»   » ಮದುವೆ ಆಗಿ ರಾಯಲ್ ಬಂಗಲೆಗೆ ಕಾಲಿಟ್ಟ ಕಿರುತೆರೆ ನಟಿ.!

ಮದುವೆ ಆಗಿ ರಾಯಲ್ ಬಂಗಲೆಗೆ ಕಾಲಿಟ್ಟ ಕಿರುತೆರೆ ನಟಿ.!

Posted By: ಸೋನು ಗೌಡ
Subscribe to Filmibeat Kannada

ಹಿಂದಿ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಏ ಹೈ ಮೊಹಬ್ಬತೇನ್' ಧಾರಾವಾಹಿ ಖ್ಯಾತಿಯ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಟಿ (ಇಶಿತಾ) ಮತ್ತು ಅದೇ ಧಾರಾವಾಹಿಯ ನಟ ವಿವೇಕ್ ದಹಿಯಾ (ಅಭಿಷೇಕ್) ಜುಲೈ 8 ರಂದು ಸಪ್ತಪದಿ ತುಳಿದು ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೆ ನೂತನ ಜೀವನಕ್ಕೆ ಕಾಲಿಡುವ ಜೊತೆ-ಜೊತೆಗೆ ನವದಂಪತಿಗಳು ಹೊಸ ಮನೆಯನ್ನು ಕೊಂಡು, ಹೊಸ ಜೀವನವನ್ನು, ಹೊಸ ಮನೆಯಲ್ಲಿ ಆರಂಭ ಮಾಡಿದ್ದಾರೆ.[ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!]

ಜುಲೈ 8 ರಂದು ದಿವ್ಯಾಂಕ ತ್ರಿಪಾಟಿ ಊರಾದ ಭೋಪಾಲ್ ನಲ್ಲಿ ದಿವ್ಯಾಂಕ ಮತ್ತು ವಿವೇಕ್ ಅವರ ಮದುವೆ ಅದ್ಧೂರಿಯಾಗಿ ನೆರವೇರಿದ್ದು, ಜುಲೈ 10 ರಂದು ಚಂಡೀಗಡದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು.

ತದನಂತರ ಜುಲೈ 11 ರಂದು ಮುಂಬೈನಲ್ಲಿ ಗೆಳೆಯರು ಹಾಗೂ ಇಂಡಸ್ಟ್ರಿ ಫ್ರೆಂಡ್ಸ್ ಗೆ ಅಂತ ವಿಶೇಷವಾಗಿ ದೊಡ್ಡ ಸಮಾರಂಭ ಆಯೋಜಿಸಿದ್ದರು.[ಚಿತ್ರಗಳು: 'ಏ ಹೈ ಮೊಹಬ್ಬತೇನ್' ನಟಿ ದಿವ್ಯಾಂಕ ಮದುವೆ ಆಗುತ್ತಿದ್ದಾರೆ]

ಮದುವೆಯಾದ ಸಂಭ್ರಮದಲ್ಲಿ ನೂತನ ದಂಪತಿಗಳು ಈಗಾಗಲೇ ಹೊಸ ಮನೆಗೂ ಕಾಲಿಟ್ಟಿದ್ದಾರೆ. ಸುಮಾರು ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ಮನೆಯಲ್ಲಿ ಇದೀಗ ದಿವ್ಯಾಂಕ ತ್ರಿಪಾಟಿ ಮತ್ತು ವಿವೇಕ್ ಅವರು ವಾಸ್ತವ್ಯ ಹೂಡಿದ್ದಾರೆ. ದಿವ್ಯಾಂಕ ಅವರ ರಾಯಲ್ ಬಂಗಲೆಯ ಫೋಟೋ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ರಾಯಲ್ ಬಂಗಲೆ

ಫಳ-ಫಳ ಹೊಳೆಯುತ್ತಿರುವ ಅಂದದ ಮನೆಯಲ್ಲಿ ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಟಿ. ಇತ್ತೀಚೆಗಷ್ಟೇ ಹೊಸ ಮನೆಗೆ ನೂತನ ದಂಪತಿಗಳು ಶಿಫ್ಟ್ ಆಗಿದ್ದಾರೆ.

ದೇವರ ಮನೆ

ಸಿಂಪಲ್ ಆಗಿರೋ ದೇವರ ಮನೆ ಹಾಗೂ ಮನೆಯ ಗೋಡೆಯಲ್ಲಿ ಕಲಾತ್ಮಕವಾಗಿರುವ ಡಿಸೈನ್ ಗಳು.

ಲಿವಿಂಗ್ ರೂಮ್

ಚೆನ್ನಾಗಿ ಗಾಳಿ-ಬೆಳಕು ಬರುವಂತಿರುವ ಲಿವಿಂಗ್ ರೂಮ್.

ಅಂದವಾದ ಬೆಡ್ ರೂಮ್

ಚೆಂದದ ನೂತನ ದಂಪತಿಗಳಿಗೆ ಅಂದವಾದ ವಿಶಾಲ ಬೆಡ್ ರೂಮ್.

ಡ್ರೆಸ್ಸಿಂಗ್ ರೂಮ್

ನಟಿ ದಿವ್ಯಾಂಕ ತ್ರಿಪಾಟಿ ಮತ್ತು ವಿವೇಕ್ ಅಭಿರುಚಿಗೆ ತಕ್ಕಂತಿರುವ ಡ್ರೆಸ್ಸಿಂಗ್ ರೂಮ್.

ಡೈನಿಂಗ್ ಹಾಲ್

ಸುಂದರವಾದ ಡೈನಿಂಗ್ ಹಾಲ್. ಡೈನಿಂಗ್ ಹಾಲ್ ನಲ್ಲಿ ಪ್ರಶಸ್ತಿ ಫಲಕಗಳನ್ನಿಡಲು ಗೋಡೆಯಲ್ಲಿಯೇ ನಿರ್ಮಿಸಿರುವ ಶೋಕೇಸ್.

ಆರತಕ್ಷತೆ ಫೋಟೋ

ದಿವ್ಯಾಂಕ ತ್ರಿಪಾಟಿ ಮತ್ತು ವಿವೇಕ್ ಮದುವೆಯ ಆರತಕ್ಷತೆ ಫೋಟೋ.

ನಟಿ ದಿವ್ಯಾಂಕ ತ್ರಿಪಾಟಿ-ವಿವೇಕ್

ಮದುವೆಯ ದಿನ, ಮದುವೆ ಕಾರ್ಯಗಳನ್ನು ನೆರವೇರಿಸುವ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ದಿವ್ಯಾಂಕ ತ್ರಿಪಾಟಿ ಮತ್ತು ವಿವೇಕ್ ದಂಪತಿ.

ಧಾರಾವಾಹಿ ತಂಡ ಸೇರಿಕೊಂಡ ದಿವ್ಯಾಂಕ

ಮದುವೆ ಮುಗಿದ ಒಂದು ವಾರದೊಳಗೆ ನಟಿ ದಿವ್ಯಾಂಕ ಅವರು 'ಏ ಹೈ ಮೊಹಬ್ಬತೇ' ಧಾರಾವಾಹಿ ತಂಡವನ್ನು ಸೇರಿಕೊಂಡಿದ್ದಾರೆ.

English summary
Hindi Serial Actress Divyanka Tripathi and Hindi Serial Actor Vivek Dahiya Royal House. Check out the pics here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X