Updated: Tuesday, December 31, 2019, 12:27 PM [IST]
ಕನ್ನಡದಲ್ಲಿ ಭೂಗತ ಜಗತ್ತಿನ ವಿಷಯಗಳ ಮೇಲೆ ಬಂದಿರುವ ಚಿತ್ರಗಳಿಗೇನು ಕೊರತೆಯಿಲ್ಲ. ಭೂಗತ ಲೋಕದ ಕಥೆಗಳ ಮೇಲೆ ಹಲವಾರು ಚಿತ್ರಗಳು ತೆರೆಗೆ ಬಂದಿದ್ದರೂ ಕೆಲವೊಂದು ಮಾತ್ರ ಯಶಸ್ವಿಯಾಗಿವೆ. ಇನ್ನೂ ಕೆಲವು ಚಿತ್ರಗಳು ತಮ್ಮ ವಿಭಿನ್ನ ಕಥಾನಕಗಳು ಮತ್ತು ಹಲವು ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನಮಾನ ಪಡೆದಿವೆ.
ಓಂ ,ಕರಿಯ ಚಿತ್ರಗಳಲ್ಲಿ ನಿಜವಾದ ರೌಡಿಗಳೇ ಕೆಲವು ಪಾತ್ರದಲ್ಲಿ ನಟಿಸಿದರೆ, ಆ ದಿನಗಳು, ಡೆಡ್ಲಿ ಸೋಮ, ಬೆತ್ತನಾಗರೆ ಮುಂತಾದ ಚಿತ್ರಗಳು ನಿಜವಾದ ಭೂಗತ ಲೋಕದ ಕತೆಯನ್ನು ಹೊಂದಿದ್ದವು. ಭೂಗತ ಲೋಕದ ಟಾಪ್ 10 ಚಿತ್ರಗಳು ಈ ಪಟ್ಟಿಯಲ್ಲಿವೆ.
ಕನ್ನಡ ಚಿತ್ರರಂಗದಲ್ಲಿ ಭೂಗತ ಲೋಕದ ಮೊದಲ ಛಾಯೆಯನ್ನು ಚೆಲ್ಲಿದ ಚಿತ್ರ ಓಂ ಎಂದು ಹೇಳಬಹುದು. ಭೂಗತ ಲೋಕದ ಹಿನ್ನಲೆಯಲ್ಲಿ ಅರಳುವ ಪ್ರೇಮವನ್ನು ಚಿತ್ರ ಬಿಂಬಿಸಿತ್ತು. ಹಲವು ಬಾರಿ ರೀ ರೀಲಿಸ್ ಆಗಿ ದಾಖಲೆ ಬರೆದಿದೆ.
Top 10 Kannada Underworld And Gangster Movies-Om/top-listing/top-10-kannada-underworld-and-gangster-movies-om-3-321-38.html
ಸುಮಾರು 800 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆದ ಈ ಚಿತ್ರದಲ್ಲಿ ಭೂಗತ ಲೋಕದ ಕುಖ್ಯಾತ ರೌಡಿಯಾಗಿ ದರ್ಶನ್ ನಟಿಸಿದ್ದಾರೆ.ಈ ಚಿತ್ರ ಕೂಡ ಸುಮಾರು ಹದಿನೈದು ಮರುಬಿಡುಗಡೆಗೊಂಡಿದೆ.
Top 10 Kannada Underworld And Gangster Movies-Kariya/top-listing/top-10-kannada-underworld-and-gangster-movies-kariya-3-322-38.html