ಚಲನಚಿತ್ರಗಳ ಒಳನೋಟ
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನಿನಗಾಗಿ' ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಇತ್ತೀಚೆಗಷ್ಟೇ ಆರಂಭವಾದ 'ನಿನಗಾಗಿ' ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಲರ್ಸ್ ಕನ್ನಡ ಬಿಡುವ ಪ್ರೋಮೋಗಳಿಗೆ ಜನ ಕಮೆಂಟ್ ಹಾಕುವ ಮೂಲಕ ತಮ್ಮ ಬೆಂಬಲ ನೀಡುತ್ತಿದ್ದು, ಕಥೆ ಜನರಿಗೆ ಇಷ್ಟವಾಗಿದೆ. ಇದರಲ್ಲಿ ಎರಡು ವಿಶೇಷ ಪಾತ್ರಗಳಿದ್ದು, ಅದರಲ್ಲಿ ಜೀವ ಮತ್ತು ಕೃಷ್ಣಾಳ ಪಾತ್ರ ಒಂದು ರೀತಿ ಸಾಗುತ್ತಿದ್ದರೆ, ರಚ್ಚು ಕಥೆ ಮತ್ತೊಂದು ರೀತಿ ಸಾಗುತ್ತಿದೆ. ಈ ಮೂವರು ಒಂದಾದರೆ ಕಥೆಯೇ ಬೇರೆ ಆಗಲಿದೆ. ಇಲ್ಲಿ ನಿನಗಾಗಿ ಸೀರಿಯಲ್ ಕಲಾವಿದರ ವಯಸ್ಸು, ವಿದ್ಯಾರ್ಹತೆ ಸೇರಿದಂತೆ ಇತರ ಮಾಹಿತಿ ನೀಡಲಾಗಿದೆ.