ಸ್ಯಾಂಡಲ್‌ವುಡ್‌ನಿಂದ ಹಿಡಿದು ಹಾಲಿವುಡ್‌ವರೆಗೂ ರಾಕಿಂಗ್ ಸ್ಟಾರ್ ಯಶ್ ಹೆಸರೀಗ ಚಿರಪರಿಚಿತ. ೨೦೦೭ರಲ್ಲಿ ಜಂಭದ ಹುಡುಗಿ ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸುವ ಮೂಲಕ ಚೆಂದನವನ ಪ್ರವೇಶಿಸಿದ ಯಶ್, ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕೆಜಿಎಫ್ ಸರಣಿಗಳ ಬಳಿಕ ದೇಶ-ವಿದೇಶದಲ್ಲೂ ರಾಕಿಭಾಯ್ ಅಂತಲೇ ಫೇಮಸ್ ಆಗಿದ್ದಾರೆ. ಆರಂಭದಲ್ಲಿ ಬಂದ ಯಶ್ ಸಿನಿಮಾಗಳು ಒಂದು ಹಂತಕ್ಕಿದ್ದವು. ಆನಂತರದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಾ ಹೋದವು. ಇಲ್ಲಿ ಬಾಕ್ಸಾಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಕಂಡ ಯಶ್ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.