1988 ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕೆಲ ಚಿತ್ರಗಳಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸಿದರೂ, ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು 2007 ರಲ್ಲಿ ತೆರೆಕಂಡ ಲೈಫ್ ಇನ್ ಮೆಟ್ರೋ ಚಿತ್ರ. 2011 ರಲ್ಲಿ ತೆರೆಕಂಡ ಪಾನ್ ಸಿಂಗ್ ತೋಮರ್ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ಸ್ ಫೇರ್ ಕ್ರಿಟಿಕ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಲಂಚ್ ಬಾಕ್ಸ್, ಹೈದರ್, ಪೀಕು ,ತಲ್ವಾರ್ ಮುಂತಾದ ಚಿತ್ರಗಳು ಇರ್ಫಾನ್ ಖಾನ್ ಗೆ ಒಳ್ಳೆ ಹೆಸರು ತಂದು ಕೊಟ್ಟಿತು. 2017 ರಲ್ಲಿ ತೆರೆಕಂಡ ಹಿಂದಿ ಮೀಡಿಯಂ ಚಿತ್ರ ಉತ್ತಮ ವಿಮರ್ಶೆ ಪಡೆದು ಬಾಕ್ಸಾಫೀಸಿನಲ್ಲಿ 320 ಕೋಟಿಗೂ ಅಧಿಕ ಹಣ ಗಳಿಸಿತು.
2018 ರಲ್ಲಿ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಗೆ ತುತ್ತಾದರು. ಕರುಳಿನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್ ಖಾನ್ 2020 ಎಪ್ರಿಲ್ 29 ರಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು.
ಇರ್ಫಾನ್ ಖಾನ್ ನಟಿಸಿದ ಇಂಗ್ಲೀಷ್ ಚಿತ್ರಗಳು
1. The Warrior (2001)
2. The Namesake (2006)
3. The Darjeeling Limited (2007)
4. Slumdog Millionaire (2008)
5. New York, I Love You (2009)
6. The Amazing Spider-Man (2012)
7. Life of Pi (2012)
8. Jurassic World (2015)
9. Inferno (2016)