twitter
    Celebs»Kelly Dorji»Biography

    ಕೆಲ್ಲಿ ಡಾರ್ಜಿ ಜೀವನಚರಿತ್ರೆ

    ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಖಡಕ್ ಅಭಿನಯದಿಂದ ಖಳನಾಯಕನ ಪಾತ್ರಗಳನ್ನು ಬೆಳಗುತ್ತಿರುವ ಪ್ರತಿಭೆ ಕೆಲ್ಲಿ ಡಾರ್ಜಿ. ಪ್ರಸ್ತುತ ದಕ್ಷಿಣ ಚಿತ್ರರಂಗದ ಬೇಡಿಕೆಯ ನಟರಾಗಿರುವ ಇವರು ನೆಲೆಸಿರುವುದು ಮುಂಬೈನಲ್ಲಿ. ಇವರು ಮೂಲತಃ ಭೂತಾನ್ ದೇಶದವರು.1975, ಜನೇವರಿ 4 ರಂದು ಭೂತಾನ್‌ದ ಥಿಂಪುವಿನಲ್ಲಿ ಜನಿಸಿದರು. ಟಿಬೆಟ್ ಮುಕ್ತಿಗಾಗಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಈ ನಟನ ಪೂರ್ವಜರು ಟಿಬೆಟ್‌ನಿಂದ ನಿರಾಶ್ರಿತರಾಗಿ ಭೂತಾನ್‌ಗೆ ಬಂದವರು. ಇವರ ತಾಯಿ ರಷ್ಯನ್ ಮೂಲದವರು.ದಲೈ ಲಾಮಾ ಅನುಯಾಯಿಯಾಗಿರುವ ಇವರು ಭೌದ್ಧಧರ್ಮವನ್ನು ಅನುಸರಿಸುತ್ತಾರೆ.

    ವಿಧ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದ ಕೆಲ್ಲಿ, ಡಾರ್ಜಲಿಂಗ್‌ನ ಸೇಂಟ್ ಪೌಲ್ ಶಾಲೆ ಸೇರಿದರು.ನಂತರ ಉನ್ನತ ವ್ಯಾಸಂಗಕ್ಕಾಗಿ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜು ಸೇರಿದರು. ಇಲ್ಲಿಯೇ ಇವರಿಗೆ ನಟಿ ಮತ್ತು ಮಾಜಿ ವಿಶ್ವಸುಂದರಿ ಲಾರಾ ದತ್ತ ಪರಿಚಯವಾದದ್ದು. ಸುಮಾರು ಒಂಭತ್ತು ವರ್ಷಗಳ ಕಾಲ ಕೆಲ್ಲಿ-ಲಾರಾ ಜೋಡಿ ಡೇಟಿಂಗ್ ಮಾಡಿದ್ದರು. ಇದೇ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ರಸ್ನಾ ಬೇಲ್ ಎಂಬ ಮಾಡೆಲಿಂಗ್ ಕೋ-ಆರ್ಡಿನೇಟರ್ ಇವರನ್ನು ಮಾಡೆಲಿಂಗ್ ಪ್ರಾಜೆಕ್ಟ್ ಗೆ ಆಫರ್ ನೀಡಿದರು. ಇಲ್ಲಿಂದ ಹಲವಾರು ಮಾಡೆಲಿಂಗ್ ಜಾಹೀರಾತುಗಳಲ್ಲಿ ಬಾಗವಹಿಸಿದರು. ಸ್ಟಾರ್ ಮೂವೀಸ್‌ನಲ್ಲಿ ಕೆಲ್ಲಿ ಮತ್ತು ಲೀಸಾ ರೇ ನೆಡೆಸಿಕೊಡುತ್ತಿದ್ದ `ಸ್ಟಾರ್ ಬಿಜ್' ಕಾರ್ಯಕ್ರಮ ತುಂಬಾ ಜನಪ್ರಿತೆ ಗಳಿಸಿತ್ತು. ಆದರೆ ಇವರ ಮುಖ್ಯವಾಹಿನಿಗೆ ಬಂದಿದ್ದು ಇಂಡಿಯಾದ ಪ್ರತಿಷ್ಠಿತ ಮಾಗಜೀನ್ ಗ್ಲಾಡ್ರಗ್ಸ್ ಮ್ಯಾನಹಂಟ್ ಸ್ಪರ್ಧೆಯ ಮೂಲಕ. ಇಲ್ಲಿಂದ ಇವರಿಗೆ ಚಿತ್ರಗಳಲ್ಲಿ ನಟಿಸಲು ಆಫರ್ ಬರತೊಡಗಿತು.

    ಶಾಮಿನ್ ದೇಸಾಯಿ ನಿರ್ದೇಶನದ ಆಫ್‌ಬೀಟ್ ಚಿತ್ರ `ಅರೋವಿಲ್ಲೆ 316' ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ನಂತರ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಮೇಲೆ 2007 ರಲ್ಲಿ ನಾಗಾರ್ಜುನರ `ಡಾನ್' ಚಿತ್ರದ ಮೂಲಕ ದಕ್ಷಿಣ ಚಿತ್ರರಂಗ ಪ್ರವೇಶಿಸಿದರು. ಕನ್ನಡದಲ್ಲಿ ಪುನೀತ್ ರಾಜಕುಮಾರ್‌ರವರ `ಪವರ್' ಮತ್ತು ದರ್ಶನ್‌ರ `ಅಂಬರೀಶ್' ಚಿತ್ರಗಳಲ್ಲಿ ನಟಿಸಿದ್ದಾರೆ.

    ನಟಿಸಿದ ಚಿತ್ರಗಳು

    ಪವರ್

     

    ಅಂಬರೀಶ್

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X