»   »  ಕೇಂದ್ರ ಗೃಹಮಂತ್ರಿಯಾಗಿ ಅಮರ್ ಸಿಂಗ್ !!

ಕೇಂದ್ರ ಗೃಹಮಂತ್ರಿಯಾಗಿ ಅಮರ್ ಸಿಂಗ್ !!

Subscribe to Filmibeat Kannada
Amar Singh to act in Dev Anand film
ಕೇಂದ್ರ ಗೃಹಮಂತ್ರಿಯಾಗಿ ಅಮರ್ ಸಿಂಗ್ ಆಯ್ಕೆಯಾಗಿದ್ದಾರೆ! ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸೀಟ್ ಹೊಂದಾಣಿಕೆ ಮಾತುಕತೆ ಮುರಿದು ಬಿದ್ದಿದ್ದರೂ ಹೇಗೆ ಅಮರ್ ಗೃಹ ಮಂತ್ರಿಯಾದರು ಎಂದು ಬೆರಗಾಗ ಬೇಡಿ. ಅಮರ್ ಸಿಂಗ್ "ಕೇಂದ್ರ ಗೃಹ ಮಂತ್ರಿ" ಯಾಗಿರುವುದು ಹಿರಿಯ ಹಿಂದಿ ನಟ ದೇವ್ ಆನಂದ್ ನಿರ್ದೇಶಿಸಿ ನಿರ್ಮಿಸುತ್ತಿರುವ "ಚಾರ್ಜ್ ಶೀಟ್ " ಎಂಬ ಚಿತ್ರದಲ್ಲಿ!!

ದೇವ್ ಆನಂದ್ ಮೇಲೆ ನನಗೆ ಬಹಳ ಗೌರವ ಇದೆ. ಅವರು ಕೇಂದ್ರ ಗೃಹ ಮಂತ್ರಿಯಾಗಿ ನಟಿಸ ಬೇಕೆಂದು ಬಂದಾಗ ಅದನ್ನು ತಿರಸ್ಕರಿಸಲು ಆಗಿಲ್ಲ. ಲೋಕಸಭಾ ಚುನಾವಣೆಯ ಕೆಲಸದ ಒತ್ತಡ ಹೆಚ್ಚಿಗೆ ಇರುವುವುದರಿಂದ ಶೂಟಿಂಗ್ ಗೆ ಮುಂಬೈ ಗೆ ಹೋಗುವುದು ಕಷ್ಟ, ಅದಕ್ಕಾಗಿ ನವದೆಹಲಿಯ ನನ್ನ ಮನೆಯಲ್ಲಿ ಶೂಟಿಂಗ್ ನಡೆಸಲಾಗುತ್ತದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ. 53 ವರ್ಷದ ಅಮರ್ ಹಿಂದಿನಿಂದಲೂ ಬಾಲಿವುಡ್ ಜೊತೆ ತನ್ನ ಸಂಪರ್ಕವನ್ನು ಹೊಂದಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada