ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಒಳ್ಳೆಯ ಕಥೆ, ಉತ್ತಮ ಸಂಭಾಷಣೆ, ಹಾಡು ಎಲ್ಲವೂ ಮುಖ್ಯವಾಗಿರುತ್ತದೆ. ಸಿನಿಮಾದಲ್ಲಿ ಉತ್ತಮ ಕಥೆಯಿದ್ದರೆ ಪ್ರೇಕ್ಷಕರೇ ಆ ಸಿನಿಮಾದ ಕೈಹಿಡಿಯುತ್ತಾರೆ. ಕನ್ನಡದ ಅನೇಕ ನಿರ್ದೇಶಕರು ನಮ್ಮ ನೆಲದ ಸಂಸ್ಕತಿ, ಆಚಾರ ವಿಚಾರಗಳನ್ನು ತೆಗೆದುಕೊಂಡು ಸಿನಿಮಾ ಮಾಡಿ ಯಶಸ್ವಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಅನೇಕ ಸಿನಿಮಾಗಳು ನಮ್ಮ ಭಾಷೆ ಮತ್ತು ಆಚರಣೆಗಳನ್ನು ತೋರಿಸುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿವೆ. ಅಂತಹ ಸಿನಿಮಾಗಳು ಯಾವವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.