twitter
    Celebs»Vani Jayaram»Biography

    ವಾಣಿ ಜಯರಾಮ್ ಜೀವನಚರಿತ್ರೆ

    ವಾಣಿ ಜಯರಾಂ ಪ್ರಸಿದ್ಧ ಹಿನ್ನೆಲೆ ಗಾಯಕಿ. ಇವರು ಕನ್ನಡ, ಹಿಂದಿ ತೆಲುಗು, ತಮಿಳು, ಉರ್ದು, ತುಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ ಮತ್ತು ಬೆಂಗಾಲಿ ಭಾಷೆ  ಸುಮಾರು 10,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ವಾಣಿ ಜಯರಾಂ ಮೂರು ಬಾರಿ 'ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಜೊತೆಗೆ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 


    ಬಾಲ್ಯಜೀವನ 

    ವಾಣಿ ಜಯರಾಂ 1945ರ ನವೆಂಬರ್ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಇವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸರಾದ ರಂಗ ರಾಮಾನುಜ ಅಯಂಗಾರ್ ಅವರ ಶಿಷ್ಯೆ. ಹಾಗಾಗಿ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿನಲ್ಲೇ ಇವರು ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತ ಕಲಿಯಲು ಆರಂಭಿಸಿದರು. ೮ನೇ ವಯಸ್ಸಿನಲ್ಲೇ ಇವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ತಿರುವನಂತಪುರದಲ್ಲಿ ೩ ಗಂಟೆಗಳ ಕಾಲ ಸಂಗೀತ ಕಚೇರಿ ನಡಿಸಿದಾಗ ಅವರಿಗೆ ಕೇವಲ ಹತ್ತು ವರ್ಷವಾಗಿತ್ತು. ವಾಣಿಯವರು ಬಹುಮುಖ ಪ್ರತಿಭೆಯಾಗಿದ್ದು, ಚಿತ್ರರಚನೆ ಜೊತೆಗೆ ಒಂದಿನಲ್ಲಿಯೂ ಮುಂದಿದ್ದರು. ಇವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 

      

    ಚಿತ್ರರಂಗ ಪ್ರವೇಶ 

    ಇಂಡೋ-ಬೆಲ್ಜಿಯಂ ಛೇಂಬರ್ ಆ ಕಾಮರ್ಸ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ವಾಣಿ ಅವರು, ಜಯರಾಂ ಅವರೊಂದಿಗೆ ವಿವಾಹವಾದರು. ಮದುವೆ ನಂತರ ಈ ದಂಪತಿ ಮುಂಬೈನಲ್ಲೇ ನೆಲಸಿದರು. ಬಳಿಕ ಪತ್ನಿಯ ಪ್ರತಿಭೆಗೆ ಜಯರಾಂ ಅವರು, ವಾಣಿ ಅವರಿಗೆ ಪಟಿಯಾಲಾ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ತಾನಿ ಸಂಗೀತ ಕಳಿಸಿದರು. ಇಲ್ಲಿ ಇವರ ಕಂಠಸಿರಿಗೆ ಮಾರುಹೋದ ಮರಾಠಿ ಸಿನಿಮಾ ನಿರ್ದೇಶಕ ವಸಂತ ದೇಸಾಯಿ, ತಮ್ಮ ಚಿತ್ರ ' ಅಮ್ಮ ತಾಯಿ ಗೋಡೆ'ಯಲ್ಲಿ ಹಾಡುವ ಅವಕಾಶ ಕೊಟ್ಟರು. ಈ ಚಿತ್ರದ ಗಾಯನ ಮೆಚ್ಚಿಕೊಂಡ ಹಿಂದಿ ಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ತಮ್ಮ 'ಗುಡ್ಡಿ' ಸಿನಿಮಾದಲ್ಲಿ ಹಾಡಿಸಿದರು. ಈ ಸಿನಿಮಾದ ' ಬೋಲ್ ರೇ ಪಪ್ಪೀ ಹರ' ಹಾಡು ದೇಶದಾದ್ಯಂತ ಸಂಚಲನ ಉಂಟು ಮಾಡಿ, ವಾಣಿ ಜಯರಾಂ ಅವರಿಗೆ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತು.  


    ಕನ್ನಡದಲ್ಲಿ 850 ಗೀತೆಗಳನ್ನು ಹಾಡಿದ್ದರು.  

    1973ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾಣಿ ಜಯರಾಂ ೯೦ ದಶಕದ ಆದಿಯವರೆಗೂ ಹಾಡುಗಳನ್ನು ಹಾಡಿದ್ದಾರೆ. ಅವರು ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ 'ಛಲಗಾರ' ತೆರೆಕಾಣಲಿಲ್ಲ. ನಂತರ ಕೌಬಾಯ್ ಕುಳ್ಳ, ಕೆಸರಿನ ಕಮಲ, ಉಪಾಸನೆ, ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳಿ ಹೆಂಡ್ತಿ ಮೊದಲಾದ ಸಿನಿಮಾಗಳಲ್ಲಿ ಹಾಡಿದ್ದಾರೆ. ವಾಣಿ ಜಯರಾಂ ಕನ್ನಡದಲ್ಲಿ 850 ಗೀತೆಗಳನ್ನು ಹಾಡಿದ್ದಾರೆ. 


    ನಿಧನ: ಇವರು 2023ರ ಫೆಬ್ರವರಿ 4ರಂದು ಚನೈನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X