ರವಿ ಬೆಳೆಗೆರೆ ಜೀವನಚರಿತ್ರೆ

  ರವಿ ಬೆಳಗೆರೆ ಕರ್ನಾಟಕದ ಪ್ರಮುಖ ಪತ್ರಿಕೋದ್ಯಮಿ ಮತ್ತು ಸಾಹಿತಿ. ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಜನಿಸಿರುವ ಇವರು ಇತಿಹಾಸ ಉಪನ್ಯಾಸಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ವೃತ್ತಿಜೀವನದ ಆರಂಭದಲ್ಲಿ ಆರ್ಥಿಕ ತೊಂದರೆಗಳಿಂದ ಹಲವಾರು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದ ಇವರು ನಂತರ 1995 ರಲ್ಲಿ ಬೆಂಗಳೂರಿಗೆ ಬಂದು ಹಲವು ಸ್ನೇಹಿತರ ಸಹಾಯದಿಂದ `ಹೈ ಬೆಂಗಳೂರು' ಪತ್ರಿಕೆ ಆರಂಭಿಸಿದರು. ಭೂಗತ ಲೋಕದ ಹಲವಾರು ಮುಖಗಳನ್ನು ತೆರದಿಟ್ಟ ಈ ಪತ್ರಿಕೆ ಕೆಲವೇ ದಿನಗಳಲ್ಲಿ ಜನಪ್ರಿಯವಾಯಿತು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು

  ಬಾಲ್ಯದಲ್ಲಿ ಕಷ್ಟವಾದಾಗ ಮನೆಮನೆಗೆ ಹಾಲು ಹಾಕಿದ್ದುಂಟು. ಹಾಗೇ ದೇವರನ್ನು ಹುಡಕಬೇಕೆಂದು ಹಿಮಾಲಕ್ಕೆ ಕೂಡ ಹೋಗಿದ್ದುಂಟು. ಉಪನ್ಯಾಸಕರಾಗಿ 120 ರೂಪಾಯಿ ಸಂಬಳದಿಂದ ಮನೆ ಹೊರೆಯುತ್ತಿದ್ದ ರವಿ ಬೆಳೆಗೆರೆ ಇಂದು ಬೆಂಗಳೂರಿನಲ್ಲಿ ಪ್ರಾರ್ಥನಾ ಎಂಬ ಶಾಲೆಯನ್ನು ತೆರೆದಿದ್ದಾರೆ.

  ನಂತರ ಯುವ ಮನಸ್ಸುಗಳಿಗಾಗಿ `ಓ ಮನಸೇ' ಪತ್ರಿಕೆ ಆರಂಭಿಸಿದರು. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕ್ರೈಂ ಡೈರಿ' ಶೋ ಇವರಿಗೆ ತುಂಬಾ ಹೆಸರು ತಂದು ಕೊಟ್ಟಿತು. ಸುಮಾರು 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇದರಲ್ಲಿ ಕೆಲವು ಪುಸ್ತಕಗಳು ತುಂಬಾ ವಿವಾದಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಟಿವಿ ಕನ್ನಡದಲ್ಲಿ ಇವರ ನಿರೂಪಣೆಯ `ಎಂದೂ ಮರೆಯದ ಹಾಡು' ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾಗಿತ್ತು.

  ಕೆಲವು ಕಿರುತೆರೆ ಮತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಪತ್ನಿಯ ಮಗಳಾದ ಭಾವನಾ ಕನ್ನಡ ಚಿತ್ರನಟ ಶ್ರೀನಗರ ಕಿಟ್ಟಿಯವರನ್ನು ವರಿಸಿದ್ದಾರೆ. ಕೆಲವು ಆಪಾದನೆ ಮತ್ತು ವಿವಾದಗಳಿಂದ ಸುದ್ಧಿಯಾಗಿರುವ ಇವರು 2017 ರಲ್ಲಿ ಕೊಲೆ ಆರೋಪದ ಮೇಲೆ ತಾತ್ಕಾಲಿಕ ಬಂಧನಕ್ಕೊಳಪಟ್ಟಿದ್ದರು.

  2020, ನವೆಂಬರ್ 13 ರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X