2026 ಕನ್ನಡ ಸಿನಿಮಾರಂಗದ ಪಾಲಿಗೆ ಬಹುನಿರೀಕ್ಷೆಯ ವರ್ಷ. ಕಳೆದ ವರ್ಷ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳೇ ಹೆಚ್ಚು. ಹೀಗಾಗಿ 2026ರಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಈ ವರ್ಷ ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಜೊತೆಗೆ ಸ್ಟಾರ್ ಡೈರೆಕ್ಟರ್‌ಗಳ ಚಿತ್ರಗಳು ಕ್ಯೂನಲ್ಲಿವೆ. ಇದರಿಂದಾಗಿ ಮತ್ತೆ ಬೇರೆ ಚಿತ್ರರಂಗಗಳು ಕನ್ನಡದತ್ತ ತಿರುಗಿ ನೋಡುವಂತೆ ಆಗಬಹುದು. ಇಲ್ಲಿ ನೀವು 2026ರಲ್ಲಿ ತೆರೆಕಾಣಲಿರುವ ಕನ್ನಡ ಚಲನಚಿತ್ರಗಳ ಪಟ್ಟಿಯನ್ನು ನೋಡಲಿದ್ದೀರಿ. ಈ ಚಿತ್ರಗಳ ಪಟ್ಟಿ ಸಂಪೂರ್ಣವಾಗಿ ಸಿನಿಮಾ ಪ್ರೊಡಕ್ಷನ್ಸ್ ಕಂಪನಿಗಳ ಮಾಹಿತಿ ಆಧಾರದ ಮೇಲೆ ರಚಿಸಲಾಗಿರುವುದರಿಂದ ಕೆಲ ಚಿತ್ರಗಳ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸವಿರಬಹುದು. ಬಹುನಿರೀಕ್ಷೆಯ ಚಿತ್ರಗಳಾದ ಟಾಕ್ಸಿಕ್, ಕೆಡಿ ದಿ ಡೆವಿಲ್, ಕಾಂತಾರ ಚಾಪ್ಟರ್ 1, 45, ಡೆವಿಲ್, ಯುವರ್ಸ್ ಸಿನ್ಸಿಯರ್ಲಿ ರಾಮ್, ಭೈರವನ ಕೊನೆ ಪಾಠ ಚಿತ್ರಗಳಿಂದ ಹಿಡಿದು ಕಲಾತ್ಮಕ ಸಿನಿಮಾಗಳು ಈ ಪಟ್ಟಿಯಲ್ಲಿವೆ.
ಹೆಚ್ಚು ಕಾಣಿಸಿ| ಬಿಡುಗಡೆ ದಿನಾಂಕ | ಚಿತ್ರಗಳ ಹೆಸರು | ಕಲಾವಿದರು |
|---|---|---|
| 19 Dec 2026 | ನಿರ್ದೇಶಕ | ನವೀನ ಕೃಷ್ಣ |
| 29 Dec 2026 | ಎಪ್ರಿಲ್ | ಚಿರಂಜೀವಿ ಸರ್ಜಾ, ರಚಿತಾ ರಾಮ್ |