twitter
    X
    Home ಚಲನಚಿತ್ರಗಳ ಒಳನೋಟ

    ಐಷಾರಾಮಿ ಕಾರುಗಳನ್ನು ಹೊಂದಿರುವ ಕನ್ನಡ ಟಿವಿ ಸೆಲೆಬ್ರಿಟಿಗಳು

    Author Sowmya Bairappa | Published: Friday, September 23, 2022, 01:56 PM [IST]

    ಇತ್ತೀಚಿಗೆ ಹಲವಾರು ನಟ-ನಟಿಯರು ಐಷಾರಾಮಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕಿರುತೆರೆ ಸೆಲೆಬ್ರಿಟಿಗಳು ಕೂಡ ದುಬಾರಿ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಐಷಾರಾಮಿ ಕಾರುಗಳನ್ನು ಹೊಂದಿರುವ ಕನ್ನಡ ಟಿವಿ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ.

    cover image
    ಚೈತ್ರಾ ವಾಸುದೇವನ್

    ಚೈತ್ರಾ ವಾಸುದೇವನ್

    1

    ಚೈತ್ರಾ ವಾಸುದೇವನ್ 'ಬಿಗ್ ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿ. ದೊಡ್ಮನೆ ಪ್ರವೇಶಿಸುವ ಮೂಲಕ ಅನೇಕ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಜೊತೆಗೆ ಇವರು ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿಯಾಗಿದ್ದಾರೆ. ಚೈತ್ರಾ ವಾಸುದೇವನ್ ಇತ್ತೀಚೆಗೆ ಐಷಾರಾಮಿ ರೇಂಜ್ ರೋವರ್ ಇವೋಕ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ರೇಂಜ್ ರೋವರ್ ಇವೋಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. 

    ರಕ್ಷ (ರಕ್ಷಿತ್ ಗೌಡ)

    ರಕ್ಷ (ರಕ್ಷಿತ್ ಗೌಡ)

    2

    ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟ ರಕ್ಷ್‌ ಕೂಡ ದುಬಾರಿ ಕಾರು ಖರೀದಿಸಿದ್ದಾರೆ. ರಕ್ಷ್‌ ಕೊಂಡುಕೊಂಡಿರುವ ಆಡಿ ಎ5 ಸ್ಪೋರ್ಟ್. ಇದರ ಬೆಲೆ 60 ಲಕ್ಷ ರೂಪಾಯಿ.  

     

    ಕಿರಣ್ ರಾಜ್

    ಕಿರಣ್ ರಾಜ್

    3

    'ಕನ್ನಡತಿ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿರುವ ಕಿರಣ್ ರಾಜ್ ಕೂಡ ಇತ್ತೀಚಿಗೆ ದುಬಾರಿ ಕಾರು ಖರೀದಿಸಿದ್ದಾರೆ.  ಕಿರಣ್ ರಾಜ್ ಕಪ್ಪು ಬಣ್ಣದ ಮರ್ಸಿಡೀಸ್ ಬೆಂಜ್ ಕಾರನ್ನು ಹೊಂದಿದ್ದಾರೆ.  ಕಿರಣ್ ರಾಜ್ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಕಲಾವಿದ. ಜೊತೆಗೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಹಿಂದಿಯ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.

    ಚಂದು ಗೌಡ

    ಚಂದು ಗೌಡ

    4

    ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ  ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಂದ್ರು ಗೌಡ ಇತ್ತೀಚಿಗಷ್ಟೆ ಬಿಡುಗಡೆಯಾದ ದರ್ಶನ್ ನಟನೆಯ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು. ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿ ಚಂದು ಗೌಡ ವಿಲನ್ ಆಗಿ ಅಭಿನಯಿಸಿದ್ದಾರೆ. 

    ಶಮಂತ್ (ಬ್ರೋ ಗೌಡ)

    ಶಮಂತ್ (ಬ್ರೋ ಗೌಡ)

    5

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಶಮಂತ್ ಬ್ರೋ ಗೌಡ, BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಬ್ರೋ ಗೌಡ ಆವರ ಕಾರನ್ನು ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ರೈಡ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿತ್ತು. ಈ ಕಾರಿನ ಬೆಲೆ 40 ಲಕ್ಷ. 

    ಶೈನ್ ಶೆಟ್ಟಿ

    ಶೈನ್ ಶೆಟ್ಟಿ

    6

    ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್, ಕಿರುತೆರೆ ನಟ ಮತ್ತು ನಿರೂಪಕ  ಶೈನ್ ಶೆಟ್ಟಿ  ನೀಲಿ ಬಣ್ಣದ ಬಿಎಂಡಬ್ಲ್ಯೂ ಕಾರು ಹೊಂದಿದ್ದಾರೆ.  ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಪ್ರೇಕ್ಷಕರ ಮನಗೆದ್ದು,  'ಬಿಗ್ ಬಾಸ್-7' ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಬಿಗ್ ಸ್ಪರ್ಧೆಯ 50 ಲಕ್ಷ ಹಣದ ಜೊತೆ ಕಾರನ್ನು ಸಹ ಗಿಫ್ಟ್ ಆಗಿ ಪಡೆದಿದ್ದರು. 

    ನಮ್ರತಾ ಗೌಡ

    ನಮ್ರತಾ ಗೌಡ

    7

    ಕಿರುತೆರೆ ನಟಿ ನಮ್ರತಾ  ಗೌಡ ಕಾರು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ 18 ಲಕ್ಷ ಮೌಲ್ಯದ SUV ಕಾರನ್ನು ಖರೀದಿಸಿದ್ದಾರೆ. ತನ್ನ ಕನಸಿನ ಕಾರನ್ನು ಖರೀದಿಸಿರುವ  ನಮ್ರತಾ, ಇದು ತನ್ನ ಜೀವನದಲ್ಲಿ ಬಹಳ ಮುಖ್ಯವಾದ ದಿನ ಎಂದು ಹೇಳಿಕೊಂಡಿದ್ದರು.  

    ಅನುಪಮಾ ಗೌಡ

    ಅನುಪಮಾ ಗೌಡ

    8

    ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಕೂಡ ಇತ್ತೀಚೆಗೆ SUV ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ  20 ಲಕ್ಷ. ಇದು ನಟಿ ಅನುಪಮಾ ಅವರ ಮೂರನೇ ಕಾರಾಗಿದೆ. 

    ನಿವೇದಿತಾ ಗೌಡ

    ನಿವೇದಿತಾ ಗೌಡ

    9

    ರಿಯಾಲಿಟಿ ಷೋಗಳ ಮೂಲಕ ಮನೆ ಮಾತಾಗಿರುವ ನಿವೇದಿತಾ ಗೌಡ ಕೂಡ ತಮ್ಮ ಸ್ವಂತ ಸಂಪಾದನೆಯಲ್ಲಿ SUV ಕಾರು ಖರೀದಿಸಿದ್ದಾರೆ. ಇದರ ಬೆಲೆ 10 ಲಕ್ಷ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X