»   » ಬಿಗ್ ಬಾಸ್ ಮನೇಲಿ ಏನ್ಮಾಡ್ತಿದ್ದಾರೆ ಲೈವ್ ನೋಡಿ

ಬಿಗ್ ಬಾಸ್ ಮನೇಲಿ ಏನ್ಮಾಡ್ತಿದ್ದಾರೆ ಲೈವ್ ನೋಡಿ

Posted By:
Subscribe to Filmibeat Kannada

ಬಹುಶಃ ಈಟಿವಿ ಕನ್ನಡ ಪೋಗ್ರಾಂ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರಿಗೆ 'ಬಿಗ್ ಬಾಸ್ ಕನ್ನಡ ಈ ಪರಿ ಜನಪ್ರಿಯತೆ ಗಳಿಸುತ್ತದೆ ಎಂದು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ರಿಯಾಲಿಟಿ ಶೋ ಶುರುವಾಗಿ ಮೂರ್ನಾಲ್ಕು ದಿನಗಳಲ್ಲೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಬಹುತೇಕ ಪ್ರತಿಕ್ರಿಯೆಗಳು ನೆಗಟಿವ್ ಆಗಿದ್ದರೂ ಇದು ಕಾರ್ಯಕ್ರಮವನ್ನು ಹೆಚ್ಚೆಚ್ಚು ಚೆನ್ನಾಗಿ ಮೂಡಿಸಲು ಸಹಕಾರಿಯಾಗುತ್ತಿದೆ ಎಂದು ಗುಂಡ್ಕಲ್ ಹೇಳಿದ್ದಾರೆ. ಮೊದಲ ದಿನವೇ ಕಿಚ್ಚ ಸುದೀಪ್ ವಾಯ್ಸ್ , ನಿರೂಪಣಾ ಶೈಲಿಗೆ ಫಿದಾ ಆಗಿದ್ದ ಪ್ರೇಕ್ಷಕರು ಬಿಗ್ ಬಾಸ್ ವಾಯ್ಸ್ ಕೇಳಿ ಒಳ್ಳೆ ಊಟದ ಮಧ್ಯೆ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಆಗಿತ್ತು. ನಂತರ ವಾಯ್ಸ್ ಬದಲಾಯ್ತು.

ದಿನದ ಹೈಲೇಟ್ಸ್: ಮೊದಲ ದಿನ| ಎರಡನೇ ದಿನ| ಮೂರನೇ ದಿನ | ಸ್ಪರ್ಧಿಗಳ ಪಟ್ಟಿ

ಬಿಗ್ ಬಾಸ್ ನಲ್ಲಿ ಕನ್ನಡವೇ ಮಾಯ ಎಂದು ಕೂಗೆದ್ದಿತ್ತು. ಅದಕ್ಕೆ ಮೂರನೇ ದಿನವೇ ಬಿಗ್ ಬಾಸ್ ನಿಂದ ಪರಿಹಾರ ಸಿಕ್ಕಿತು. ನಿಖಿತಾ ಅವರಿಗೆ ಒಂದು ಎರಡು ಬಾಳೆಲೆ ಹರಡು ಪದ್ಯ ಹೇಳಿಕೊಡುವ ಮೂಲಕ ಅರುಣ್ ಸಾಗರ್ ಅವರು ಕನ್ನಡ ಅನುಷ್ಠಾನ ಏಕವ್ಯಕ್ತಿ ಸಮಿತಿಯ ಅಧ್ಯಕ್ಷರಾಗಿ ನೇಮಕವಾದರು.

ಇನ್ನು ಬಾಡಿ ಬ್ರಹ್ಮಾಂಡ ಗುರೂಜಿ ಹಾಗೂ ನರ್ಸ್ ಜಯಲಕ್ಷ್ಮಮ್ಮ ಸ್ಪರ್ಧಿಗಳಾಗಿರುವ ಬಗ್ಗೆ ಅಪಸ್ವರ ಎದ್ದಿದೆ ಅದಕ್ಕೆ ಇನ್ನೆರಡು ದಿನದಲ್ಲೇ ಉತ್ತರ ಸಿಗಲಿದೆ. ಸ್ಪರ್ಧಿಗಳ ಉಡುಗೆ ತೊಡುಗೆ ಬಗ್ಗೆ ಇರೋ ತೊಂದರೆ, ಬ್ರಹ್ಮಾಂಡ ಅವರ ಮುಂಡೇದೆ.. ಪದಕ್ಕೂ ಬ್ರೇಕ ಬೀಳುವ ಸೂಚನೆ ಸಿಕ್ಕಿದೆ. ಮುಂದೇ ಇವರೇನು ಮಾಡ್ತಾರೆ ಎಂಬುದರ ಸ್ಥೂಲ ಚಿತ್ರಣ ನಿಮ್ಮ ಮುಂದೆ..

ಬಿಗ್ ಬಾಸ್ ವಿಕ್ರಮ

ಅಂದ ಹಾಗೆ, ಈಟಿವಿ ಕನ್ನಡ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು, ಈಗ ಬಿಗ್ ಬಾಸ್ ಸ್ಪರ್ಧಿಗಳನ್ನು ನೀವು ಇರುವ ಜಾಗದಿಂದಲೇ ಟ್ರ್ಯಾಕ್ ಮಾಡಬಹುದಾಗಿದೆ.

ಬೆಂಗಳೂರಲ್ಲಿ ಟ್ರಾಫಿಕ್ ಎಲ್ಲಿದೆ ಎಂಬುದನ್ನು ಪೊಲೀಸರು ಆನ್ ಲೈನ್ ತೋರಿಸಿದ ಹಾಗೆ ಬಿಗ್ ಬಾಸ್ ಸ್ಪರ್ಧಿಗಳು ಈ ಕ್ಷಣಕ್ಕೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಯಾರ ಜೊತೆಯಲ್ಲಿದ್ದಾರೆ? ಮನೆಯ ಯಾವ ಭಾಗದಲ್ಲಿ ಎಷ್ಟು ಹೊತ್ತು ಕಳೆಯುತ್ತಿದ್ದಾರೆ ಎಂಬುದನ್ನು ಲೈವ್ ಆಗಿ ಗಮನಿಸಬಹುದು.

ಹೀಗೆ ಮಾಡಿ ಸ್ವಾಮಿ

ನೀವು ಮಾಡಬೇಕಾಗಿದ್ದು ಇಷ್ಟೇ. http://biggbosskannada.com/ ವೆಬ್ ಸೈಟ್ ಗೆ ಹೋಗಿ ಮೊದಲು ಬರುವ pop up ಕ್ಲೋಸ್ ಮಾಡಿ ನಂತರ ನಿಮ್ಮ ಮುಂದೆ ಪುಣೆಯ ಲೋನಾವಾಲದಲ್ಲಿರುವ ಬಿಗ್ ಬಾಸ್ ಮನೆಗೆ ನೇರ ಪ್ರವೇಶ ಸಾಧ್ಯವಾಗುತ್ತದೆ.

ಸ್ಪರ್ಧಿಗಳಿಗೆ ಬಣ್ಣ

ಪ್ರತಿ ಸ್ಪರ್ಧಿಗಳನ್ನು ಗುರುತಿಸಲು ಸುಲಭವಾಗಲಿ ಎಂಬ ಉದ್ದೇಶದಿಂದ ಪ್ರತಿ ಸ್ಪರ್ಧಿಗಳಿಗೂ ಬೇರೆ ಬೇರೆ ಬಣ್ಣ ನೀಡಲಾಗಿದೆ. ಆ ಬಣ್ಣದ ಮೇಲೆ ಮೌಸ್ ಓವರ್ ಮಾಡಿದರೆ.. ಆ ಸ್ಪರ್ಧಿ ಇರುವ ಜಾಗ ಹಾಗೂ ಅವರ ಪುಟ್ಟ ಚಿತ್ರ ನಿಮಗೆ ಕಾಣಿಸುತ್ತದೆ. ಉದಾ: ಹಸಿರು ಬಣ್ಣದ ಚುಕ್ಕಿ ಮೇಲೆ ಮೌಸ್ ಆಡಿಸಿದರೆ ಬ್ರಹ್ಮಾಂಡ ಗುರೂಜಿ ಕಾಣಿಸಿಕೊಳ್ಳುತ್ತಾರೆ.

ನೆನಪಿಡಿ ಇದು ಲೈವ್

ಬ್ರಹ್ಮಾಂಡ ಗುರೂಜಿ ಅವರನ್ನು ಎಲ್ಲರೂ ದೂರ ಇಟ್ಟಿದ್ದರೋ ಅಥವಾ ಇವರೇ ದೂರ ಇದ್ದರೋ ಗೊತ್ತಿಲ್ಲ. ಇಲ್ಲಿ ತನಕ ಮನೆ ತುಂಬಾ ಒಬ್ಬರೇ ಓಡಾಡುತ್ತಿದ್ದಾರೆ. ಬಹುಶಃ ಮಧ್ನಾಹ್ನದ ನಿದ್ದೆ ಹಾಳು ಮಾಡಿದ ಬಿಗ್ ಬಾಸ್ ಗೆ ಶಾಪ ಹಾಕುತ್ತಿರಬಹುದು

ಬಿಗ್ ಬಾಸ್ ಸ್ಪರ್ಧಿಗಳ ಟ್ರ್ಯಾಕ್

ಇವತ್ತು ಬಿಗ್ ಬಾಸ್ ಮನೆಯಲ್ಲಿ ಹೋಳಿ ಹಬ್ಬ ಆಚರಣೆ ನಾಳೆ ದಿನ ಸುದೀಪ್ ಅವರ ಬಚ್ಚನ್ ಸಿನಿಮಾದ ಆಡಿಯೋ ರಿಲೀಸ್ ಇದೆ. ಬ್ರಹ್ಮಾಂಡ ಗುರೂಜಿ ಹಾಗೂ ಜಯಲಕ್ಷ್ಮಿ ವಿರುದ್ಧ ಹೆಚ್ಚು ವೋಟ್ ಬಿದ್ದಿದೆ.

ಆದರೆ, ಈ ವಾರ ಮನೆಯಿಂದ ಯಾರು ಹೊರಬೀಳಲಿದ್ದಾರೆ ಎಂಬುದಕ್ಕೆ ಉತ್ತರ ವಾರಂತ್ಯದಲ್ಲಿ ಸಿಗಲಿದೆ. ಯಾರು ವೋಟ್ ಔಟ್ ಆಗ್ತಾರೆ ಅನ್ನೋದು ಕನ್ನಡದ ಬಚ್ಚನ್ ಸುದೀಪ್ ಗೂ ಗೊತ್ತಿಲ್ವಂತೆ

English summary
ETV Kannada Bigg Boss :Keep track of which housemates is spending time where and with where and with whom 24 X7 round the clock tracker is out 
Please Wait while comments are loading...