X
ಹೋಮ್ » ಸೆಲಬ್ರಿಟಿಗಳು » ಅನುಪಮಾ ಗೌಡ
ಅನುಪಮಾ ಗೌಡ

ಅನುಪಮಾ ಗೌಡ

Actress
ಜೀವನ ಚರಿತ್ರೆ :  ಅನುಪಮಾ ಗೌಡ ಕನ್ನಡ ಕಿರುತೆರೆಯಾ ಜನಪ್ರಿಯ ನಟಿ ಕಮ್ ನಿರೂಪಕಿ. ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಕನ್ನಡ ಹಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂತರ ಅಕ್ಕ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಿತರಾದರು. ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಹಿಸುವುದರ ಮೂಲಕ ಸೈ ಎನಿಸಿಕೊಂಡರು. ಅಕ್ಕ ಧಾರಾವಾಹಿಗೂ ಮೊದಲು ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿ, ಎಲ್ಲರ ಮನೆ ಮಾತಾದರು.   ನಂತರ ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ವೀಕ್ಷಕರ ಗಮನ ಸೆಳೆದರು. ನಂತರ ಜಯರಾಮ್ ಕಾರ್ತಿಕ್ ಅಭಿನಯದ  ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದರು.  ಬಳಿಕ ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ (2019) ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದರು. ಜೊತೆಗೆ ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು.  ಇದೀಗ ಎರಡನೇ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಎಂಟ್ರಿ ಕೊಟ್ಟಿದ್ದಾರೆ. 
ಮುಂದೆ ಓದಿ

ಅನುಪಮಾ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನುಪಮಾ ಗೌಡ

ಹೆಸರು ಅನುಪಮಾ ಗೌಡ
ಹುಟ್ಟಿದ ದಿನ 20 Mar 1991
ವಯಸ್ಸು 35
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನುಪಮಾ ಗೌಡ ಆಸ್ತಿ

ಆಸ್ತಿ

ಅನುಪಮಾ ಗೌಡ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+