ನಿರೋಶಾ 90 ರ ದಶಕದಲ್ಲಿ ಕನ್ನಡ,ತೆಲಗು,ತಮಿಳು,ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಮುದ್ದುಮುಖದ ನಟಿ. ಚತುರ್ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿದ್ದಾರೆ.
ಶ್ರೀಲಂಕಾದ ಕೊಲೊಂಬೋದಲ್ಲಿ 1968 ರಲ್ಲಿ ಜನಿಸಿದ ಇವರು ತಮಿಳು ಹಾಸ್ಯನಟ ಎಮ್.ಆರ್.ರಾಧಾರವರ ಕಿರಿಯ ಪುತ್ರಿ.ಇವರು ಹಿರಿಯ ಸಹೋದರಿ ರಾಧಿಕಾ ಶರತ್‌ಕುಮಾರ ಕೂಡ ನಟಿಯಾಗಿ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧರು. 1988 ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ತಮಿಳಿನ ಬ್ಲಾಕಬ್ಲಸ್ಟರ್ ಚಿತ್ರ `ಅಗ್ನಿ ನಚ್ಚತಿರಮ' ಚಿತ್ರದಿಂದ ಸಿನಮಾ ರಂಗ ಪ್ರವೇಶಿಸಿದರು. ನಂತರ ಹಲವು ತಮಿಳು,ತೆಲಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿದರು.
ಶಶಿಕುಮಾರ್ ನಾಯಕನಾಗಿ ನಟಿಸಿದ 1991 ರಲ್ಲಿ ತೆರೆಕಂಡ `ಇಬ್ಬರು ಹೆಂಡಿರ ಮುದ್ದಿನ ಪೋಲಿಸ್' ಚಿತ್ರದಿಂದ ಕನ್ನಡ ಸಿನಮಾ ರಂಗಕ್ಕೆ ಬಂದರು. ನಂತರ `ಮಿಡಿದ ಹೃದಯಗಳು',`ಲಾಕಪ್ ಡೆತ್',`ಗಂಡುಗಲಿ' ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದರು. ಮಿಡಿದ ಹೃದಯಗಳು ಚಿತ್ರದಲ್ಲಿನ ಇವರ ಅಭಿನಯ ಇಂದಿಗೂ ಹಸಿರಾಗಿದೆ.
ತಮಿಳು ಮತ್ತು ತೆಲಗು ನಟ ರಾಮಕೃಷ್ಣನ್ (ರಾಮಕಿ)ರನ್ನು 1995 ರಲ್ಲಿ ಮದುವೆಯಾದ ನಂತರ ಕೆಲಕಾಲ ಚಿತ್ರರಂಗದಿಂದ ದೂರ ಉಳಿದರು. 2000 ದಿಂದ ಕೆಲ ತಮಿಳು ಮತ್ತು ತೆಲಗು ಸೀರಿಯಲ್‌ಗಳಲ್ಲಿ ನಟಿಸತೊಡಗಿದರು.2003 ರಿಂದ ಮತ್ತೆ ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸತೊಡಗಿದರು.
2013 ರಲ್ಲಿ ತೆರೆಕಂಡ ದರ್ಶನ್‌ರ ಬೃಂದಾವನ ಚಿತ್ರದ ಮೂಲಕ ಮತ್ತೇ ಕನ್ನಡಕ್ಕೆ ಬಂದರು.
ನಂದಿ ಸ್ಪೆಷಲ್ ಜ್ಯೂರಿ ಅವಾರ್ಡ ಪಡೆದಿರುವ ಇವರು ಪ್ರಸ್ತುತ ಪತಿಯೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ.
ನಟಿಸಿದ ಮೊದಲ ಚಿತ್ರಗಳು
ಕನ್ನಡ - ಇಬ್ಬರು ಹೆಂಡಿರ ಮುದ್ದಿನ ಪೋಲಿಸ್ (1991)
ತಮಿಳು - ಅಗ್ನಿ ನಚ್ಚತಿರಾಮ್ (1988)
ತೆಲುಗು- ಘರ್ಷಣಾ (1988)
ಮಲಯಾಳಂ- ಅರ್ಜುನ ಡೆನ್ನಿಸ್ (1988)