twitter
    X
    Home ಚಲನಚಿತ್ರಗಳ ಒಳನೋಟ

    2022 ಮಾರ್ಚ್ ತಿಂಗಳಿನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಪ್ರಮುಖ ವೆಬ್ ಸೀರಿಸ್ ಗಳು

    Author Administrator | Updated: Friday, April 1, 2022, 10:24 AM [IST]

    ಇಲ್ಲಿ 2022 ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗುವ ಪ್ರಮುಖ ವೆಬ್ ಸೀರಿಸ್ ಗಳು ಮತ್ತು ಅವುಗಳು ಬಿಡುಗಡೆಯಾಗುತ್ತಿರುವ ಓಟಿಟಿ ಮಾಧ್ಯಮಗಳ ಮಾಹಿತಿಯಿದೆ. ಅಜಯ್ ದೇವಗನ್ ಮತ್ತು ರಾಶಿ ಖನ್ನಾ ರುದ್ರ ಸೀರಿಸ್ ಮೂಲಕ ವೆಬ್ ಸೀರಿಸ್ ಜಗತ್ತಿಗೆ ಕಾಲಿಡುತ್ತಿದ್ದಾರೆ.

    cover image

    ರುದ್ರ

    ರುದ್ರ ಮೂಲಕ ಅಜಯ್ ದೇವಗನ್ ಮೊದಲ ಬಾರಿಗೆ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಜಯ್ ಜೊತೆ ರಾಶಿ ಖನ್ನಾ ಮತ್ತು ಈಶಾ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸೀರಿಸ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಮಾರ್ಚ್ 4 ರಂದು ಬಿಡುಗಡೆಯಾಗಿದೆ.

    ಅನದೇಖಿ ಸೀಸನ್ 2

    ದಿಬೇಂದು ಭಟ್ಟಾಚಾರ್ಯ, ಸೂರ್ಯ ಶರ್ಮಾ, ಹರ್ಷ ಛಾಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಅನದೇಖಿ ಸೀಸನ್ ಸೋನಿ ಲಿವ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈಗ ಮಾರ್ಚ್ 4 ರಿಂದ ಸೀಸನ್ 2 ಬಿಡುಗಡೆಯಾಗಲಿದೆ.

    ಬ್ಲಡಿ ಬ್ರದರ್ಸ್

    ಜೈದೀಪ್ ಅಹ್ಲಾವಟ್ ಮತ್ತು ಜೀಶನ್ ಅಯ್ಯೂಬ್ ಮುಖ್ಯ ಪಾತ್ರಗಳಲ್ಲಿ ನಟಿಸಿದರುವ ಬ್ಲಡಿ ಬ್ರದರ್ಸ್ ಸೀರೀಸ್ ಜೀ5 ನಲ್ಲಿ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಇದು ಬ್ರಿಟೀಷ್ ಮಿಸ್ಟರಿ ಥ್ರಿಲ್ಲರ್ `ಗಿಲ್ಟ್' ದ ರಿಮೇಕ್ ಆಗಿದೆ.

    ಬ್ರಿಡ್ಜ್ ಟನ್ ಸೀಸನ್ 2

    ಪೀಬ್ ಡೈನವರ್, ರೀಜ್ ಜೀನ್ ಪೇಜ್ ಮತ್ತು ನಿಕೋಲಾ ಕೌಫ್ಲನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಬ್ರಿಡ್ಜ್ ಟನ್ ಸೀಸನ್ 2 ಮಾರ್ಚ್ 25 ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಈ ಸೀಸನ್ ನಲ್ಲಿ ಅಂಥೋನಿ ತನ್ನ ಪ್ರೇಯಸಿಯಡೆಗಿನ ಪಯಣವನ್ನು ಚಿತ್ರಿಸಿದೆ.

    ಮೂನ್ ನೈಟ್

    ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಈ ಮಿನಿ ವೆಬ್ ಸರಣಿ ಮಾರ್ಚ್ 30 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಆಸ್ಕರ್ ಐಸಾಕ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಈಜಿಪ್ಟಿಯನ್ ದೇವತೆಗಳ ಕುರಿತ ಕಥೆಯಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X