿಯಾ ಫಿರ್ದೋಸ್, 2023ರಲ್ಲಿ ರಿಲೀಸ್ ಆಗಿದ್ದ ಭರತ್ ಲಕ್ಷ್ಮಿಕಾಂತ ನಿರ್ದೇಶನದ ಹಾಗೂ ಉಗ್ರಂ ಖ್ಯಾತಿಯ ತಿಲಕ್ ನಾಯಕನಾಗಿ ನಟಿಸಿದ್ದ 'ದ್ವಂದ್ವ' ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಕೋಮಲ್ ಅಭಿನಯದ 'ಕಾಲಾಯ ತಸ್ಮೈ ನಮಃ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಮಲೈಕಾ ಟಿ ವಸುಪಾಲ್
5

'ಹಿಟ್ಲರ್ ಕಲ್ಯಾಣ' ಸೀರಿಯಲ್‌ನಲ್ಲಿ ಎಡವಟ್ಟು ಲೀಲಾಳಾಗಿ ಕಾಣಿಸಿಕೊಂಡಿದ್ದ ಮಲೈಕಾ ವಸುಪಾಲ್, ಚಿಕ್ಕಣ್ಣ ಅಭಿನಯದ 'ಉಪಾದ್ಯಕ್ಷ' ಸಿನಿಮಾದಲ್ಲಿ ಮಲೈಕಾ ನಾಯಕಿಯಾಗಿ ಮಿಂಚಿದ್ದರು. ಈ ಸಿನಿಮಾ ಕೂಡ ತಕ್ಕಮಟ್ಟಿನ ಯಶಸ್ಸು ಕಂಡಿತ್ತು. ಇದೀಗ ನಾಗಭೂಷಣ್ ನಟನೆಯ 'ವಿದ್ಯಾಪತಿ' ಹಾಗೂ ಝೈದ್ ಖಾನ್ ಅಭಿನಯದ 'ಕಲ್ಟ್' ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ.

ಅಂಕಿತಾ ಅಮರ್
6

 'ನಮ್ಮನೆ ಯುವರಾಣಿ'ಯಲ್ಲಿ ಮೀರಾ ಪಾತ್ರದ ಮೂಲಕ ಜನಮನಗೆದ್ದ ಅಂಕಿತಾ ಅಮರ್, ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ಸೂಚಿಸಿದ್ದರು. ಇದಲ್ಲದೇ ನಿರೂಪ್ ಭಂಡಾರಿ ನಟನೆಯ ಸತ್ಯ ಸನ್ ಆಫ್ ಹರಿಶ್ಚಂದ್ರ, ಪೃಥ್ವಿ ಅಂಬಾರ್ ನಟನೆಯ ಅಬ ಜಬ ದಬ, ಶೈನ್ ಶೆಟ್ಟಿ ಜೊತೆಗೆ ಜಸ್ಟ್ ಮ್ಯಾರೀಡ್ ಚಿತ್ರಗಳಲ್ಲಿಯೂ ಅಂಕಿತಾ ನಟಿಸುತ್ತಿದ್ದಾರೆ.

ಮೇಘಾ ಶೆಟ್ಟಿ
7

ಜೊತೆ ಜೊತೆಯಲಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಮೇಘಾ ಶೆಟ್ಟಿ, ಅನು ಸಿರಿಮನೆ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಆನಂತರ  ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್, ಧನ್ವೀರ್ ಗೌಡ ಅವರೊಂದಿಗೆ ಕೈವ ಚಿತ್ರಗಳಲ್ಲಿ ನಟಿಸಿದರು. ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+