X
ಪ್ರೇಮಾ

ಪ್ರೇಮಾ

Actress
ಜೀವನ ಚರಿತ್ರೆ :  ಪ್ರೇಮಾ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿರುವ ಪ್ರಮುಖ ನಟಿ. ಸಾಕಷ್ಟು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯ ಪ್ರೌಡಿಮೆ ಮೆರೆದಿರುವ ಪ್ರೇಮಾ, 1977ರ ಜನವರಿ 6ರಂದು ಕೊಡಗಿನ ನೆರವಂಡ ಕುಟುಂಬದಲ್ಲಿ ಜನಿಸಿದರು.   ಮೂರ್ನಾಡು ಜೂನಿಯರ್ ಕಾಲೇಜಿನಿಂದ ಪಿಯುಸಿ ಮುಗಿಸಿದ ಪ್ರೇಮಾ, ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕೂಡ ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿಕೊಂಡಿದ್ದು, ಕನ್ನಡ ಬಿಗ್‌ಬಾಸ್‌ನಲ್ಲಿ ಕೂಡ ಭಾಗವಹಿಸಿದ್ದಾರೆ.   ವೃತ್ತಜೀವನ 1995ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ  `ಸವ್ಯಸಾಚಿ' ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರ `ಆಟ ಹುಡುಗಾಟ' ಸಿನಿಮಾಗಳಿಂದ ಸಿನಿಪಯಣ ಆರಂಭಿಸಿದರು. ನಂತರ ಶಿವಣ್ಣರವರ `ಓಂ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಅದ್ಭುತ ನಟನೆ ನೀಡಿದರು.   ನಂತರ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿ, ಅಲ್ಲಿಯೂ ತಮ್ಮ ಅಭಿನಯ ಪ್ರತಿಭೆ ಸಾಬೀತು ಪಡಿಸಿದರು. ನಾನು ನನ್ನ ಹೆಂಡ್ತಿರು, ಯಜಮಾನ, ಕನಸುಗಾರ, ಆಪ್ತಮಿತ್ರ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ, 'ಸಿಂಗಾರೆವ್ವ' ಎಂಬ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಸುಮಾರು ಏಳು ಚಿತ್ರಗಳಲ್ಲಿ ನಟಿಸಿದ್ದಾರೆ.   2006ರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾದ ಪ್ರೇಮಾ ತಮ್ಮ ಸಿನಿಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿದರು. ನಂತರ 2009ರಲ್ಲಿ `ಶಿಶಿರ' ಎಂಬ ಚಿತ್ರದಲ್ಲಿ ನಟಿಸಿದರು. ಸುಮಾರು 70ಕ್ಕೂ ಹೆಚ್ಚು ಕನ್ನಡ ಮತ್ತು 28 ತೆಲುಗು ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ, 2017ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಿಂದ ಮತ್ತೆ ಸಿನಿಪಯಣ ಆರಂಭಿಸಿದರು. ವಿಚ್ಚೇದನ: 2016ರಲ್ಲಿ ತಮ್ಮ ಹತ್ತು ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿ ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದರು.   
ಮುಂದೆ ಓದಿ

ಪ್ರೇಮಾ ಚಲಚಿತ್ರಗಳು

ಪ್ರೇಮಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರೇಮಾ

ಹೆಸರು ಪ್ರೇಮಾ
ಹುಟ್ಟಿದ ದಿನ 06 Jan 1977
ವಯಸ್ಸು 49
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರೇಮಾ ಆಸ್ತಿ

ಆಸ್ತಿ

ಪ್ರೇಮಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+