twitter
    Celebs»Prem Kumar»Biography

    ಪ್ರೇಮ್ ಕುಮಾರ್ ಜೀವನಚರಿತ್ರೆ

    ಲವ್ಲೀ ಸ್ಟಾರ್ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರವ ಪ್ರಮುಖ ನಟ. 1976, ಎಪ್ರಿಲ್ 18 ರಂದು ಜನಿಸಿದ ಪ್ರೇಮ್ ರ ಬಾಲ್ಯ ವಿಧ್ಯಾಭ್ಯಾಸ ಎಲ್ಲಾ ಬೆಂಗಳೂರಿನಲ್ಲಿ ಮುಗಿಯಿತು.

    ಶಿಕ್ಷಣದ ನಂತರ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದ್ದ ಪ್ರೇಮ್ ವಾರಕ್ಕೆ ಕನಿಷ್ಟ ಏನಿಲ್ಲವೆಂದರೂ ಮೂರು ನಾಲ್ಕು ಚಿತ್ರಗಳನ್ನು ನೋಡಿತ್ತಿದ್ದರು ಮತ್ತು ಸಿನಿಜಗತ್ತಿನ ಮಾಹಿತಿಯುಳ್ಳ ಹಲವು ಮ್ಯಾಗಝೀನ್ ಮತ್ತು ಪುಸ್ತಕ ಕೊಳ್ಳುತ್ತಿದ್ದರು.


    ನಂತರ ಗೆಳೆಯನ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್‌ ರ `ಮನ್ವಂತರ' ಸೀರಿಯಲ್ ನಲ್ಲಿ ಸಹ ಕಲಾವಿದನಾಗಿ ನಟಿಸಿದರು.ನಂತರ `ಆರ್ಧ ಸತ್ಯ' ಎಂಬ ಇನ್ನೊಂದು ಸೀರಿಯಲ್ ನ್ಲಲಿ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಂಡರು.


    2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು. ಆದರೆ ಈ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ವಿಯಾಗಲಿಲ್ಲ. ಮುಂದಿನ ವರ್ಷವೇ ತೆರೆಕಂಡ `ನೆನಪಿರಲಿ' ಚಿತ್ರ ಪ್ರೇಮ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ನಂತರ ತೆರೆಗೆ ಬಂದ `ಜೊತೆ ಜೊತೆಯಲಿ' ಚಿತ್ರ 25 ವಾರಗಳಿಗೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆಯಿತು. ನಂತರ ಬಂದ ಪಲ್ಲಕ್ಕಿ ಚಿತ್ರ ಕೂಡ ನೂರು ದಿನ ಪ್ರದರ್ಶನ ಕಂಡಿತು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X