ಸಿನಿಮಾ ತಾರೆಯರ ಮದುವೆಯೆಂದರೆ ಕೇಳುವುದೇ ಬೇಡ. ಅಲ್ಲಿ ಆಡಂಬರ, ಅದ್ಧೂತನ ಜೋರಾಗಿಯೇ ಇರುತ್ತದೆ. ಮದುವೆ ಎಂಬುದು ಜೀವನದಲ್ಲಿ ಇಂದು ಬಾರಿ ನಡೆಯುವಂಥದ್ದು. ಹೀಗಾಗಿ, ಅದನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕೆಂಬುದು ಹಲವರ ಆಸೆ. ಸೆಲೆಬ್ರಿಟಿಗಳ ಮದುವೆಯಲ್ಲಿ ಅವರು ತೊಡುವ ಕಾಸ್ಟ್ಯೂಮ್‌ನಿಂದ ಹಿಡಿದು ಎಲ್ಲವೂ ದುಬಾರಿ ಬೆಲೆಯುಳ್ಳವಾಗಿರುತ್ತವೆ. ಆದರೆ, ಕೆಲ ಸೆಲೆಬ್ರಿಟಿಗಳು ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಿದ್ದಾರೆ. ಅಂತಹ ತಾರೆಯರ ಪಟ್ಟಿ ಇಲ್ಲಿದೆ.