For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ 13ನೇ ಸ್ಪರ್ಧಿ ಯಾರು?

  By Mahesh
  |

  'ನಿನ್ನೆ ರೇಣುಕಾಚಾರ್ಯ BJP ಯಿಂದ ಉಚ್ಚಾಟನೆ; ನಾಳಿದ್ದು ನರ್ಸ್ ಜಯಲಕ್ಷ್ಮಿ BIGG BOSS ನಿಂದ ಉಚ್ಚಾಟನೆ ? 'ಎಂಬ ಜೋಕ್ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಒಂದು ವೇಳೆ ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ರಾಜಕೀಯದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಬಿಗ್ ಬಾಸ್ ಮನೆ ಕಡೆಗೆ ಹೋಗಿ ಬಂದರೆ ಹೇಗಿರುತ್ತೆ? ನೆನೆಸಿಕೊಂಡರೆ ಮೈ ಜುಂ ಅನ್ನುತ್ತೆ.

  ಮಾಜಿ ನರ್ಸ್ ಹಾಗೂ ಮಾಜಿ ಸಚಿವ ನಡುವಿನ ಸತ್ಯಾಸತ್ಯತೆಗೆ ಕಿಚ್ಚು ಹಚ್ಚಿ ನೈಜತೆಯನ್ನು ಕಾಣುವ ಕೆಟ್ಟ ಕುತೂಹಲ ಹಲವು ಬಿಗ್ ಬಾಸ್ ರಸಿಕರ ಮನದಲ್ಲಿ ಸುಳಿದಾಡಿದ್ದಂತೂ ನಿಜ. ಅಂದ ಹಾಗೆ, ಮೊದಲೇ ಘೋಷಿತ 13ನೇ ಸ್ಪರ್ಧಿ ರಿಯಾಲಿಟಿ ಶೋ ಹೀರೋ ರಾಜೇಶನ ಸ್ಥಿತಿ ಇನ್ನೂ ಹಾಗೆ ಇದೆಯಂತೆ. ಸಹಜ ಸ್ಥಿತಿಗೆ ಮರಳಿದರೂ ಆತ ಪುಣೆ ಹಾದಿ ಹಿಡಿಯುವ ಬದಲು ಕಾಡಿನ ಕಡೆಗೆ ಹೋಗುವುದೇ ಉತ್ತಮ ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ.

  ಈಗ ಹೊಸ ಸ್ಪರ್ಧಿಯ ಹುಡುಕಾಟದಲ್ಲಿ ಈಟಿವಿ ಕನ್ನಡ ಪೋಗ್ರಾಂ ಹೆಡ್ ಪರಮೇಶ್ವರ ಗುಂಡ್ಕಲ್ ಹಾಗೂ ಎಂಡಮೋಲ್ ಸಂಸ್ಥೆ ಸಿಇಒ ಗೌತಮ್ ತೊಡಗಿದ್ದಾರೆ. ಸಿನಿಮಾಮಂದಿ ಅಲ್ಲದೆ ರಾಜಕಾರಣಿ, ಉದ್ಯಮಿ, ಕಲಾವಿದರು, ಪತ್ರಕರ್ತರನ್ನು ಬಿಗ್ ಬಾಸ್ ಮನೆಗೆ ಬಿಡಲಾಗುವುದು ಎಂದಿದ್ದರು. ಅದರಂತೆ, ನಾವು ಕೆಲವು ಮಂದಿಯನ್ನು ಆಯ್ಕೆ ಮಾಡಿ ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ನಿಮ್ಮ ಆಯ್ಕೆಯನ್ನು ತಿಳಿಸಿ ಈ ಸುದ್ದಿ ಓದಿದ ಈ ಟಿವಿ ಕನ್ನಡ ಟೀಂ ಗೆ ಒಂದಷ್ಟು ಅನುಕೂಲವಾಗಲಿ

  ರೇಣುಕಾಚಾರ್ಯ

  ರೇಣುಕಾಚಾರ್ಯ

  ಸದ್ಯಕ್ಕೆ ಫ್ರೀ ಇದ್ದಾರೆ, ಕೆಜೆಪಿ ಸೇರೋ ತನಕ ಬಿಗ್ ಬಾಸ್ ಮನೆಗೆ ಬಂದು ಹೋಗಬಹುದು. ಮೇ ನಲ್ಲಿ ಚುನಾವಣೆ ಇರುವುದರಿಂದ Atleast 1 ತಿಂಗಳು ಪುಣೆಯಲ್ಲಿದ್ದರೆ ಏನು ನಷ್ಟವಿಲ್ಲ. ಹೊನ್ನಾಳಿ ಜನ ಕೂಡಾ ಬೈದುಕೊಳ್ಳಲ್ಲ. ಹತ್ತು ಹಲವು ಸಂಶಯಗಳ ಪರಿಹಾರವನ್ನು ರೇಣುಕಾ ಬಿಗ್ ಬಾಸ್ ಮನೆಯಲ್ಲಿ ನೀಡಬಹುದು ಏನಂತೀರಾ?

  ಪ್ರತಾಪ್ ಸಿಂಹ

  ಪ್ರತಾಪ್ ಸಿಂಹ

  ಮಾಧ್ಯಮ ಪ್ರತಿನಿಧಿಯಾಗಿ ಜನಪ್ರಿಯ ಪತ್ರಕರ್ತ ಪ್ರತಾಪ್ ಸಿಂಹ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಹಲವಾರು ಮಿತ್ರರ ಶತ್ರುಗಳಿಗೆ ಮೈ ನಡುಕ ಆರಂಭವಾಗಬಹುದು. ಇವರ ಪ್ರತಿಸ್ಪರ್ಧಿ ಸಂಪಾದಕರೊಬ್ಬರನ್ನು ಕರೆಸಬಹುದಾಗಿತ್ತು. ಆದರೆ, ಅವರಿಗೆ ಹುಷಾರಿಲ್ಲವಂತೆ. ಸ್ಪರ್ಧಿಗಳಿಗೆ ಸ್ವಲ್ಪ ದೇಶ, ಭಾಷೆ, ಸಂಸ್ಕೃತಿ, ಇತಿಹಾಸ ಬಗ್ಗೆ ಬ್ರಹ್ಮಾಂಡ ಗುರೂಜಿ ಮೀರಿಸಿದ ಪ್ರವಚನ ಸಿಂಹ ಅವರು ನೀಡಬಲ್ಲರು

  ಯೋಗರಾಜ್ ಭಟ್

  ಯೋಗರಾಜ್ ಭಟ್

  ಭಟ್ಟರು ಸದಾ ಕಾಲ ಬ್ಯುಸಿ, ಈಗ ನಿರ್ದೇಶನಕ್ಕಿಂತ ಸಾಹಿತ್ಯ ರಚನೆಯಲ್ಲೇ ಬ್ಯುಸಿ ಆದರೂ ಬಿಗ್ ಬಾಸ್ ಗೆ ಭಟ್ಟರು ಬಂದರೆ ಅದರ ಮಜವೇ ಬೇರೆ ಕಷ್ಟ ಸುಖ ಮಾತಾಡೊಕೆ, ಜೋಕ್ ಕಟ್ ಮಾಡೋಕೆ ಭಟ್ಟರಿಗಿಂತ ಒಳ್ಳೆ ವ್ಯಕ್ತಿ ಬೇಕಿಲ್ಲ.

  ಸುಚೇಂದ್ರ ಪ್ರಸಾದ್

  ಸುಚೇಂದ್ರ ಪ್ರಸಾದ್

  ಬಿಗ್ ಬಾಸ್ ಮನೆಗೆ ಸುಚೇಂದ್ರ ಎಂಟ್ರಿ ಕೊಟ್ಟರೆ ಅಪ್ಪಟ ಕನ್ನಡ ಮಾತನಾಡುವ ಅಪರ್ಣ ಅವರಿಗೆ ಒಳ್ಳೆ ಪೈಪೋಟಿ ಸಿಗುತ್ತದೆ. ಬಿಗ್ ಬಾಸ್ ಧ್ವನಿಗೆ ಸುಚೇಂದ್ರ ವಾಯ್ಸ್ ಸೆಟ್ ಆಗುತ್ತೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಸ್ಪರ್ಧಿಯಾಗಿ ಹೋದರೆ ಹೇಗೆ? ತಮ್ಮಲ್ಲಿರುವ ಅಪಾರ ಜ್ಞಾನವನ್ನು ಇತರೆ ಸ್ಪರ್ಧಿಗಳಿಗೂ ಹಂಚಬಹುದು. ಶಾಲಿವಾಹನ ಪಾತ್ರ ಕಂಡವರು ಸುಚೇಂದ್ರ ಯಾಕೆ ಬಿಗ್ ಬಾಸ್ ಗೆ ಹೋಗಿ ಬರ್ಬಾದು ಎಂದು ಪ್ರಶ್ನಿಸಿದ್ದಾರೆ.

  ಸುಮನ್ ರಂಗನಾಥನ್

  ಸುಮನ್ ರಂಗನಾಥನ್

  ಮಾದಕ ಮೈಮಾಟವನ್ನು ಉಳಿಸಿಕೊಂಡು ಇಂದಿನ ಹೀರೋಯಿನ್ ಗಳಿಗೆ ಸ್ಪರ್ಧೆ ಒಡ್ಡಿರುವ ಸುಮನ್ ಅವರು ಬಿಗ್ ಬಾಸ್ ಮನೆ ಹೊಕ್ಕರೆ ಹತ್ತು ವರ್ಷ ಹಳೆಯ ಬ್ಯೂಟಿ ಚಂದ್ರಿಕಾಗೆ ಸಕತ್ ಫೈಟ್ ನೀಡಬಹುದು ಏನಂತೀರಾ?

  ಕೆ ಮಂಜು

  ಕೆ ಮಂಜು

  ವರ್ಣ ರಂಜಿತ ವ್ಯಕ್ತಿತ್ವ ನಿರ್ಮಾಪಕ ಕೊಬ್ಬರಿ ಮಂಜು ಅವರೇನಾದರೂ ಬಿಗ್ ಬಾಸ್ ಮನೆ ಪ್ರವೇಶಿಸಿದರೆ ಸಕತ್ ಮಜಾ ಇರುತ್ತೆ ಬಿಡಿ. ಒಳ್ಳೆ ಡೈಲಾಗ್ ಕಿಂಗ್ ರೀತಿ ಮಾತನಾಡುವ ಮಂಜು ಅವರು ಹೀರೋ, ಹೀರೋಯಿನ್ ಗಳ ಅಸಲಿ ಬಂಡವಾಳ ಹೊರ ಹಾಕಿದರು ಅಚ್ಚರಿಯೇನಿಲ್ಲ.

  ಸಾಧು ಕೋಕಿಲ

  ಸಾಧು ಕೋಕಿಲ

  ಹಾಸ್ಯ ನಟ, ಸಂಗೀತ ನಿರ್ದೇಶಕ ಹೀಗೆ ಎಲ್ಲ ವರ್ಗಕ್ಕೂ ಫಿಟ್ ಆಗಬಲ್ಲ ಸಾಧು ಮಹರಾಜ್ ಅವರು ತೆರೆಯ ಹಿಂದೆ ಕೂಡಾ ಒಳ್ಳೆ ಸ್ನೇಹಿತನಾಗಿ ಚಿತ್ರರಂಗದಲ್ಲಿ ಪರಿಚಿತರು. ಬಿಗ್ ಬಾಸ್ ಮನೆ ಹೊಕ್ಕರೆ ಕಿಚ್ಚು ಹಚ್ಚುವುದರಲ್ಲಿ ಸಂಶಯವೇ ಇಲ್ಲ

  ಶುಭ ಪೂಂಜಾ

  ಶುಭ ಪೂಂಜಾ

  ಸದ್ಯಕ್ಕೆ ಮಂಗಳೂರಿನ ಬೆಡಗಿ ಟೈಂ ಸರಿಯಿಲ್ಲ. ಮಾಡೋ ಸಿನ್ಮಾಗಳು ಓಡುತ್ತಿಲ್ಲ. ಪರಾರಿ ಚಿತ್ರದ ಮೇಲೆ ಶುಭಾಶುಭಗಳು ನಿಂತಿದೆ. ವಿಜಯ್ ಜೊತೆ ಹರಡಿಕೊಂಡಿದ್ದ ಗಾಸಿಪ್ ತಣ್ಣಗಾಗಿದೆ. ಗಾಸಿಪ್ ಗಳ ಸತ್ಯ ಮಂಥನ ಮಾಡಬಲ್ಲ ಏಕೈಕ ರಿಯಾಲಿಟಿ ಶೋ ಮನೆ ಬಿಗ್ ಬಾಸ್ ನಲ್ಲಿ ಶುಭಾ ಇದ್ದರೆ ಏನಾದರೂ ಸತ್ಯ ಹೊರಹಾಕಬಹುದೇನೋ?

  ಸುದೀಪ್ ಗೂ ಗೊತ್ತಿಲ್ಲ

  ಸುದೀಪ್ ಗೂ ಗೊತ್ತಿಲ್ಲ

  ಪಟ್ಟಿಯಲ್ಲಿ ಸುದೀಪ್ ಹೆಸರು ಏಕೆ ಎಂದು ಕನ್ ಫ್ಯೂಸ್ ಆಗಬೇಡಿ ಮೊದಲ ವಾರ ಸ್ಪರ್ಧಿಗಳಿಗೆ ತಿಳಿ ಹೇಳಲು ಒಮ್ಮೆ ಸುದೀಪ್ ಒಳಹೊಕ್ಕರೂ ಚೆನ್ನಾಗಿರುತ್ತೆ. ಆಟಕ್ಕೆ ಒಂದು ಬಿಗಿ ಬರುತ್ತೆ.

  13 ದುರಾದೃಷ್ಟದ ಸಂಖ್ಯೆಯಾದರೂ ಕನ್ನಡ ಬಿಗ್ ಬಾಸ್ ಮಟ್ಟಿಗೆ ಅದೃಷ್ಟದ ಸಂಖ್ಯೆಯಾಗುವ ಸಾಧ್ಯತೆಯಿದೆ. ಈಗ ಹೊಸ ಸ್ಪರ್ಧಿಯನ್ನು ಈ ವಾರದೊಳಗೆ ಸೇರಿಸಬೇಕು. ಸೇರಿದ ಅಭ್ಯರ್ಥಿ ಈ ವಾರ ವೋಟ್ ಔಟ್ ಆಗುವಂತಿಲ್ಲ. ಜೊತೆಗೆ ಎರಡು ಮೂರು ದಿನ ಆಗಲೇ ಕಳೆದಿರುತ್ತದೆ ಹೀಗಾಗಿ 13ನೇ ಅಭ್ಯರ್ಥಿಗೆ ಮನೆಯಲ್ಲಿ ಹೆಚ್ಚು ಕಾಲ ಉಳಿಯುವ ಚಾನ್ಸ್ ಅಂತೂ ಇದೆ.
  ಸ್ವಾಮಿ ನಿತ್ಯಾನಂದ

  ಸ್ವಾಮಿ ನಿತ್ಯಾನಂದ

  ಸಲ್ಮಾನ್ ಖಾನ್ ನಿರೂಪಣೆ ಇದ್ದ ಹಿಂದಿ ಭಾಷೆ ಬಿಗ್ ಬಾಸ್ 6 ಮನೆಗೆ ಎಂಟ್ರಿ ಕೊಡುವುದರಲ್ಲಿ ಸ್ವಲ್ಪದರಲ್ಲಿ ಮಿಸ್ ಮಾಡಿಕೊಂಡ ಸ್ವಾಮಿ ನಿತ್ಯಾನಂದ ಅವರು ಈಗ ಕನ್ನಡ ಬಿಗ್ ಬಾಸ್ ನಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ಆದರೂ ಆ ವಯ್ಯ ಬರೋದು ಡೌಂಟ್

  English summary
  The Baap of all gossip reality shows, Bigg Boss is already making waves. Number 13th is un lucky for many but 13th contestants in on going Etv Kananda Bigg Boss Kannada will be lucky as already few days of telecast over. Here we are asking our readers who will be next contestant in show hosted by Sudeep

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X