ಬಿ.ವಿ.ಭಾಸ್ಕರ್ ಜೀವನಚರಿತ್ರೆ

  ಬಾಲ್ಯ-

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಪ್ರತಿಭೆ ಯುವನಟ ಭಾಸ್ಕರ್.ಮೈಸೂರಿನಲ್ಲಿ ಜನಿಸಿದ ಇವರು ಬೆಳೆದಿದ್ದು ಬೆಂಗಳೂರಿನಲ್ಲಿ.ಇವರ ತಂದೆ ಭಾರತೀಯ ರಕ್ಷಣಾ ಮತ್ತು ಅಭಿವೃದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಜ್ಞಾನಿ ಮತ್ತು ಹಳೆಯ ಮೈಸೂರು ರಾಜ್ಯ ಪರವಾಗಿ ಆಡುತ್ತಿದ್ದ ಕ್ರಿಕೆಟರ್. ತಂದೆಯಂತೆ ಬಹುಮುಖ ಪ್ರತಿಭೆಯಾಗಿ ಬೆಳೆದ ಭಾಸ್ಕರ್ ಗೆ ಡಾ.ರಾಜಕುಮಾರ್ ಮತ್ತು ಸುನೀಲ ಗವಾಸ್ಕರ್ ಸ್ಪೂರ್ತಿ.

  ಕ್ರಿಕೆಟರ್-

  ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿಯಿದ್ದ ಇವರು ಹಲವಾರು ಪಂದ್ಯಗಳಲ್ಲಿ ಬೆಂಗಳೂರು ಯುನಿವರ್ಸಿಟಿ ಪರವಾಗಿ ಆಡಿದ್ದಾರೆ. ರಣಜಿ ಪಂದ್ಯಗಳಲ್ಲಿ ಕರ್ನಾಟಕ ಪರವಾಗಿ ಕೆಲವು ಪಂದಗಳನ್ನಾಡಿರುವ ಇವರು ಸೆಲಿಬ್ರಿಟಿ ಲೀಗ್ ನಲ್ಲಿ `ಕರ್ನಾಟಕ ಬುಲಡೋಜರ್ಸ' ಪರವಾಗಿ ಆಡಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2011 ರಲ್ಲಿ ನೆಡೆದ ಸೆಲಿಬ್ರಿಟಿ ಲೀಗ್ ನ ಚೆನ್ನೈ ವಿರುದ್ದದ ಫೈನಲ್ ಪಂದ್ಯದ ಕೊನೆಯ ಓವರ್ ನಲ್ಲಿ 20 ರನ್ ಗಳಿಸಿ ಪಂದ್ಯ ಗೆಲುವಿಗೆ ಕಾರಣವಾಗಿದ್ದು ವೀಕ್ಷಕರಲ್ಲಿ ಇನ್ನು ಹಸಿರಾಗಿದೆ.

  ಸಿನಿಪಯಣ-

  2006 ರಲ್ಲಿ `ಮನೆ ಮನೆ ಕಥೆ' ಎಂಬ ನಾಟಕದಿಂದ ಕಲಾರಾಧನೆ ಶುರುಮಾಡಿದ ಇವರು ರಂಗಭೂಮಿಯು ಕನ್ನಡ ಸಿನಿಜಗತ್ತಿಗೆ ನೀಡಿದ ಬಹುಮುಖ ಪ್ರತಿಭೆ. ಹಿಂದಿ, ಉರ್ದು, ಇಂಗ್ಲೀ‍ಷ್ ಭಾಷೆಗಳ ಮೇಲೆ ಹಿಡಿತ ಹೊಂದಿರುವ ಇವರು ಸುಮಾರು 20 ನಾಟಕಗಳಲ್ಲಿ ಭಾಗವಹಿಸಿದ್ದಾರೆ.

  2008 ರಲ್ಲಿ ತೆರೆಕಂಡ `ವೀರಪರಂಪರೆ' ಚಿತ್ರದ ಮೂಲಕ ಬೆಳ್ಳಿತೆರೆಯ ಪಯಣ ಆರಂಭಿಸಿದ ಭಾಸ್ಕರ್ ಮುಂದೆ `ವಾರೆ ವಾ',`ಮುಂಜಾನೆ',`ಒಂದು ಕ್ಷಣದಲ್ಲಿಯೆ',`ಅನೆಪಟಾಕಿ',`ಕೆಂಪಿರ್ವೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಟ್ರೇನಿಂಗ್ ಗಾಗಿ ಮುಂಬೈಗೆ ಹೋದಾಗ ಅಲ್ಲಿನ ಉರ್ದು ನಾಟಕದಲ್ಲಿ ನಟಿಸುತ್ತಿದ್ದ ಇವರ ಅಭಿನಯ ಕಂಡು ಪ್ರಭಾವಿತರಾದ ನೀರಜ್ ಪಾಂಡೆ ತಮ್ಮ `ಎಂ.ಎಸ್.ಧೋನಿ' ಚಿತ್ರದ ಮೂಲಕ ಬಾಲಿವುಡ್ ಗೆ ಪರಿಚಯಿಸಿದರು. ಮುಂದೆ `ನಾಮ ಶಬಾನಾ' ಚಿತ್ರದಲ್ಲಿಯೂ ನಟಿಸಿದರು.

  ವೃತ್ತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮ್ಯಾನೇಜರ್ ಆಗಿರುವ ಭಾಸ್ಕರ್ ನಟನೆಗಾಗಿ ಕೇರಳದಲ್ಲಿ `ನವರಸ ಸಾಧನ' ಎಂಬ ಕೋರ್ಸ ಕೂಡ ಮಾಡಿದ್ದಾರೆ.

   

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X