ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ಕನ್ನಡದ ಟಾಪ್ 10 ಚಿತ್ರಗೀತೆಗಳು
  Published: Thursday, February 20, 2020, 04:59 PM [IST]
  ಇಂದಿನ ಜಾಗತಿಕ ಸಿನಿ ಜಗತ್ತಿನಲ್ಲಿ ಸಿನಿ ದಾಖಲೆಗಳು ಕೂಡ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತಿವೆ...ಟ್ವಿಟರ್ ಟ್ರೆಂಡ್ಸ್, ಯೂಟ್ಯೂಬ್ ವೀಕ್ಷಣೆ ಮತ್ತು ಲೈಕ್ಸ್ ಹೀಗೆ ಹತ್ತು ಹಲವು ಡಿಜಿಟಲ್ ದಾಖಲೆಗಳು ದಾಖಲಾಗುತ್ತಿವೆ. ಇತ್ತೀಚಿಗಷ್ಟೆ ಶರಣ್ ಮತ್ತು ಆಶಿಕಾ ರಂಗನಾಥ್ ರ `ಚುಟು ಚುಟು' ಗೀತೆ ನೂರು ಮಿಲಿಯನ್ ವೀಕ್ಷಣೆ ಪಡೆದ ಕನ್ನಡ ಗೀತೆಯಾಗಿ ದಾಖಲಾಯಿತು. ಇಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಗೀತೆಗಳಿವೆ ನೋಡಿ.
  1. ರ‍್ಯಾಂಬೋ 2 - ಚುಟು ಚುಟು - 110+ Million Views
  ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ರಾಂಬೋ ಚಿತ್ರಗೀತೆ ನೂರು ಮಿಲಿಯನ್ ವೀಕ್ಷಣೆ ಪಡೆದ ಕನ್ನಡದ ಮೊದಲ ಗೀತೆಯಾಗಿ ದಾಖಲೆಯಾಗಿದೆ.ಉತ್ತರ ಕರ್ನಾಟಕ ಶೈಲಿಯ ಈ ಗೀತೆ ರವೀಂದ್ರ ಸೊರಗಾವಿ ಮತ್ತು ಶಮಿತಾ ಮಲ್ನಾಡ್ ಧ್ವನಿಯಲ್ಲಿ ಮೂಡಿಬಂದಿತ್ತು.
  2. ಕಿರಿಕ್ ಪಾರ್ಟಿ - ಬೆಳಗೆದ್ದು - 94+ Million Views
  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ `ಬೆಳಗೆದ್ದು' ಗೀತೆ 90 ಕ್ಕೂ ಅಧಿಕ ವೀಕ್ಷಣೆ ಪಡೆದಿದೆ.ಚಿತ್ರ ಬಿಡುಗಡೆಗೂ ಮೊದಲೇ ಬಿಡುಗಡೆಯಾಗಿ ಹಿಟ್ ಆಗಿದ್ದ ಈ ವಿಡಿಯೋ ಗೀತೆ ಪ್ರೇಕ್ಷಕರ ಚಿತ್ರಮಂದಿರಕ್ಕೆ ಬರಲು ಒಂದು ಮುಖ್ಯ ಕಾರಣವಾಯಿತು.
  3. ಅಯೋಗ್ಯ - ಏನಮ್ಮಿ - 85+ Million Views
  ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಗೀತೆ 80 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ. ಅರ್ಜುನ ಜನ್ಯ ಸಂಗೀತದ ಈ ಹಾಡು ವಿಜಯ್ ಪ್ರಕಾಶ್ ಮತ್ತು ಪಾಲಕ ಮುಚ್ಚಲ್ ಕಂಠಸಿರಿಯಲ್ಲಿ ಮೂಡಿಬಂದು ಯ್ಯೂಟ್ಯೂಬ್ ನಲ್ಲಿ ಮಾತ್ರವಲ್ಲದೇ ಗಾನಾ ಆ್ಯಪ್ ನಲ್ಲಿ ಕೂಡ ದಾಖಲೆ ಮಾಡಿದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X